Winter Holiday: ಕೋಲಾರದ ಶಾಲೆಗಳಿಗೆ ರಜೆ ಘೋಷಣೆ, ಮುಂದುವರೆದ ಚಳಿ, ಮಳೆ!
ನಿನ್ನೆಯಷ್ಟೇ ಕೋಲಾರ ಜಿಲ್ಲೆಯಲ್ಲಿ KGF ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು ಅದು ಇಂದಿಗೂ ಮುಂದುವರೆದಿದೆ. ಕ್ಷೇತ್ರ ಶಿಕ್ಷಣಾದಿಕಾರಿ ಚಂದ್ರಶೇಖರ್ ರಜೆಯನ್ನು ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ
ಕೋಲಾರದಲ್ಲಿ ಮಾಂಡೌಂಸ್ ಚಂಡಮಾರುತ ಎಫೆಕ್ಟ್ ನಿಂದ ಬೆಳ್ಳಂ ಬೆಳಗ್ಗೆ ಜಿಟಿ ಜಿಟಿ ಮಳೆ ಕಾಣಿಸಿಕೊಂಡಿದ್ದು ಜನರು ಹಾಗೂ ವಿದ್ಯಾರ್ಥಿಗಳು ಚಳಿಗಾಲವೋ? ಮಳೆಗಾಲವೋ? ತಿಳಿಯದಂತಾಗಿದೆ ಎನ್ನುತ್ತಿದ್ದಾರೆ. ವಾತಾವರಣ ಹದಗೆಟ್ಟಿದೆ.
2/ 7
ಕೋಲಾರದಲ್ಲಿ ಬೆಳ್ಳಂ ಬೆಳಗ್ಗೆ ಜಿಟಿ ಜಿಟಿ ಮಳೆಯಿಂದ ಶೀತಗಾಳಿ, ಚಳಿ, ಮಳೆಗೆಯಿಂದಾಗಿ ಬಯಲುಸೀಮೆ ಕೋಲಾರದ ಜನತೆ ನಡುಗುತ್ತಿದ್ದಾರೆ. ಇಷ್ಟು ಚಳಿ ಅಲ್ಲಿ ಕಾಣಿಸಿಕೊಂಡಿರಲಿಲ್ಲ.
3/ 7
ಮಕ್ಕಳ ಆರೋಗ್ಯ ಹಿತ ದೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಚಳಿಗೆ ಮುಂಜಾಗ್ರತೆ ವಹಿಸಿ ಪಾಲಕರು ಮಕ್ಕಳ ಆರೋಗ್ಯದ ಮೇಲೆ ಗಮನಹರಿಸಲು ಸೂಚಿಸಲಾಗಿದೆ.
4/ 7
ನಿನ್ನೆಯಷ್ಟೇ ಕೋಲಾರ ಜಿಲ್ಲೆಯಲ್ಲಿ KGF ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು ಅದು ಇಂದಿಗೂ ಮುಂದುವರೆದಿದೆ. ಕ್ಷೇತ್ರ ಶಿಕ್ಷಣಾದಿಕಾರಿ ಚಂದ್ರಶೇಖರ್ ರಜೆಯನ್ನು ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ
5/ 7
ಬರದ ನಾಡು ಕೋಲಾರ ಈಗ ಮಲೆನಾಡಿನಂತಾಗಿದೆ. ಟಮೋಟೋ, ಅಲೂಗಡ್ಡೆ ಹೂ ಬೆಳೆ ಬೆಳೆಗಳು ಭಾಗಶಃ ನಾಶವಾಗಿದ್ದು ರೈತರನ್ನು ಸಂಕಷ್ಟಕ್ಕೀಡಾಗಿಸಿದೆ. ಆದರೂ ಚಳಿ, ಮಳೆಯಲ್ಲೇ ವ್ಯಾಪಾರ ವಹಿವಾಟು ಎಂದಿನಂತೆ ಆರಂಭವಾಗಿದೆ.
6/ 7
ಕಳೆದ ಎರಡು ಮೂರು ದಿನಗಳಿಂದ ಜಿನುಗುವ ಮಳೆ ಹಾಗೂ ಚಳಿಯಿಂದ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಆರೋಗ್ಯದ ಹಿತ ದೃಷ್ಟಿಯಿಂದ ಶಾಲೆಗಳಿಗೆ ರಜೆ ನೀಡಲಾಗಿದೆ.
7/ 7
ಇನ್ನೆಷ್ಟು ದಿನಗಳ ಕಾಲ ಈ ರೀತಿಯ ವಾತಾವರಣ ಮುಂದುವರಿಯುತ್ತದೆ ಎಂಬುದು ತಿಳಿಯದಂತಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಮುಖ್ಯವಾಗಿರುವುದರಿಂದ ಶಾಲೆಗಳಿಗೆ ರಜೆ ನೀಡಲಾಗಿದೆ.