ನೀವು ಪರೀಕ್ಷಾ ಕೇಂದ್ರದಿಂದ ಹೊರಬರುತ್ತಿದ್ದ ಹಾಗೇ ಇತರ ಸ್ನೇಹಿತರು ಮಾತನಾಡುತ್ತಿರುವುದನ್ನು ಹೆಚ್ಚಾಗಿ ಕೇಳಿಸಿಕೊಳ್ಳಬೇಡಿ. ನಿಮ್ಮ ಅಂಕ ಕಡಿಮೆ ಬಂದಿದೆ ಎಂಬ ಅಂದಾಜು ನಿಮಗಿದ್ದರೆ ಅವರ ಮಾತು ನಿಮಗೆ ನೋವುಂಟು ಮಾಡಬಹುದು.
2/ 8
ಆದರೆ ನೀವು ಪರೀಕ್ಷಾ ಹಾಲ್ನಿಂದ ಹೊರಬಂದ ನಂತರ ಗಾಬರಿಯಾಗುವುದು ಸಹಜ. ಆದರೆ ಸದಾ ನೆನಪಿನಲ್ಲಿಡಬೇಕಾದ ಅಂಶವೊಂದಿದೆ. ಅದೇನೆಂದರೆ ನಿಮ್ಮ ಬದುಕಿನಲ್ಲಿ ಪರೀಕ್ಷೆ ಕೇಲವ ಒಂದು ಭಾಗ ಅದೇ ನಿಮ್ಮ ಜೀವನವಲ್ಲ ಎಂಬುದು ನಿಮಗಿರಲಿ.
3/ 8
ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ. ಶಾಂತವಾಗಿರಲು ಪ್ರಯತ್ನಿಸಿ ಮತ್ತು ನಿಮ್ಮ ಸಂಪೂರ್ಣ ಶೈಕ್ಷಣಿಕ ವೃತ್ತಿಜೀವನದಲ್ಲಿ ಇದು ಕೇವಲ ಒಂದು ಪರೀಕ್ಷೆ ಎಂಬುದನ್ನು ಮತ್ತೆ ಮತ್ತೆ ನಿಮಗೆ ನೀವೇ ಹೇಳಿಕೊಳ್ಳಿ.
4/ 8
ನಿಮ್ಮ ಗುರಿಗಳನ್ನು ಸಾಧಿಸಲು ನೀವು ವಿಫಲವಾದಾಗ, ಆತಂಕ, ದುಃಖ, ಅವಮಾನ ಮತ್ತು ಕೋಪ ಇದೆಲ್ಲವೂ ಸಹಜ ಆದರೆ ಅದನ್ನು ಸಹಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ.
5/ 8
ವಾಕಿಂಗ್ ಹೋಗಿ, ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿ, ಸ್ನಾನ ಮಾಡಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಏನು ಆಗಿಲ್ಲ ಎಂಬಂತೆ ಸಹಜವಾಗಿರಿ. ಇಲ್ಲವೆಂದರೆ ಅವರ ಮಾತಿಗೆ ನೀವೆ ಪುಷ್ಟಿ ನೀಡಿದಂತಾಗುತ್ತದೆ.
6/ 8
ನಿಮ್ಮ ವೈಫಲ್ಯಕ್ಕೆ ಸಮಂಜಸವಾದ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಇದಲ್ಲದಿದ್ದರೆ ಇನ್ನೊಂದು ನಿಮ್ಮಿಷ್ಟದ ಕ್ಷೇತ್ರದಲ್ಲಿ ನೀವು ಸಾಧನೆ ಮಾಡಿ ತೋರಿಸಿ.
7/ 8
ವೈಫಲ್ಯದ ನಂತರ ಅನೇಕ ಜನರು ನಿರಾಶೆಗೊಳ್ಳುತ್ತಾರೆ. ಆದರೆ ನೀವು ಇತರರು ಹೇಳಿರುವುದನ್ನು ಖಂಡಿಸಿ ಮತ್ತೊಮ್ಮೆ ಅದೇ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ನಿಮ್ಮನ್ನು ನೀವು ಸಾಬೀತು ಪಡಿಸಿ.
8/ 8
ನೆನಪಿಡಿ ಆಗದು ಎಂಬುದು ಯಾವುದೂ ಇಲ್ಲ ಸಾಧಿಸುವ ಮನಸ್ಸಿದ್ದರೆ ನೀವು ಖಂಡಿತ ಸಾಧಿಸಿಯೇ ಸಾಧಿಸುತ್ತೀರಿ.