Veterinary Science: ಪ್ರಾಣಿ ಪ್ರಿಯರು ಈ ಕೋರ್ಸ್ ಮಾಡಿ, ಕೆಲಸಕ್ಕೆ ಸೇರಿದರೂ ಕಷ್ಟ ಅನಿಸೋಲ್ಲ
ಎಲ್ಲಾ ಪಶುವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಸ್ನಾತಕೋತ್ತರ ಪದವಿ ಅಗತ್ಯವಿಲ್ಲ. ಆ ಕಾರಣದಿಂದ ನೀವು ಏನಾದರೂ ಪದವಿ ಪೂರ್ಣ ಗೊಳಿಸಿಲ್ಲ ಎಂದರೂ ಸಹ ಚಿಂತೆ ಮಾಡಬೇಡಿ. ಈ ಕೋರ್ಸ್ಗೆ ಅಪ್ಲೈ ಮಾಡಿ.
ನೀವು ಪ್ರಾಣಿ ಪ್ರೇಮಿಯಾಗಿದ್ದರೆ ಈ ಒಂದು ಕೋರ್ಸ್ ಮಾಡಲು ತುಂಬಾ ಇಷ್ಟಪಡುತ್ತೀರಿ. ನಿಮಗೆ ಪ್ರಾಣಿಗಳನ್ನು ನೋಡಿಕೊಳ್ಳುವ ಮತ್ತು ಕೇರ್ ಮಾಡುವ ಮನೋಭಾವ ಇದ್ದರೆ ಈ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಬೆಸ್ಟ್.
2/ 8
ಪಶುವೈದ್ಯಕೀಯ ವಿಜ್ಞಾನವು ಕ್ಷೇತ್ರದಲ್ಲಿ ವೃತ್ತಿಯನ್ನು ಪಡೆಯಲು ನಿಮಗೆ ಸೈನ್ಸ್ ಆಯ್ಕೆ ಮಾಡಿಕೊಳ್ಳ ಬೇಕಾಗುತ್ತದೆ. ಪ್ರಾಣಿಗಳ ಚಿಕಿತ್ಸೆ ಮತ್ತು ಯೋಗಕ್ಷೇಮ ನೋಡಿಕೊಳ್ಳುವ ವಾಲಂಟಿಯರ್ ಕೂಡಾ ನೀವಾಗಬಹುದು.
3/ 8
ವೈದ್ಯಕೀಯ ಪದವಿಗಳಂತೆಯೇ, ಕೆಲವು ಪಶುವೈದ್ಯರು ಮತ್ತು ವೃತ್ತಿಪರರು ಪ್ರಾಣಿಗಳ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಾರೆ. ಇದು ಕೆಲವರಿಗೆ ಮಾನಸಿಕ ಖುಷಿಯನ್ನೂ ಸಹ ನೀಡುತ್ತದೆ.
4/ 8
ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು, ಪಶುವೈದ್ಯಕೀಯ ವಿಜ್ಞಾನದಲ್ಲಿ ಕೋರ್ಸ್ ಅನ್ನು ಮುಂದುವರಿಸಲು ಸಾಮಾನ್ಯ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಪಶುವೈದ್ಯಕೀಯ ವಿಜ್ಞಾನದ ಅರ್ಹತೆಯ ಮಾನದಂಡದ ಬಗ್ಗೆ ನೀವು ತಿಳಿದುಕೊಳ್ಳಲು ಇಷ್ಟ ಪಡುವುದಾದರೆ ಇಲ್ಲಿದೆ ಮಾಹಿತಿ.
5/ 8
BVSc ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ನಲ್ಲಿ ಕೋರ್ಸ್ ಅನ್ನು ಮುಂದುವರಿಸಲು ವಿದ್ಯಾರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ PCB ವಿಷಯಗಳೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಕನಿಷ್ಠ 55% ಗಳಿಸಿರಬೇಕು. BVSc ಕೋರ್ಸ್ ಐದು ವರ್ಷಗಳ ಕೋರ್ಸ್ ಆಗಿದೆ.
6/ 8
MVSc : ಮಾಸ್ಟರ್ ಆಫ್ ವೆಟರ್ನರಿ ಸೈನ್ಸ್ನಲ್ಲಿ ಕೋರ್ಸ್ ಅನ್ನು ಮುಂದುವರಿಸಲು, ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ತಮ್ಮ BVSc ಅನ್ನು ಪೂರ್ಣಗೊಳಿಸಿರಬೇಕು ಮತ್ತು ಅವರು ಪದವಿಯಲ್ಲಿ ಕನಿಷ್ಠ 50% ಗಳಿಸಿರಬೇಕು.
7/ 8
ಎಲ್ಲಾ ಪಶುವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಸ್ನಾತಕೋತ್ತರ ಪದವಿ ಅಗತ್ಯವಿಲ್ಲ. ಆ ಕಾರಣದಿಂದ ನೀವು ಏನಾದರೂ ಪದವಿ ಪೂರ್ಣ ಗೊಳಿಸಿಲ್ಲ ಎಂದರೂ ಸಹ ಚಿಂತೆ ಮಾಡಬೇಕು ಎಂದಿಲ್ಲ. ಹೀಗೆ ಕೂಡಾ ಈ ಕೋರ್ಸ್ ಸೇರಿಕೊಳ್ಳಬಹುದು.
8/ 8
ಆಸಕ್ತಿ ಇದ್ದರೆ ಈ ಕೂಡಲೇ ನೀವು ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ. ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ, ಕರ್ನಾಲ್ನಲ್ಲಿ ಸರಕಾರಿ ಹುದ್ದೆಯನ್ನೂ ಸಹ ನೀವು ಮಾಡಬಹುದು.