PUC ಪೂರ್ವಸಿದ್ಧತಾ ಪರೀಕ್ಷೆ ನಡೆಸೋದ್ಯಾಕೆ? ಇಲ್ಲಿದೆ ಮಹತ್ವದ ಕಾರಣ
ಕೊನೆ ಕ್ಷಣದಲ್ಲಿ ಉಂಟಾಗುವ ಆತಂಕ ಮತ್ತು ಭಯ ನಿವಾರಿಸುವ ಸಲುವಾಗಿ ಈ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಾಡಲಾಗುತ್ತದೆ. ಪರೀಕ್ಷೆ ಹೇಗೆ ನಡೆಯುತ್ತೆ ಎಂಬ ಪ್ರಾಯೋಗಿಕ ಕಲಿಕೆ ಇದರಿಂದ ಸಾಧ್ಯವಾಗುತ್ತದೆ.
ಪೂರ್ವ ಸಿದ್ಧತಾ ಪರೀಕ್ಷೆಗಳು ಈಗಾಗಲೇ ಆರಂಭದ ಹಂತಕ್ಕೆ ಬಂದು ನಿಂತಿದೆ ವಿದ್ಯಾರ್ಥಿಗಳೆಲ್ಲಾ ಕಾದು ಕುಳಿತ ದಿನ ಹತ್ತಿರ ಬರುತ್ತಿದೆ. ಪರೀಕ್ಷಾ ಸಿದ್ಧತೆ ಎಷ್ಟು ಫಲಕಾರಿಯಾಗಿದೆ ಎಂಬುದನ್ನು ನೀವಿದರಲ್ಲಿ ಕಂಡುಹಿಡಿಯಬಹುದು.
2/ 7
ಅಂತಿಮ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕ ಪಡೆಯುವ ಸಾಧ್ಯತೆ ಇದೆ ಎನ್ನುವ ಒಂದು ನೀಲ ನಕ್ಷೆಯಾಗಿ ಈ ಪರೀಕ್ಷೆ ನಡೆಯುತ್ತದೆ. ಆದ್ದರಿಂದ ಸರಿಯಾಗಿ ಓದಿ ಈ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಲು ಪ್ರಯತ್ನಿಸಿ.
3/ 7
ನೀವು ಪೂರ್ವ ಸಿದ್ಧತಾ ಪರೀಕ್ಷೆಗೆ ಎಷ್ಟು ತಯಾರಿ ನಡೆಸುತ್ತೀರೋ ಅಷ್ಟು ಉತ್ತಮ ಏಕೆಂದರೆ ಅಲ್ಲಿ ನೀವು ತೋರುವ ಸಾಮರ್ಥ್ಯದ ಆಧಾರದ ಮೇಲೆ ಮುಂದಿನ ಅಂಕ ನಿರ್ಧಾರವಾಗುತ್ತದೆ.
4/ 7
ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಪರಿಶ್ರಮವೊಂದೇ ಸಾಧನ ಆದ್ದರಿಂದ ಎಲ್ಲರೂ ಸಹ ಶ್ರಮಪಟ್ಟು ಓದಿ ಹೆಚ್ಚಿನ ಅಂಕ ಗಳಿಸಬೇಕು. ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಕ್ರಮಬದ್ಧವಾಗಿ ಮತ್ತು ನಿರಂತರವಾಗಿ ಓದುತ್ತಾ ಬಂದವರಿಗೆ ಪರೀಕ್ಷೆ ಬರೆಯುವುದು ದೊಡ್ಡ ವಿಷಯವೇನಲ್ಲ.
5/ 7
ಕ್ಲಾಸಿಗೆ ಮೊದಲ ಸ್ಥಾನ ಬರಬೇಕು. ಅಪ್ಪ ಅಮ್ಮ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕು ಎಂಬ ಆಶಯ ಹೊಂದಿದವರು ಈಗಾಗಲೇ ಸಿದ್ಧತೆ ನಡೆಸಿ ಪರೀಕ್ಷೆ ಬರೆಯಲು ಕಾತರದಿಂದ ಕಾಯುತ್ತಿರುತ್ತಾರೆ. ಅವರ ಆಸೆಗೆ ಈ ಪೂರ್ವ ಸಿದ್ಧತಾ ಪರೀಕ್ಷೆ ಸಹಕಾರಿಯಾಗಲಿದೆ.
6/ 7
ಪೂರ್ವಯೋಜಿತ ಸಿದ್ಧತೆ-ಪರಿಶ್ರಮ ಸಂತೋಷ,ನೆಮ್ಮದಿ ಮತ್ತು ತೃಪ್ತಿಯನ್ನು ತಂದುಕೊಟ್ಟರೆ , ಸಿದ್ಧತೆಯಿಲ್ಲದ ಅರಾಜಕತೆಯ ಬದುಕು ಆತಂಕ ಭಯ ಸೃಷ್ಟಿಸಿ ನೆಮ್ಮದಿ ಕಸಿಯುತ್ತದೆ. ಆ ಕಾರಣಕ್ಕಾಗಿ ಮೊದಲೇ ಅಭ್ಯಾಸ ಮಾಡಬೇಕು.
7/ 7
ಕೊನೆ ಕ್ಷಣದಲ್ಲಿ ಉಂಟಾಗುವ ಆತಂಕ ಮತ್ತು ಭಯ ನಿವಾರಿಸುವ ಸಲುವಾಗಿ ಈ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಾಡಲಾಗುತ್ತದೆ. ಪರೀಕ್ಷೆ ಹೇಗೆ ನಡೆಯುತ್ತೆ ಎಂಬ ಪ್ರಾಯೋಗಿಕ ಕಲಿಕೆ ಇದರಿಂದ ಸಾಧ್ಯವಾಗುತ್ತದೆ.