Teaching Tricks: ಮಕ್ಕಳಿಗೆ ನೀವು ಈ ರೀತಿ ಪಾಠ ಮಾಡಿದ್ರೆ ತುಂಬಾ ಇಷ್ಟ ಆಗುತ್ತೆ
ಚಿಕ್ಕ ಮಕ್ಕಳಿಗೆ ಇಷ್ಟವಾಗುವಂತೆ ಪಾಠ ಮಾಡುವುದು ಶಿಕ್ಷಕರಿಗೆ ಸವಾಲಿನ ಕೆಲಸವೇ ಸರಿ. ಆದರೆ ನೀವು ಈ ಕೆಳಗಿನ ಟ್ರಿಕ್ಸ್ ಫಾಲೋ ಮಾಡಿದ್ರೆ ಖಂಡಿತ ಮಕ್ಕಳಿಗೆ ಇಷ್ಟವಾಗ್ತೀರಾ. ನಿಮ್ಮ ಪಾಠವನ್ನೂ ಸಹ ಮಕ್ಕಳು ಆಸಕ್ತಿಯಿಂದ ಕೇಳ್ತಾರೆ.
ಶೈಕ್ಷಣಿಕ ವರ್ಷದ ಕೊನೆಯ ಕೆಲವು ತಿಂಗಳುಗಳು ಸುಲಭವಾಗಿರುವುದಿಲ್ಲ. ಶಿಕ್ಷಕರಿಗೆ ಮಕ್ಕಳನ್ನು ನಿಭಾಯಿಸುವು ಪಾಠ ಕೇಳುವಂತೆ ನೋಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿರುತ್ತದೆ ಏಕೆಂದರೆ ಪರೀಕ್ಷೆ ಅವಧಿ ಹತ್ತಿರ ಬಂದಿರುತ್ತದೆ. ಮಕ್ಕಳಿಗೆ ಆಟವಾಡಲು ಅಷ್ಟು ಸಮಯ ಸಿಗೋದಿಲ್ಲ. ಆದ್ದರಿಂದ ಶಿಕ್ಷಕರು ಪಾಠ ಮಾಡುವ ಕ್ರಮವನ್ನು ಬದಲಾಯಿಸಿಕೊಳ್ಳ ಬೇಕಾಗುತ್ತದೆ.
2/ 7
ವಿದ್ಯಾರ್ಥಿಗಳು ತಾವು ಇಷ್ಟಪಡುವ ವಿಚಾರವನ್ನು ಮಾತ್ರ ಹೆಚ್ಚಾಗಿ ಭಾವಿಸುತ್ತಾರೆ. ಇತರ ವಿಚಾರಗಳನ್ನು ಪರಿಗಣೆನೆಗೆ ತೆಗೆದುಕೊಳ್ಳುವುದಿಲ್ಲ. ಹಾಗಾದಾಗ ನೀವು ಮಕ್ಕಳಿಗೆ ಯಾವುದು ಇಷ್ಟವೋ ಅದೇ ವಿಷಯಗಳನ್ನು ಪಾಠದಲ್ಲಿ ಅಳವಡಿಸಿಕೊಂಡು ಅವರನ್ನು ಪಾಠದತ್ತ ಗಮನಸಹರಿಸುವಂತೆ ಮಾಡಬೇಕು.
3/ 7
ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಾಮಾನ್ಯವಾಗಿ ಮಕ್ಕಳನ್ನು ಹೇಗೆ ಪಾಠದತ್ತ ಗಮನಹರಿಸುವಂತೆ ಮಾಡುವುದು ಎಂಬ ಕುರಿತು ಚಿಂತೆಯಾಗುತ್ತಾ ಇರುತ್ತದೆ. ನಿಮ್ಮ ಮಕ್ಕಳಿಗೆ ಯಾವುದು ಇಷ್ಟ ಎಂಬುದನ್ನು ತಿಳಿದುಕೊಂಡು ನೀವು ಅವರ ಸಹಾಯಕರಂತೆ ವರ್ತಿಸಬೇಕು. ಎಂದಿಗೂ ಅವರ ಮೇಲೆ ಅಧಿಕಾ ಚಲಾಯಿಸಬಾರದು.
4/ 7
ಹಾಡು, ಕಥೆ ಅಥವಾ ತಮಾಷೆ ಮಾಡುತ್ತಾ ಮಕ್ಕಳು ನಗುವಂತೆ ನೋಡಿಕೊಂಡು ಪಾಠ ಮಾಡಿದರೆ ಅವರ ಲಕ್ಷ್ಯ ನಿಮ್ಮತ್ತ ಇರುತ್ತದೆ. ಆಗ ನೀವು ಅವರಿಗೆ ಪಾಠ ಮಾಡಹುದು. ಮಕ್ಕಳು ಕಾರ್ಟೂನ್ ಇಷ್ಟ ಪಡುತ್ತಾರೆ ಚಿತ್ರ ಬಿಡಿಸಿ ತೋರಿಸುವುದರಿಂದ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ.
5/ 7
ವಿದ್ಯಾರ್ಥಿಗಳು ತಮ್ಮ ವಯಸ್ಸಿನವರೇ ಹೇಳಿದ ಮಾತನ್ನು ಹೆಚ್ಚಾಗಿ ಕೇಳುತ್ತಾರೆ. ಆದ್ದರಿಂದ ನೀವು ಮಕ್ಕಳೊಡನೆ ಮಕ್ಕಳಂತೆ ಬೆರೆತು ಕೆಲಸ ಮಾಡುವುದು ಉತ್ತಮ. ಆಗ ಮಕ್ಕಳು ನಿಮ್ಮ ಮಾತನ್ನು ಹೆಚ್ಚು ಆಸಕ್ತಿಯಿಂದ ಕೇಳುತ್ತಾರೆ.
6/ 7
ಮರದ ಕೆಳಗೆ ಹುಲ್ಲುಗಾವಲಿನಲ್ಲಿ ಹೀಗೆ ಬೇರೆ ಬೇರೆ ಕಡೆ ಪಾಠ ಮಾಡಲು ಪ್ರಯತ್ನಿಸಿ. ಅವಕಾಶವಿದ್ದರೆ ಪ್ರಾಯೋಗಿಕ ತರಗತಿ ಮೂಲಕ ಪಾಠ ಮಾಡಿ. ಆಗ ಮಕ್ಕಳು ಬರೀ ಪಾಠ ಕೇಳುವುದಕ್ಕಿಂತ ಹೆಚ್ಚಾಗಿ ಪ್ರಾಯೋಗಿಕ ತರಗತಿಯನ್ನು ಮಕ್ಕಳು ಇಷ್ಟಪಡ್ತಾರೆ.
7/ 7
ತರಗತಿಯಲ್ಲಿ ಪುಟ್ಟ ಆಟ ಆಡಿಸುವುದು. ಆಗಾಗ ನಿಮ್ಮ ತಗರತಿಯ ಮಕ್ಕಳನ್ನು ಹೊಗಳುವುದು ಹೀಗೆ ಮಾಡಿದರೆ ಖಂಡಿತ ಮಕ್ಕಳು ಚುರುಕಾಗುತ್ತಾ ಹೋಗುತ್ತಾರೆ. ತರಗತಿಯಲ್ಲಿ ನಿದ್ದೆ ಮಾಡುವ ಮಕ್ಕಳೂ ಸಹ ಇದರಿಂದ ಆ್ಯಕ್ಟೀವ್ ಆಗ್ತಾರೆ.