ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಲು ನಿರ್ಧರಿಸಿದೆ. ಈ ಮೂಲಕ ಸಾಂಸ್ಕೃತಿಕ ಕ್ರಾಂತಿ ಮಾಡಲು ನಿರ್ಧರಿಸಿದೆ.
2/ 8
ಅದರಲ್ಲೂ ಮುಖ್ಯವಾಗಿ ನಮ್ಮ ನಾಡಿನ ಕಲೆ ಹಾಗೂ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಹೈಸ್ಕೂಲ್ ಮಕ್ಕಳಿಗೆ ಈ ಕುರಿತು ತರಬೇತಿ ನೀಡಲು ಮುಂದಾಗಿದೆ. ಹಾಗು ಹಲವಾರು ಜನ ಯಕ್ಷಗಾನ ಕಲಾವಿದರನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಕಾರ್ಯಾರಂಭವಾಗಲಿದೆ.
3/ 8
ಯಕ್ಷಗಾನ ಪರಂಪರೆ ಉಳಿಸುವ ವಿಶೇಷ ಪ್ರಯತ್ನ ಶಿಕ್ಷಣ ಕ್ಷೇತ್ರದಲ್ಲೇ ಇದೊಂದು ಅಪರೂಪದ ಪ್ರಯೋವಾಗಿದ್ದು ಇದೇ ಮೊದಲ ಬಾರಿಗೆ ಈ ರೀತಿ ಪ್ರಯೋಗ ಉಡುಪಿಯಲ್ಲಿ ಮಾಡಲಾಗುತ್ತಿದೆ.
4/ 8
ಉಡುಪಿ ವಿಧಾನಸಭಾ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ನೀಡಲಾಗುತ್ತಿದೆ. ಈ ವರ್ಷ ಸಾವಿರದ ಐನೂರಕ್ಕೂ ಅಧಿಕ ವಿದ್ಯಾರ್ಥಿಗಳು ಯಕ್ಷಗಾನ ಕಲಾವಿದರಾಗಿ ರೂಪುಗೊಂಡಿದ್ದಾರೆ ಎಂದು ತಿಳಿದುಬಂದಿದೆ.
5/ 8
ಉಡುಪಿ ವಿಧಾನಸಭಾ ಕ್ಷೇತ್ರದ ಹೈಸ್ಕೂಲ್ ಶಿಕ್ಷಣದ ಗುಣಮಟ್ಟದಲ್ಲಿ ಗಣನೀಯವಾದ ಬದಲಾವಣೆ ಕೂಡ ಕಂಡು ಬಂದಿದ್ದು ಕಳೆದೊಂದು ದಶಕದಿಂದ ಈ ಪ್ರಗತಿ ಕಂಡು ಬಂದಿದೆ ಇದಕ್ಕೆ ಕಾರಣ ಮಕ್ಕಳ ಯಕ್ಷಾಸಕ್ತಿಯಾಗಿದೆ.
6/ 8
ಕ್ಷೇತ್ರದ ಎಲ್ಲಾ ಪ್ರೌಢಶಾಲೆಗಳಲ್ಲಿ ತರಗತಿ ಮುಗಿದ ನಂತರ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ವಿಶೇಷ ಪಠ್ಯವಾಗಿ ಕಲಿಸಲಾಗುತ್ತಿದೆ.
7/ 8
ರಾಜ್ಯದಲ್ಲೇ ಪ್ರಥಮ ಎಂಬಂತೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಈ ಪ್ರಯೋಗ ನಡೆದಿದೆ. ಸುಮಾರು 30 ಕ್ಕೂ ಅಧಿಕ ಯಕ್ಷಗಾನ ಶಿಕ್ಷಕರು, ಸಾವಿರದ ಐನೂರಕ್ಕೂ ಅಧಿಕ ಮಕ್ಕಳಿಗೆ ಯಕ್ಷಗಾನ ಕಲಿಸುತ್ತಿದ್ದಾರೆ.
8/ 8
30 ಮಂದಿ ಶಿಕ್ಷಕರನ್ನು ಇದಕ್ಕಂತಲೇ ನಿಯೋಜಿಸಲಾಗಿದೆ. ಯಕ್ಷಶಿಕ್ಷಣ ಟ್ರಸ್ಟ್ ಮೂಲಕ ಸಂಪೂರ್ಣ ವ್ಯವಸ್ಥೆಯನ್ನು ನಿಯಂತ್ರಿಸಲಾಗುತ್ತಿದೆ. ಜಾತಿ ಮತ, ಲಿಂಗ ಬೇಧವಿಲ್ಲದೆ ಎಲ್ಲಾ ವರ್ಗದ, ಎಲ್ಲಾ ಧರ್ಮದ ವಿದ್ಯಾರ್ಥಿಗಳು ಈ ಪಾರಂಪರಿಕ ಕಲೆಯನ್ನು ಅಭ್ಯಾಸ ಮಾಡುತ್ತಾರೆ.