Mid Day Meal: ವಿದ್ಯಾರ್ಥಿಗಳಿಗೆ ಸಾತ್ವಿಕ ಆಹಾರ ನೀಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ ಮಠಾಧೀಶರು
ಮಕ್ಕಳು ತಿನ್ನುವ ಆಹಾರಗಳು ಮಕ್ಕಳಲ್ಲಿ ನಕಾರಾತ್ಮಕ ಮನೋಭಾವವನ್ನು ಬೆಳೆಸುತ್ತವೆ. ಹೀಗಾಗಿ, ಶಾಲೆಗಳಲ್ಲಿ ಗೋಕ್ಷೀರ ಮತ್ತು ತುಪ್ಪ ನೀಡಬೇಕು. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹಾಲು ಮತ್ತು ತುಪ್ಪವನ್ನು ಹೆಚ್ಚು ಬಳಸಬೇಕು ಎಂದು ಹೇಳಿದ್ದಾರೆ.
ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಊಟದ ಕುರಿತು ಹಲವಾರು ಚರ್ಚೆ ಆರಂಭವಾಗಿದೆ. ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಬಿಸಿಊಟಕ್ಕೆ ಯಾವ ರೀತಿಯ ಆಹಾರ ನೀಡಬೇಕು ಎಂಬುದರ ಕುರಿತಾಗಿ ಏನೆಲ್ಲಾ ಮಾತುಗಳು ಬಂದಿದೆ ಎಂಬುದನ್ನು ನೀವು ಇಲ್ಲಿ ತಿಳಿಯಬಹುದು.
2/ 7
ಶಾಲೆಯಲ್ಲಿ ಭಗವದ್ಗೀತೆ ಅಳವಡಿಸಬೇಕು ಶಾಲೆಗಳಲ್ಲೂ ಸಾತ್ವಿಕ ಆಹಾರ ನೀಡಬೇಕು ಮತ್ತು ಮಕ್ಕಳು ಇರುವಲ್ಲಿ ಪ್ರಾಣಿಗಳ ವಧೆ ಮಾಡಬಾರದು ಹಾಗೂ ಅಂಗಡಿಗಳಲ್ಲಿ ಮಾಂಸ ನೇತು ಹಾಕುವುದನ್ನು ನಿಲ್ಲಿಸಬೇಕು ಎಂಬುದಾಗಿ ಪೇಜಾವರ ಶ್ರೀಗಳು ನುಡಿದಿದ್ದಾರೆ.
3/ 7
ಈ ಹಿಂದೆ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವ ನಿಟ್ಟಿನಲ್ಲಿ ದುಂಡು ಮೇಜಿನ ಸಭೆ ನಡೆಸಲಾಗಿತ್ತು ಅಲ್ಲಿ ಎಲ್ಲಾ ಧರ್ಮದ ಮುಖಂಡರನ್ನು ಹಾಗೂ ಶಿಕ್ಷಣ ತಜ್ಞರನ್ನು ಕರೆತರಲಾಗಿತ್ತು. ಆಗ ಎಲ್ಲರ ಅಭಿಪ್ರಾಯಗಳನ್ನೂ ಆಲಿಸಲಾಗಿತ್ತು.
4/ 7
ಸಾತ್ವಿಕ ಆಹಾರ ಬಗ್ಗೆ ಪ್ರತಿಪಾದಿಸಿದ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಮುಕ್ತವಾಗಿ ಬೋಧಿಸಬೇಕು ಮತ್ತು ಶಾಲೆಗಳಲ್ಲಿ ಸಾತ್ವಿಕ ಆಹಾರ ನೀಡಬೇಕು. ಆಹಾರಕ್ಕೂ ವ್ಯಕ್ತಿತ್ವಕ್ಕೂ ಸಂಬಂಧ ಇದೆ ಎಂದು ಹೇಳಿದ್ದಾರೆ.
5/ 7
ಮಕ್ಕಳು ತಿನ್ನುವ ಆಹಾರಗಳು ಮಕ್ಕಳಲ್ಲಿ ನಕಾರಾತ್ಮಕ ಮನೋಭಾವವನ್ನು ಬೆಳೆಸುತ್ತವೆ. ಹೀಗಾಗಿ, ಶಾಲೆಗಳಲ್ಲಿ ಗೋಕ್ಷೀರ ಮತ್ತು ತುಪ್ಪ ನೀಡಬೇಕು. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹಾಲು ಮತ್ತು ತುಪ್ಪವನ್ನು ಹೆಚ್ಚು ಬಳಸಬೇಕು ಎಂದು ಹೇಳಿದ್ದಾರೆ.
6/ 7
ಎಲ್ಲಾ ಧರ್ಮ ಗುರುಗಳು ಅವರ ಅಭಿಪ್ರಾಯ ಮಂಡಿಸಿದ್ದಾರೆ. ಶಾಲೆಗಳಲ್ಲಿ ಚಿಕನ್ ನೀಡುವ ಕುರಿತು ಮಾತುಗಳು ಆರಂಭವಾಗಿದ್ದವು ಆದರೆ ಅದರ ಬೆನ್ನಲೇ ಈ ರೀತಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
7/ 7
ಈ ಹಿಂದೆ ಮೊಟ್ಟೆ ವಿತರಣೆ ಮಾಡಿದಾಗಲೂ ಸಹ ಇದೇ ರೀತಿ ಹಲವಾರು ಜನರು ಅಭಿಪ್ರಾಯ ಪಟ್ಟಿದ್ದರು, ಆದರೆ ಮೊಟ್ಟೆ ವಿತರಣೆ ಇಂದಿಗೂ ಮಾಡಲಾಗುತ್ತಿದೆ. ಈ ರೀತಿ ಸಾತ್ವಿಕ ಆಹಾರದ ಬಗ್ಗೆ ಮಠಾದೀಶರ ಅಭಿಪ್ರಾಯಗಳ ನಡುವೆಯೂ ಮುಂದೆ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಕಾದು ನೋಡಬೇಕಿದೆ.