ಜಾಹಿರಾತು ಹಾಗು ಮಾರ್ಕೆಟಿಂಗ್: ಈ ಕ್ಷೇತ್ರವಂತೂ ಪ್ರಸ್ತುತ ಸಖತ್ ಕಾಂಪಿಟೇಷನ್ ಹಾಗೆಯೇ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ. ಕ್ರಿಯಾತ್ಮಕ ಬರವಣಿಗೆಯ ಜೊತೆಗೆ ಒಂದಷ್ಟು ಸೂಪರ್ ಐಡಿಯಾಗಳು ಇದ್ರೆ ಈ ಕ್ಷೇತ್ರ ನಿಮಗಾಗಿಯೇ. ಕಂಪನಿಗಳು ಮತ್ತು ಬ್ರ್ಯಾಂಡ್ಗಳು ಯಾವಾಗಲೂ ಪ್ರಷಾರಗಳನ್ನು ಎದ್ದು ಕಾಣುವಂತೆ ಆಡ್ಸ್ ಮತ್ತು ಮಾರ್ಕೆಟಿಂಗ್ ವೃತ್ತಿಪರರನ್ನು ಸರ್ಚ್ ಮಾಡುತ್ತನೇ ಇರುತ್ತವೆ.
ಈವೆಂಟ್ ಮ್ಯಾನೆಜ್ಮೆಂಟ್: ಸಣ್ಣ ಸಣ್ಣ ಗುಂಪುಗಳಾಗಿ ಆರಂಭವಾದ ಅದೆಷ್ಟೋ ಈವೆಂಟ್ ಮ್ಯಾನೆಜ್ಮೆಂಟ್ ಗ್ರೂಪ್ ತಂಡಗಳು ಇದೀಗ ದೊಡ್ಡ ಬ್ಯುಸಿನೆಸ್ ಆರಂಭ ಮಾಡಿಬಿಟ್ಟಿವೆ. ಕಾರ್ಯಕ್ರಮಗಳನ್ನು ಯೋಜಿಸುವುದು, ಆಯೋಜಿಸುವುದು ಮತ್ತು ನಡೆಸುವುದು ಇದರ ಜೊತೆಗೆ ಇತರ ಹಲವು ಕ್ರಿಯಾತ್ಮಕವಾಗಿ ಪ್ರೋಗ್ರಾಮ್ಸ್ಗಳನ್ನು ನಡೆಸುವುದನ್ನು ಈ ಕೋರ್ಸ್ನಲ್ಲಿ ಹೇಳಿಕೊಡಲಾಗುತ್ತದೆ.