ತುಮಕೂರು (ಮೇ.25): ಕಾರ್ಮಿಕ ಇಲಾಖೆಯಿಂದ ಕೊಡಲಾಗುವ ಎಜುಕೇಶನ್ ಕಿಟ್ಗಾಗಿ ವಿದ್ಯಾರ್ಥಿಗಳು & ಪೋಷಕರು ಮುಗಿಬಿದ್ದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಪಾವಗಡ ಪಟ್ಟಣದ ಪತಂಜಲಿ ನಗರದಲ್ಲಿನ ಕಾರ್ಮಿಕ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಎಜುಕೇಶನ್ ಕಿಟ್ ವಿತರಣೆ ಮಾಡುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ. ಪಾವಗಡ ತಾಲೂಕಿನಲ್ಲಿ ಒಟ್ಟು 8 ಸಾವಿರ ನೋಂದಾಯಿತ ಕಾರ್ಮಿಕರಿದ್ದಾರೆ. ಅದರಂತೆ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಎಜುಕೇಶನ್ ಕಿಟ್ ಕೊಡಬೇಕಿತ್ತು. ಆದರೆ ಕೇವಲ 200 ಕಿಟ್ ಮಾತ್ರ ವಿತರಿಸಲು ಕಾರ್ಮಿಕ ಇಲಾಖೆ ಮುಂದಾಗಿದೆ. ಹೀಗಾಗಿ ಎಜುಕೇಶನ್ ಕಿಟ್ಗಾಗಿ ವಿದ್ಯಾರ್ಥಿಗಳು ಮುಗಿಬಿದ್ದಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ತಮಗೆ ಬೇಕು ತಮಗೆ ಬೇಕು ಎಂದು ನೂಕಾಟ ತಳ್ಳಾಟ ನಡೆಸಿದ್ದಾರೆ. ಅಷ್ಟರಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಕಾರ್ಮಿಕ ಇಲಾಖೆ ವತಿಯಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಎಜುಕೇಶನ್ ಕಿಟ್ ಕೊಡಲಾಗುತ್ತದೆ. ಅದಕ್ಕೂ ಮೊದಲು ಟೋಕನ್ ನೀಡಲಾಗುತ್ತದೆ. ನೋಂದಾಯಿತ 8 ಸಾವಿರ ಕಾರ್ಮಿಕರ ಮಕ್ಕಳಿಗೆ ಎಜುಕೇಶನ್ ಕಿಟ್ ಕೊಡಬೇಕಿತ್ತು. ಆದರೆ ಕೇವಲ 200 ಮಕ್ಕಳಿಗೆ ಮಾತ್ರ ಕಿಟ್ ವಿತರಿಸಲು ಇಲಾಖೆ ಮುಂದಾಗಿದ್ದು, ಈ ಘಟನೆ ಜರುಗಲು ಕಾರಣವಾಗಿದೆ.