Exam Tips: ಪೋಷಕರೇ ಕಾಳಜಿವಹಿಸಿ; ಪರೀಕ್ಷಾ ಸಮಯದಲ್ಲಿ ಮಕ್ಕಳ ಊಟ-ತಿಂಡಿ ಈ ರೀತಿ ಇರಲಿ

CBSE ಪರೀಕ್ಷೆಗಳು ಶುರುವಾಗಿವೆ, ಮುಂದಿನ ತಿಂಗಳು ಸ್ಟೇಡ್ ಬೋರ್ಡ್ ಪರೀಕ್ಷೆಗಳು ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಇದು ಅಗ್ನಿಪರೀಕ್ಷೆಯ ಸಮಯ. ಹಾಗಾಂತ ಊಟ-ನಿದ್ದೆ ಬಿಟ್ಟು ಪರೀಕ್ಷೆಗೆ ತಯಾರಿ ನಡೆಸುತ್ತೇನೆ ಎನ್ನುವುದು ನಿಜಕ್ಕೂ ದಡ್ಡತನವಾಗುತ್ತೆ. ಈ ವಿಚಾರದಲ್ಲಿ ಪೋಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು.

First published:

  • 17

    Exam Tips: ಪೋಷಕರೇ ಕಾಳಜಿವಹಿಸಿ; ಪರೀಕ್ಷಾ ಸಮಯದಲ್ಲಿ ಮಕ್ಕಳ ಊಟ-ತಿಂಡಿ ಈ ರೀತಿ ಇರಲಿ

    ಮಕ್ಕಳು ಪರೀಕ್ಷೆಗಳಿಗೆ ಹೋಗುತ್ತಿದ್ದಾಗ ಅವರ ಅಗತ್ಯಗಳನ್ನು ಪೋಷಕರಾದವರು ನೋಡಿಕೊಳ್ಳಬೇಕು. ಮುಖ್ಯವಾಗಿ ಅವರ ಆಹಾರ-ನೀರಿನ ಬಗ್ಗೆ ಹೆತ್ತವರು ಕಾಳಜಿವಹಿಸಬೇಕು. ಇಲ್ಲವಾದರೆ ಮಕ್ಕಳು ಎಷ್ಟೇ ಚೆನ್ನಾಗಿ ಓದಿದ್ದರೂ ಪರೀಕ್ಷಾ ಸಮಯದಲ್ಲಿ ಮಂಕಾಗುವ ಸಾಧ್ಯತೆಗಳಿರುತ್ತದೆ.

    MORE
    GALLERIES

  • 27

    Exam Tips: ಪೋಷಕರೇ ಕಾಳಜಿವಹಿಸಿ; ಪರೀಕ್ಷಾ ಸಮಯದಲ್ಲಿ ಮಕ್ಕಳ ಊಟ-ತಿಂಡಿ ಈ ರೀತಿ ಇರಲಿ

    ಇನ್ನು ಯಾವುದೇ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಆಹಾರ-ನಿದ್ದೆ ಬಹುದೊಡ್ಡ ಭಾಗವಾಗುತ್ತದೆ. ಇವೆರಡನ್ನು ಸಮತೋಲಿತವಾಗಿ ಇಟ್ಟುಕೊಂಡರೆ ಪರೀಕ್ಷೆಯನ್ನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆತ್ಮವಿಶ್ವಾಸದಿಂದ ಎದುರಿಸಬಹುದು.

    MORE
    GALLERIES

  • 37

    Exam Tips: ಪೋಷಕರೇ ಕಾಳಜಿವಹಿಸಿ; ಪರೀಕ್ಷಾ ಸಮಯದಲ್ಲಿ ಮಕ್ಕಳ ಊಟ-ತಿಂಡಿ ಈ ರೀತಿ ಇರಲಿ

    ಪರೀಕ್ಷಾ ಸಮಯದಲ್ಲಿ ಯಾವುದೇ ಕಾರಣಕ್ಕೂ ನಿದ್ದೆ ಹಾಗೂ ಆಹಾರ ಸೇವನೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ. ಪ್ರತಿ ಕೆಲವು ಗಂಟೆಗಳಿಗೊಮ್ಮೆ ಆರೋಗ್ಯಕರ ತಿಂಡಿಗಳನ್ನು ಸೇವಿಸಿ. ಒಂದೇ ಬಾರಿಗೆ ಅನೇಕ ವಸ್ತುಗಳನ್ನು ತಿನ್ನುವ ಬದಲು, ಕೆಲವೇ ಗಂಟೆಗಳಲ್ಲಿ ಲಘು ಆರೋಗ್ಯಕರ ಆಹಾರವನ್ನು ಸೇವಿಸಿ. ಇದರಿಂದ ನೀವು ಆಲಸ್ಯ ಭಾವ ಬರುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Exam Tips: ಪೋಷಕರೇ ಕಾಳಜಿವಹಿಸಿ; ಪರೀಕ್ಷಾ ಸಮಯದಲ್ಲಿ ಮಕ್ಕಳ ಊಟ-ತಿಂಡಿ ಈ ರೀತಿ ಇರಲಿ

    ಪ್ರೋಟಿನ್ಸ್ ತುಂಬಾನೇ ಮುಖ್ಯ: ಆಹಾರವು ಸಂಪೂರ್ಣವಾಗಿ ಸಮತೋಲಿತವಾಗಿರಬೇಕು. ಆಹಾರದಲ್ಲಿ ಪ್ರೋಟಿನ್ ಸೇರಿಸುವುದನ್ನು ಮರೆಯಬೇಡಿ. ಮೊಸರು, ಮೊಟ್ಟೆ, ಹಾಲು ಚೀಸ್ ನಂತಹ ವಸ್ತುಗಳನ್ನು ಬೆಳಗಿನ ಉಪಾಹಾರದಿಂದ ಮಧ್ಯಾಹ್ನ, ರಾತ್ರಿಯ ಊಟದವರೆಗೆ ಸೇವಿಸಬಹುದು. ಚಿಕನ್ ಒಳ್ಳೆಯ ಪ್ರೋಟಿನ್ ಎಂದು ಅತಿಯಾದ ಮಸಾಲೆ ಹಾಕಿ ಅಡುಗೆ ಮಾಡಬೇಡಿ. ಹೊಟ್ಟೆ ಸಮಸ್ಯೆ ಬರಬಹುದು, ಮಸಾಲೆಯುಕ್ತ ಆಹಾರ ಆಲಸ್ಯಗೊಳಿಸಬಹುದು.

    MORE
    GALLERIES

  • 57

    Exam Tips: ಪೋಷಕರೇ ಕಾಳಜಿವಹಿಸಿ; ಪರೀಕ್ಷಾ ಸಮಯದಲ್ಲಿ ಮಕ್ಕಳ ಊಟ-ತಿಂಡಿ ಈ ರೀತಿ ಇರಲಿ

    ಹೊರಗಿನ ಆಹಾರವನ್ನು ಬೇಡ: ಪರೀಕ್ಷೆಯ ಸಮಯದಲ್ಲಿ ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಇದು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ಫಾಸ್ಟ್ ಫುಡ್, ಹೋಟೆಲ್ ಆಹಾರಗಳು ಎಂದಿಗೂ ಸಂಪೂರ್ಣ ಆರೋಗ್ಯಕರವಲ್ಲ. ಇದು ನಮ್ಮ ತಯಾರಿಕೆಯ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 67

    Exam Tips: ಪೋಷಕರೇ ಕಾಳಜಿವಹಿಸಿ; ಪರೀಕ್ಷಾ ಸಮಯದಲ್ಲಿ ಮಕ್ಕಳ ಊಟ-ತಿಂಡಿ ಈ ರೀತಿ ಇರಲಿ

    ಸಾಕಷ್ಟು ನೀರು ಕುಡಿಯಿರಿ: ನೀರು ಕುಡಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕಡಿಮೆ ನೀರು ಕುಡಿಯುವುದರಿಂದ ಕಿರಿಕಿರಿ ಉಂಟಾಗುತ್ತದೆ. ನೀವು ಬಯಸಿದರೆ, ನೀರನ್ನು ಕುಡಿಯಲು ನೀವು ನಿಯಮಿತ ಅಲಾರಂ ಅನ್ನು ಸಹ ಸೆಟ್ ಮಾಡಿಕೊಳ್ಳಬಹುದು.

    MORE
    GALLERIES

  • 77

    Exam Tips: ಪೋಷಕರೇ ಕಾಳಜಿವಹಿಸಿ; ಪರೀಕ್ಷಾ ಸಮಯದಲ್ಲಿ ಮಕ್ಕಳ ಊಟ-ತಿಂಡಿ ಈ ರೀತಿ ಇರಲಿ

    ಬೆಳಗಿನ ತಿಂಡಿ ತಪ್ಪಿಸಬೇಡಿ: ಬೆಳಗಿನ ಉಪಾಹಾರವನ್ನು ಎಂದಿಗೂ ಬಿಡಬೇಡಿ. ಬೆಳಿಗ್ಗೆ ಪೌಷ್ಟಿಕಾಂಶಯುಕ್ತ ಉಪಹಾರವು ನಿಮ್ಮನ್ನು ದಿನವಿಡೀ ತಾಜಾವಾಗಿರಿಸುತ್ತದೆ. ನಿಮ್ಮ ಹಸಿವು ಮತ್ತು ಮನಸ್ಥಿತಿಗೆ ಅನುಗುಣವಾಗಿ ಉಪಹಾರದೊಂದಿಗೆ ದಿನವನ್ನು ಪ್ರಾರಂಭಿಸಿ. ಇದು ನಿಮಗೆ ಅಧ್ಯಯನ ಮಾಡಲು ಮತ್ತು ನೀವು ಓದಿದ್ದನ್ನು ನೆನಪಿಟ್ಟುಕೊಳ್ಳಲು ಸಾಕಷ್ಟು ಸಮಯ ಮಾಡುತ್ತದೆ.

    MORE
    GALLERIES