ವಿಜಯಪುರ: ವಿದ್ಯಾರ್ಥಿಗಳಿಗೆ ನಿತ್ಯ ಬಸ್ನಲ್ಲಿ ಓಡಾಡ ಬೇಕಾಗುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಬಸ್ಗಳೇ ಇಲ್ಲ. ಸೂಕ್ತ ಬಸ್ ಸೌಲಭ್ಯದ ಕೊರತೆ ಇರುವ ಕಾರಣದಿಂದಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.
2/ 7
ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ವಿದ್ಯಾರ್ಥಿಗಳು ತಮಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆ ಕೈಗೊಂಡಿದ್ದಾರೆ. ಇದರಿಂದಾಗಿ ತಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ಆಶಯ ಅವರದ್ದಾಗಿದೆ.
3/ 7
ಓಡಾಡುವ ಎಲ್ಲಾ ಬಸ್ಗಳು ಪಾಸ್ ಆಗದಂತೆ ರಸ್ತೆಯಲ್ಲೇ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲಾ ಕಾಲೇಜಿಗೆ ಹೋಗುವ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಇದರಿಂದ ತಮಗೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ಅವರು ಹೇಳುತ್ತಿದ್ದಾರೆ.
4/ 7
ಇನ್ನು ಮುಂದೆ ಸರಿಯಾದ ಸಮಯಕ್ಕೆ ಬಸ್ ಬರುವಂತೆ ಸೌಕರ್ಯ ಮಾಡಿಕೊಡಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ. ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಅವರಿಗೆ ತೊಂದರೆಯಾಗುತ್ತಿದೆ.
5/ 7
ಈ ಹಿಂದೆ ಪ್ರತಿಭಟನೆ ಮಾಡುವುದಕ್ಕೂ ಮೊದಲು ಸಮಸ್ಯೆ ಪರಿಹಾರಕ್ಕೆ ಸಾರಿಗೆ ಇಲಾಖೆ ಆಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಈ ಕುರಿತು ಯಾರೂ ಕ್ರಮ ಕೈಗೊಳ್ಳದ ಕಾರಣ ಈಗ ಪ್ರತಿಭಟನೆಗೆ ಇಳಿದಿದ್ದಾರೆ.
6/ 7
ಕಾಲೇಜು ವೇಳೆಗೆ ಸರಿಯಾಗಿ ತಲುಪಲು ಸಹಾಯವಾಗುವಂತೆ ಬಸ್ ವ್ಯವಸ್ಥೆ ಕಲ್ಲಿಸ ಬೇಕು ಎಂದು ಅವರ ಒತ್ತಾಸೆಯಾಗಿದೆ. ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯಿಂದ ವಿಜಯಪುರ-ಅಥಣಿ ಸಂಚಾರ ಅಸ್ತವ್ಯಸ್ಥಗೊಂಡಿದೆ.
7/ 7
ಯಾವುದೇ ಬಸ್ ಕೂಡ ರಸ್ತೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ವಿದ್ಯಾರ್ಥಿಗಳ ಪ್ರತಿಭಟನೆಯೇ ಬಸ್ಗಳನ್ನು ತಡೆಯುವುದಾಗಿದೆ.