ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತಮ್ಮ ಪೂರ್ವ-ವಿಶ್ವವಿದ್ಯಾಲಯ ಶಿಕ್ಷಣವನ್ನು ಪೂರ್ಣಗೊಳಿಸಿದರು. ಆದರೆ ಇವರು ಸಂದರ್ಶನವೊಂದರಲ್ಲಿ ಹೇಳಿಕೊಂಡ ಪ್ರಕಾರ ಕಲಿಕೆಗಿಂತ ಹೆಚ್ಚು ಇವರಿಗೆ ಕ್ರೀಡೆಯಲ್ಲಿ ಆಸಕ್ತಿ ಇತ್ತಂತೆ. ದೀಪಿಕಾ ಅವರ ತರಗತಿಯ ಹುಡುಗಿಯರೆಲ್ಲಾ ಸಂಗೀತ ಕಲಿಯುವ ಆಸಕ್ತಿ ಹೊಂದಿದ್ದರಂತೆ. ಆದರೆ ಇವರಿಗೆ ಮಾತ್ರ ಪಠ್ಯದ ವಿಷಯವನ್ನು ಬಿಟ್ಟು ಇತರ ಕ್ಷೇತ್ರದಲ್ಲಿಆಸಕ್ತಿ ಹೆಚ್ಚಿತ್ತಂತೆ.
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಗಾಗಿ ಸೇರಿಕೊಂಡಿದ್ದರು. ನಂತರ ಮಾಡಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಪಡೆದು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಶಾಲಾ ಸ್ಪರ್ಧೆಗಳು, ಕ್ರೀಡೆಗಳು, ರಂಗಭೂಮಿ ಇತ್ಯಾದಿ ಚಟುವಟಿಕೆಯನ್ನೇ ಇವರು ಹೆಚ್ಚಾಗಿ ಇಷ್ಟ ಪಡುತ್ತಿದ್ದರಂತೆ. ಆದ್ದರಿಂದ ಶಿಕ್ಷಣ ಪಾಠ. ಪಠ್ಯ, ಓದು, ಅಂಕ ಮತ್ತು ಪರೀಕ್ಷೆಯನ್ನು ಇವರು ಇಷ್ಟ ಪಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನಂತರ ಇವರಿಗೆ ಮಾಡೆಲಿಂಗ್ನಿಂದ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಯ್ತು ಅದಕ್ಕೂ ಸಹ ಒಂದು ಕೋರ್ಸ್ ಮಾಡುವ ಮೂಲಕ ಸಿನಿಮಾಗೇ ಸೇರಿಕೊಂಡರು. ಅನುಪಮ್ ಖೇರ್ ಅವರ ಚಲನಚಿತ್ರ ಅಕಾಡೆಮಿಯಲ್ಲಿ ಕೋರ್ಸ್ ಮುಗಿಸಿದ್ದಾರೆ. ನಾನು ಶಿಕ್ಷಣ ತಜ್ಞರನ್ನು ದ್ವೇಷಿಸುತ್ತಿದ್ದೆ. ಅದು ಎಂದಿಗೂ ಸತ್ಯ ಎಂದು ಅವರು ಹೇಳಿದ್ದಾರೆ. ನಾವು ಬದುಕಿನಲ್ಲಿ ಯಶಸ್ವಿಯಾಗಲು ಶಿಕ್ಷಣವೊಂದೇ ಮಾರ್ಗವಲ್ಲ ಎಂದು ಅವರು ಹೇಳಿದ್ದಾರೆ.