Students: ನಿಮ್ಮ ಮಗು ಶಾಲೆಗೆ ಹೋಗಲು ಹಠ ಮಾಡ್ತಿದ್ಯಾ? ಇಲ್ಲಿದೆ ಸುಲಭ ಉಪಾಯ
ಅನೇಕ ಪಾಲಕರು ಮಕ್ಕಳು ಹಠ ಮಾಡಿದಾಗ ನಿನ್ನನ್ನು ಶಾಲೆಗೆ ಕಳಿಸ್ತೀನಿ ಅಂತ ಗದರಿರುತ್ತಾರೆ. ಹಾಗಾಗಿ ಮಕ್ಕಳಿಗೆ ಶಾಲೆ ಎಂದರೆ ಗದರುವ ಜಾಗ ಎಂಬ ಮನೋಭಾವ ಬೆಳೆದಿರುತ್ತದೆ. ಹಾಗಾಗದಂತೆ ಜಾಗರೂಕರಾಗಿರಿ.
ಮೊದ ಮೊದಲು ನಿಮ್ಮ ಮಗು ಶಾಲೆಗೆ ಹೋಗಲು ತುಂಬಾ ಹಠ ಮಾಡುವುದು ಸಹಜ ಏಕೆಂದರೆ ಚಿಕ್ಕ ಮಕ್ಕಳಿಗೆ ಪಾಲಕರನ್ನು ಬಿಟ್ಟು ದೂರ ಇದ್ದು ತಿಳಿದಿರುವುದಿಲ್ಲ. ಹೀಗಿರುವಾಗ ಅವರನ್ನು ಶಾಲೆಗೆ ಕಳಿಸಲು ಏನು ಮಾಡಬಹುದು ಎಂಬುದರ ಕುರಿತು ಇಲ್ಲಿದೆ ಮಾಹಿತಿ.
2/ 8
ಮಗುವಿನ ಭಯವನ್ನು ಕಡಿಮೆ ಮಾಡಲು ನೀವು ಪ್ರಯತ್ನಿಸಬೇಕು. ಶಾಲೆ ಎಂಬ ಪದ ಕೇಳಿದ ತಕ್ಷಣ ನಿಮ್ಮ ಮಗು ಅಳಲು ಆರಂಭಿಸುತ್ತೆ. ಅದಕ್ಕಾಗಿ ನೀವು ತುಂಬಾ ಮೊದಲಿನಿಂದಲೇ ಅವರನ್ನು ಮಾನಸಿಕವಾಗಿ ಸಿದ್ಧಪಡಿಸಬೇಕು. ಶಾಲೆಯ ಧನಾತ್ಮಕ ವಿಷಯ ಆಗಾಗ ಹೇಳಬೇಕು.
3/ 8
ಶಾಲೆಯಲ್ಲಿ ಯಾರೆಲ್ಲ ಇರ್ತಾರೆ, ಏನೆಲ್ಲ ಮಾಡಬಹುದು ಎಂಬುದನ್ನೆಲ್ಲ ಮಕ್ಕಳಿಗೆ ಪದೆ ಪದೇ ಹೆಳಬೇಕು. ಅದೊಂದು ಮೋಜಿನ ತಾಣ ಅಂತಲೇ ಮಕ್ಕಳಲ್ಲಿ ಮನೋಭಾವ ಬೆಳೆಸಬೇಕು. ಈ ಮೂಲಕ ಮಕ್ಕಳನ್ನು ಶಾಲೆಗೆ ಹೋಗಲು ಸಿದ್ಧಗೊಳಿಸಬೇಕು.
4/ 8
ಅನೇಕ ಪಾಲಕರು ಮಕ್ಕಳು ಹಠ ಮಾಡಿದಾಗ ನಿನ್ನನ್ನು ಶಾಲೆಗೆ ಕಳಿಸ್ತೀನಿ ಅಂತ ಗದರಿರುತ್ತಾರೆ. ಹಾಗಾಗಿ ಮಕ್ಕಳಿಗೆ ಶಾಲೆ ಎಂದರೆ ಗದರುವ ಜಾಗ ಎಂಬ ಮನೋಭಾವ ಬೆಳೆದಿರುತ್ತದೆ. ಹಾಗಾಗದಂತೆ ಜಾಗರೂಕರಾಗಿರಿ.
5/ 8
ನಿಮ್ಮ ಮಗುವಿನ ತಿಂಡಿ ಡಬ್ಬದಲ್ಲಿ ಅವರ ನೆಚ್ಚಿನ ಆಟಿಕೆ ಮತ್ತು ಅವರ ಇಷ್ಟದ ತಿಂಡಿಯನ್ನು ಹಾಕಿಡಿ. ಮಕ್ಕಳು ಶಾಲೆಗೆ ಹೋಗಲು ಬೆಳಿಗ್ಗೆ ಬೇಗ ಎದ್ದರೆ ಅವರ ಜೊತೆ ನೀವೂ ಎದ್ದು ಕೆಲಸದಲ್ಲಿ ತೊಡಗಿಕೊಳ್ಳಿ.
6/ 8
ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿ ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಮಾತ್ರೆ ನುಂಗಬೇಕಾಗುತ್ತದೆ ಎಂದು ಮೊದಲೇ ತಿಳಿಸಿಬಿಡಿ. ಇಲ್ಲವಾದರೆ ಚಿಕ್ಕ ಹಿಟ್ಟಿನ ಉಂಡೆಯನ್ನು ಮಾತ್ರೆಯಂತೆ ಮಾಡಿ ಬಲವಂತವಾಗಿ ನುಂಗಿಸಿ.
7/ 8
ನಿಮ್ಮ ಮಗು ಶಾಲೆಗೆ ಹೋಗುವುದಿಲ್ಲ ಎಂದರೆ ಕೋಪ ಬೇಡ ನಿಧಾನಿಸಿ ಅವರಿಗೆ ಅರ್ಥ ಮಾಡಿಸಿ ತಿಳಿಸಿಕೊಡಿ. ಅಕ್ಕನೋ ಅಣ್ಣನೋ ಇದ್ದರೆ ಅವರೊಟ್ಟಿಗೆ ಬಿಟ್ಟು ಬಿಡಿ. ಓವರ್ ಕೇರ್ ಮಾಡಬೇಡಿ.
8/ 8
ನಿಮ್ಮ ಮಗು ಶಾಲೆಯನ್ನು ಏಕೆ ತಪ್ಪಿಸುತ್ತಿದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿ. ಶಾಲೆಯಲ್ಲಿ ಇತರರಿಂದ ಅವರಿಗೆ ಸಮಸ್ಯೆಯಾಗುತ್ತಿದೆಯೇ ಎಂದು ಗಮನಿಸಿ. ಶಿಕ್ಷಕರು ಹೆಚ್ಚಾಗಿ ಗದರುತ್ತಿದ್ದಾರಾ ಎಂದು ವಿಚಾರಿಸಿ.