ಪದವಿ(Degree) ಮತ್ತು ಸ್ನಾತಕೋತ್ತರ ಪದವಿ(Post Graduation) ವಿದ್ಯಾರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ಇನ್ಮುಂದೆ ವಿದ್ಯಾರ್ಥಿಗಳು(Students) ಒಂದೇ ಪ್ರಶ್ನೆ ಪತ್ರಿಕೆಗೆ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಉತ್ತರ ಬರೆಯಬಹುದು ಎಂದು ರಾಜ್ಯ ಉನ್ನತ ಶಿಕ್ಷಣ ಮಂಡಳಿ(State Higher Education Council) ತಿಳಿಸಿದೆ. ಇದು ವಿದ್ಯಾರ್ಥಿಗಳಿಗೆ ಸಂತಸ ತಂದಿದೆ.
ಈವರೆಗೆ ವಿದ್ಯಾರ್ಥಿಗಳು ಒಂದು ಪ್ರಶ್ನೆ ಪತ್ರಿಕೆಗೆ ಕನ್ನಡ ಅಥವಾ ಇಂಗ್ಲಿಷ್ ಎರಡರಲ್ಲಿ ಒಂದು ಭಾಷೆಯಲ್ಲಿ ಮಾತ್ರ ಉತ್ತರ ಬರೆಯುವ ಅವಕಾಶ ಇತ್ತು. ಈಗ ಸರ್ಕಾರವು ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವು ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರ ಬರೆದರೆ, ಮತ್ತೆ ಕೆಲವು ಪ್ರಶ್ನೆಗಳಿಗೆ ಇಂಗ್ಲಿಷ್ನಲ್ಲಿ ಬರೆಯಬಹುದಾಗಿದೆ.