ಪಾಲಕರು ಬೇಬಿಸಿಟ್ಟರ್ಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಾರೆ. ಇದಕ್ಕೆಲ್ಲಾ ಕಾರಣ ಪಾಲಕರಿಗಿರುವ ಒತ್ತಡ ಆದರೆ ಮಕ್ಕಳನ್ನು ಮನೆಯಲ್ಲೇ ಇಟ್ಟುಕೊಂಡು ಅವರಿಗೆ ಅಗತ್ಯವಿರುವ ಪ್ರಾಥಮಿಕ ಶಿಕ್ಷಣ ಪಾಲಕರಿಂದಲೇ ಸಿಗಬೇಕಿತ್ತು. ಒತ್ತಡದ ಜೀವನದಿಂದಾಗಿ ಅದು ಲಭ್ಯವಾಗುತ್ತಿಲ್ಲ.
2/ 7
ಆದರೆ ನಿಮ್ಮ ಮಕ್ಕಳು ಇಲ್ಲಿ ಕಲಿಯುವ ಕೆಲವು ಅಂಶಗಳೂ ಸಹ ಅವರ ಜೀವನಕ್ಕೆ ಮುಖ್ಯವಾಗಿರುತ್ತದೆ. ಈಗೆಲ್ಲಾ ಒಂದೊಂದೇ ಮಕ್ಕಳಿರುವುದರಿಂದ ಆಟ ಆಡಲು ಯಾರೂ ಇಲ್ಲದೆ ಮಕ್ಕಳು ಮಂಕಾಗುವ ಸಾಧ್ಯತೆ ಇರುತ್ತದೆ ಅದನ್ನು ತಪ್ಪಿಸಲು ಮಕ್ಕಳನ್ನು ಬೇಬಿಸಿಟ್ಟರ್ಗಳಿಗೆ ಕಳಿಸುವ ಅವಶ್ಯಕತೆ ಇರುತ್ತದೆ.
3/ 7
ನಿಮ್ಮ ಮಕ್ಕಳು ಇದ್ದಾಗ ಮಾಡಲಾಗದ ಎಷ್ಟೋ ಕೆಲಸವನ್ನು ನೀವು ಈ ಸಮಯದಲ್ಲಿ ಮಾಡಬಹುದು. ಯೋಗ ತರಗತಿಯನ್ನು ತೆಗೆದುಕೊಳ್ಳಿ, ಓಟಕ್ಕೆ ಹೋಗಿ ಅಥವಾ ನೀವು ಇಷ್ಟಪಡುವ ಹವ್ಯಾಸವನ್ನು ಮಾಡಲು ಸಮಯ ಪಡೆದುಕೊಳ್ಳಿ.
4/ 7
ಶಿಶುಪಾಲನಾ ಕೇಂದ್ರವು ಮಗುವಿನ ಬೆಳವಣಿಗೆ ಕಾರಣವಾಗುತ್ತದೆ. ಅವರು ಆಟವಾಡಲು ಮತ್ತು ಇತರ ವಸ್ತುಗಳನ್ನು ಗುರುತಿಸಲು ಮಕ್ಕಳು ಕಲಿಯುತ್ತಾರೆ ಇತರ ಪುಟ್ಟ ಮಕ್ಕಳೊಂದಿಗೆ ಬೆರೆಯುವ ಸಾಮರ್ಥ್ಯ ಹೊಂದುತ್ತಾರೆ.
5/ 7
ಒಬ್ಬ ಪಾಲಕರಾಗಿ ಮೊದಲು ಮಗುವಿನ ಅಗತ್ಯ ಏನಿದೆಯೋ ಅದನ್ನು ಪೂರೈಸ ಬೇಕು. ಆ ಕಾರಣಕ್ಕೆ ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ಅವರು ಮೊದಲು ತೊದಲು ನುಡಿ ಆಡುತ್ತಿದ್ದಾಗಲೇ ಅವರಿಗೆ ಪಾಠ ಹೇಳಿಕೊಡುವುದು ಬಣ್ಣ ಗುರುತಿಸಲು ಕಲಿಸುವುದು ಮುಖ್ಯ.
6/ 7
ನೀವು ಹೊರಗೆ ಹೋಗುವಾಗ ಹತ್ತಿರದಲ್ಲಿ ವಾಸಿಸುವ ಸ್ನೇಹಿತ ಅಥವಾ ಸಂಬಂಧಿಕರು ನಿಮ್ಮ ಮಗುವನ್ನು ನೋಡಿಕೊಳ್ಳಬಹುದು. ಆದರೆ ಅದಕ್ಕಿಂತ ಬೇಬಿಸಿಟ್ಟರ್ಗೆ ಕಳಿಸುವುದು ಸುರಕ್ಷಿತ.
7/ 7
ನಿಮ್ಮ ಮಕ್ಕಳ ಆರಂಭಿಕ ಆಸಕ್ತಿ ಯಾವ ವಿಷಯದ ಮೇಲಿರುತ್ತದೆ ಎಂಬುದನ್ನು ಕಂಡುಕೊಳ್ಳಲು ಇದು ಪ್ರಾಥಮಿಕ ಹಂತದ ಶಿಕ್ಷಣವಾಗಿರುತ್ತದೆ. ನೀವು ನಿಮ್ಮ ಮಕ್ಕಳನ್ನು ಶಿಶುಪಾಲನಾ ಗೃಹಕ್ಕೆ ಕಳುಹಿಸಬಹುದು.