2nd PUC: ಹಿಜಾಬ್ ವಿವಾದಕ್ಕಿಂತ ನನಗೆ ಶಿಕ್ಷಣವೇ ಮೇಲು: ದ್ವಿತೀಯ ಪಿಯುಸಿ ಟಾಪರ್ ತಬಸುಂ ಮಾತಿದು

ವಿದ್ಯಾಭ್ಯಾಸ ಮುಂದುವರಿಸುವ ಬಯಕೆ ಮತ್ತು ತನ್ನ ಹೆತ್ತವರಿಂದ ಕಲಿತ ಕಾನೂನನ್ನು ಗೌರವಿಸುವ ಪಾಠಗಳು ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಲ್ಲಿಸಲು ನನ್ನನ್ನು ಪೇರೇಪಿಸಿತು ಎನ್ನುತ್ತಾರೆ ವಿದ್ಯಾರ್ಥಿನಿ.

First published:

  • 18

    2nd PUC: ಹಿಜಾಬ್ ವಿವಾದಕ್ಕಿಂತ ನನಗೆ ಶಿಕ್ಷಣವೇ ಮೇಲು: ದ್ವಿತೀಯ ಪಿಯುಸಿ ಟಾಪರ್ ತಬಸುಂ ಮಾತಿದು

    ಪಿಯುಸಿ ಫಲಿತಾಂಶ ಹೊರಬಿದ್ದಿದ್ದು. ಟಾಪರ್‌ಗಳಿಗೆ ಎಲ್ಲೆಡೆ ಪ್ರಶಂಸೆಗಳ ಸುರಿಮಳೆ ಹರಿದುಬರುತ್ತಿದೆ. ಟಾಪರ್‌ಗಳ ಪಟ್ಟಿಯಲ್ಲಿ ತಬಸ್ಸುಮ್ ಶೇಕ್ ಕೂಡ ಒಬ್ಬರಾಗಿದ್ದು, ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 600ಕ್ಕೆ 593 ಅಂಕ ಗಳಿಸಿ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ.

    MORE
    GALLERIES

  • 28

    2nd PUC: ಹಿಜಾಬ್ ವಿವಾದಕ್ಕಿಂತ ನನಗೆ ಶಿಕ್ಷಣವೇ ಮೇಲು: ದ್ವಿತೀಯ ಪಿಯುಸಿ ಟಾಪರ್ ತಬಸುಂ ಮಾತಿದು

    ಬೆಂಗಳೂರಿನ ಎನ್‌ಎಂಕೆಆರ್‌ವಿ ಪಿಯು ಕಾಲೇಜಿನ ತಬಸ್ಸುಮ್, ಹಿಜಾಬ್‌ಗಿಂತ ನಾನು ನನ್ನ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಅದರಿಂದಲೇ ಟಾಪರ್‌ ಆಗಲು ಸಾಧ್ಯವಾಯಿತು" ಎಂದು ಖುಷಿ ವ್ಯಕ್ತಪಡಿಸಿದರು

    MORE
    GALLERIES

  • 38

    2nd PUC: ಹಿಜಾಬ್ ವಿವಾದಕ್ಕಿಂತ ನನಗೆ ಶಿಕ್ಷಣವೇ ಮೇಲು: ದ್ವಿತೀಯ ಪಿಯುಸಿ ಟಾಪರ್ ತಬಸುಂ ಮಾತಿದು

    ಕಳೆದ ವರ್ಷ ರಾಜ್ಯದಲ್ಲಿ ನಡೆದ ಹಿಜಾಬ್‌ ವಿವಾದ ವಿದ್ಯಾರ್ಥಿಗಳ ಬದುಕನ್ನು ಅಲ್ಲೋಲ-ಕಲ್ಲೋಲ ಮಾಡಿತು. ಕರ್ನಾಟಕ ಹೈಕೋರ್ಟ್ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಉಡುಗೆಗಳಾದ ಹಿಜಾಬ್ ಅಥವಾ ಬುರ್ಖಾವನ್ನು ನಿಷೇಧಿಸುವ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು ಮತ್ತು ಶಿಕ್ಷಣ ಸಂಸ್ಥೆಗಳ ಡ್ರೆಸ್ ಕೋಡ್ ಅನ್ನು ಅನುಸರಿಸಲು ವಿದ್ಯಾರ್ಥಿಗಳಿಗೆ ಸೂಚಿಸಿತ್ತು.

    MORE
    GALLERIES

  • 48

    2nd PUC: ಹಿಜಾಬ್ ವಿವಾದಕ್ಕಿಂತ ನನಗೆ ಶಿಕ್ಷಣವೇ ಮೇಲು: ದ್ವಿತೀಯ ಪಿಯುಸಿ ಟಾಪರ್ ತಬಸುಂ ಮಾತಿದು

    ಈ ನಿರ್ಧಾರದ ವಿರುದ್ಧ ಅನೇಕ ಮುಸ್ಲಿಂ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು, ಹಲವರು ಹಿಜಾಬ್ ಮತ್ತು ಸ್ಕಲ್ ಕ್ಯಾಪ್ ಧರಿಸಿ ತರಗತಿಗಳಿಗೆ ಹಾಜರಾಗಿದ್ದರು.

    MORE
    GALLERIES

  • 58

    2nd PUC: ಹಿಜಾಬ್ ವಿವಾದಕ್ಕಿಂತ ನನಗೆ ಶಿಕ್ಷಣವೇ ಮೇಲು: ದ್ವಿತೀಯ ಪಿಯುಸಿ ಟಾಪರ್ ತಬಸುಂ ಮಾತಿದು

    ಆದರೆ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರಲು ಒತ್ತಾಯಿಸಿದ ನಂತರ ಅನೇಕ ಮುಸ್ಲಿಂ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೇ ವಿರೋಧ ವ್ಯಕ್ತಪಡಿಸಿದರು. ಆದರೆ ಈ ಎಲ್ಲಾ ರಾಜಕೀಯ, ಧಾರ್ಮಿಕ ಬೆಳವಣಿಗೆಗೆ ಸೊಪ್ಪು ಹಾಕದ ತಬಸ್ಸುಮ್ ಶೇಕ್ ಓದಿನ ಕಡೆ ಮಾತ್ರ ಗಮನಹರಿಸಿ ಇಂಥದ್ದೊಂದು ಸಾಧನೆ ಮಾಡಿದ್ದಾರೆ.

    MORE
    GALLERIES

  • 68

    2nd PUC: ಹಿಜಾಬ್ ವಿವಾದಕ್ಕಿಂತ ನನಗೆ ಶಿಕ್ಷಣವೇ ಮೇಲು: ದ್ವಿತೀಯ ಪಿಯುಸಿ ಟಾಪರ್ ತಬಸುಂ ಮಾತಿದು

    ಶಿಕ್ಷಣ ಪಡೆಯಬೇಕು ಎಂದರೆ ಕೆಲ ತ್ಯಾಗಗಳು ಅನಿವಾರ್ಯ. ಹಿಜಾಬ್‌ ಅನ್ನು ತರಗತಿ ಒಳಗೆ ಧರಿಸಬಾರದು ಎಂದಾಗ ಆ ನಿಯಮಗಳಿಗೆ ಬದ್ಧಳಾದೆ ಮತ್ತು ಶಿಕ್ಷಣಕ್ಕೆ ಒತ್ತು ಕೊಟ್ಟೆ ಎಂದು ವಿದ್ಯಾರ್ಥಿನಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

    MORE
    GALLERIES

  • 78

    2nd PUC: ಹಿಜಾಬ್ ವಿವಾದಕ್ಕಿಂತ ನನಗೆ ಶಿಕ್ಷಣವೇ ಮೇಲು: ದ್ವಿತೀಯ ಪಿಯುಸಿ ಟಾಪರ್ ತಬಸುಂ ಮಾತಿದು

    ನ್ಯಾಯಾಲಯದ ಆದೇಶ ಹೊರಬೀಳುವವರೆಗೂ ತಾನು ಪ್ರತಿದಿನ ಹಿಜಾಬ್‌ ಧರಿಸಿ ತರಗತಿಗಳಿಗೆ ಹಾಜರಾಗುತ್ತಿದ್ದೆ. ಒಮ್ಮೆ ಆದೇಶ ಹೊರಬಿದ್ದ ನಂತರ ನಾನು ಕಾನೂನನ್ನು ಅನುಸರಿಸಿದೆ ಎಂದು ಅವರು ಹೇಳಿದ್ದಾರೆ.

    MORE
    GALLERIES

  • 88