Taliban Students: ವಿದ್ಯಾರ್ಥಿನಿಯರಿಗೆ ಪ್ರವೇಶ ಇಲ್ಲ ಅಂದ್ರೆ ನಮಗೂ ಶಿಕ್ಷಣ ಬೇಡ ಎಂದ ವಿದ್ಯಾರ್ಥಿಗಳು!
ನಮ್ಮ ಸಹೋದರಿಯರಿಗೆ ವಿಶ್ವವಿದ್ಯಾನಿಲಯವು ಪಾಠ ಕೇಳಲು ಮತ್ತು ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿಲ್ಲ ಆ ಕಾರಣದಿಂದ ನಾವೂ ಸಹ ಶಿಕ್ಷಣ ಪಡೆಯದೇ ಹೋರಾಟ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಈ ಕಾರಣದಿಂದ ವಿಶ್ವವಿದ್ಯಾಲಯಗಳು ಮುಚ್ಚಿವೆ.
ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆಯುವ ಹಕ್ಕಿಲ್ಲ ಎಂದು ತಾಲಿಬಾನ್ ಈಗಾಗಲೇ ಘೋಷಿಸಿತ್ತು. ಉನ್ನತ ಶಿಕ್ಷಣ ಪೂರೈಸುತ್ತಿದ್ದ ಎಷ್ಟೋ ಜನ ವಿದ್ಯಾರ್ಥಿನಿಯರು ಇದರಿಂದ ಬೇಸರಕ್ಕೊಳಗಾಗಿದ್ದರು. ಇದರ ಬೆನ್ನಲ್ಲೇ ಇನ್ನೊಂದು ಘಟನೆ ಜರುಗಿದೆ.
2/ 7
ತಾಲಿಬಾನ್ ಸರ್ಕಾರದ ವಿರುದ್ಧ ಈಗ ಹಲವರು ತಿರುಗಿ ಬಿದ್ದಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಶಾಲೆಗಳಲ್ಲಿ ವಿಶ್ವವಿದ್ಯಾಲಯ ಶಿಕ್ಷಣವನ್ನು ನಿಷೇಧಿಸಿದ ಬೆನ್ನಲ್ಲೇ ವಿದ್ಯಾರ್ಥಿಗಳು ತಮ್ಮ ತರಗತಿಗೆ ಗೈರಾಗಿದ್ದಾರೆ.
3/ 7
ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗುವವರೆಗೂ ತಾವೂ ಕಾಲೇಜು ಪ್ರವೇಶ ಮಾಡುವುದಿಲ್ಲವೆಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
4/ 7
ನಾವು ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ. ಮಹಿಳಾ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೇ ಇದ್ದಲ್ಲಿ ನಾವೂ ಸಹ ಶಿಕಕ್ಷಣದಿಂದ ವಂಚಿತರಾಗುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
5/ 7
ನಮ್ಮ ಸಹೋದರಿಯರಿಗೆ ವಿಶ್ವವಿದ್ಯಾನಿಲಯವು ಪಾಠ ಕೇಳಲು ಮತ್ತು ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿಲ್ಲ ಆ ಕಾರಣದಿಂದ ನಾವೂ ಸಹ ಶಿಕ್ಷಣ ಪಡೆಯದೇ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಕಾರಣದಿಂದ ವಿಶ್ವವಿದ್ಯಾಲಯಗಳು ಮುಚ್ಚಿವೆ.
6/ 7
ಕಾಬೂಲ್ ವಿಶ್ವವಿದ್ಯಾಲಯದ ಉಪನ್ಯಾಸಕರು ತಮ್ಮ ನಿರ್ಧಾರ ಮರುಪರಿಶೀಲಿಸುವಂತೆ ತಾಲಿಬಾನ್ಗೆ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳು ತೆಗೆದುಕೊಂಡ ಈ ನಿರ್ಧಾರ ಬದಲಾವಣೆಗೆ ಕಾರಣವಾಗಲಿದೆ.
7/ 7
ಅಫ್ಘಾನಿಸ್ತಾನ ಸರ್ಕಾರವು ಇತ್ತೀಚೆಗೆ ಮಹಿಳಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನಿರ್ಬಂಧ ವಿಧಿಸಿತ್ತು. ಅದಕ್ಕೂ ಮುನ್ನ ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬಾರದು ಎಂದು ಸೂಚನೆ ನೀಡಿತ್ತು ನಂತರ ಈ ನಿಯಮ ಇನ್ನೂ ಬಿಗಿಯಾಗಿ ಶಿಕ್ಷಣದಿಂದಲೇ ವಿದ್ಯಾರ್ಥಿನಿಯರು ವಂಚಿತರಾದ್ರು.