Bus Problem: ಚಲಿಸುತ್ತಿರುವ ಬಸ್​ನಿಂದ ಹಾರಿದ ವಿದ್ಯಾರ್ಥಿನಿ! ನ್ಯಾಯಕ್ಕಾಗಿ ಪ್ರತಿಭಟಿಸಿದ ಸ್ಟೂಡೆಂಟ್ಸ್​

ಶ್ವೇತಾ ಸಾವಿಗೆ ಬಸ್ ಸಿಬ್ಬಂದಿಯೇ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಪೊಲೀಸರು ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ.

First published:

  • 17

    Bus Problem: ಚಲಿಸುತ್ತಿರುವ ಬಸ್​ನಿಂದ ಹಾರಿದ ವಿದ್ಯಾರ್ಥಿನಿ! ನ್ಯಾಯಕ್ಕಾಗಿ ಪ್ರತಿಭಟಿಸಿದ ಸ್ಟೂಡೆಂಟ್ಸ್​

    ಕಂಡಕ್ಟರ್‌ಗೆ ಹಲವು ಬಾರಿ ಮನವಿ ಮಾಡಿದರೂ ಕಾಲೇಜು ಬಳಿ ಬಸ್ ನಿಲ್ಲಿಸಿಲ್ಲ ಎಂದು ಮನನೊಂದ ವಿದ್ಯಾರ್ಥಿನಿ ಶ್ವೇತಾ ಎಂಬ ಶ್ವೇತಾ ಎಂಬ 20 ವರ್ಷದ ಇಂಜಿನಿಯರಿಂಗ್ ಹುಡುಗಿ ಚಲಿಸುತ್ತಿದ್ದ ಬಸ್‌ನಿಂದ ಹಾರಿ ತಲೆಗೆ ಗಾಯಗೊಂಡು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾಳೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bus Problem: ಚಲಿಸುತ್ತಿರುವ ಬಸ್​ನಿಂದ ಹಾರಿದ ವಿದ್ಯಾರ್ಥಿನಿ! ನ್ಯಾಯಕ್ಕಾಗಿ ಪ್ರತಿಭಟಿಸಿದ ಸ್ಟೂಡೆಂಟ್ಸ್​

    ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಶ್ವೇತಾ ಶಾಂತಪ್ಪನವರ್ ಅವರು ಬೆಂಗಳೂರಿನಿಂದ ಸುಮಾರು 320 ಕಿಮೀ ದೂರದಲ್ಲಿರುವ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದವರು. ಹಡಗಲಿಯಿಂದ 6 ಕಿಮೀ ದೂರದಲ್ಲಿರುವ ಹುಲಿಗುಡ್ಡದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ ಆಕೆ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bus Problem: ಚಲಿಸುತ್ತಿರುವ ಬಸ್​ನಿಂದ ಹಾರಿದ ವಿದ್ಯಾರ್ಥಿನಿ! ನ್ಯಾಯಕ್ಕಾಗಿ ಪ್ರತಿಭಟಿಸಿದ ಸ್ಟೂಡೆಂಟ್ಸ್​

    ಶ್ವೇತಾ ಅವರು ತಮ್ಮ ಕಾಲೇಜಿಗೆ ತೆರಳಲು ಹಡಗಲಿಯಲ್ಲಿ ಕೆಎಸ್‌ಆರ್‌ಟಿಸಿ ವಿಜಯನಗರ-ರಾಣೆಬೆನ್ನೂರು ಬಸ್‌ ಹತ್ತುತ್ತಿದ್ದಾಗ ಈ ಘಟನೆ ನಡೆದಿದೆ. ತನ್ನ ಕಾಲೇಜಿನ ಬಳಿ ಯಾವುದೇ ನಿಲುಗಡೆ ಇಲ್ಲದ ಕಾರಣ ಶ್ವೇತಾ ಬಸ್ ನಿಲ್ಲಿಸಲು ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಕಂಡೆಕ್ಟರ್​ ನಿಲ್ಲಿಸಲು ನಿರಾಕರಿಸಿ ಹಾರುವಂತೆ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bus Problem: ಚಲಿಸುತ್ತಿರುವ ಬಸ್​ನಿಂದ ಹಾರಿದ ವಿದ್ಯಾರ್ಥಿನಿ! ನ್ಯಾಯಕ್ಕಾಗಿ ಪ್ರತಿಭಟಿಸಿದ ಸ್ಟೂಡೆಂಟ್ಸ್​

    ಕ್ಲಾಸ್​ ಮಿಸ್​ ಆಗುತ್ತೆ ಎಂದು ಹತಾಶೆ ಮತ್ತು ಕೋಪಗೊಂಡ ಶ್ವೇತಾ ಚಲಿಸುತ್ತಿದ್ದ ಬಸ್‌ನಿಂದ ಹಾರಿ ತಲೆಗೆ ತೀವ್ರ ಗಾಯಗಳಾಗಿದ್ದವು. ತಕ್ಷಣ ಆಸ್ಪತ್ರೆಗೂ ಸೇರಿಸಲಾಯಿತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bus Problem: ಚಲಿಸುತ್ತಿರುವ ಬಸ್​ನಿಂದ ಹಾರಿದ ವಿದ್ಯಾರ್ಥಿನಿ! ನ್ಯಾಯಕ್ಕಾಗಿ ಪ್ರತಿಭಟಿಸಿದ ಸ್ಟೂಡೆಂಟ್ಸ್​

    ಬಾಲಕಿಯನ್ನು ಹಡಗಲಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನಂತರ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ  ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ, ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bus Problem: ಚಲಿಸುತ್ತಿರುವ ಬಸ್​ನಿಂದ ಹಾರಿದ ವಿದ್ಯಾರ್ಥಿನಿ! ನ್ಯಾಯಕ್ಕಾಗಿ ಪ್ರತಿಭಟಿಸಿದ ಸ್ಟೂಡೆಂಟ್ಸ್​

    ಇಂಜಿನಿಯರಿಂಗ್​ ಕಾಲೇಜಿನಲ್ಲಿ ಇವಳು ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆಯ ಸಾವಿನ ನಂತರ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೂಡಿ ನ್ಯಾಯಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

    MORE
    GALLERIES

  • 77

    Bus Problem: ಚಲಿಸುತ್ತಿರುವ ಬಸ್​ನಿಂದ ಹಾರಿದ ವಿದ್ಯಾರ್ಥಿನಿ! ನ್ಯಾಯಕ್ಕಾಗಿ ಪ್ರತಿಭಟಿಸಿದ ಸ್ಟೂಡೆಂಟ್ಸ್​

    ಕಾಲೇಜಿಗೆ ತೆರಳಲು ಬಸ್‌ ನಿಲ್ದಾಣ ಹಾಗೂ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. 

    MORE
    GALLERIES