ರಾಜ್ಯದಲ್ಲಿ 2023ರ SSLC ಪರೀಕ್ಷೆ ವೇಳಾಪಟ್ಟಿ ಬಿಡುಗಡೆಯಾಗಿದ್ದು ನೀವೀಗ ಅಭ್ಯಾಸ ಆರಂಭಿಸಲೇ ಬೇಕು. ಅದಕ್ಕಾಗಿ ನೀವು ಕೆಲವೊಂದು ಟಿಪ್ಸ್ ಪಾಲೋ ಮಾಡಿದರೆ ಹೆಚ್ಚಿನ ಅಂಕ ಬರುವುದು ಗ್ಯಾರಂಟಿ.
2/ 9
ಎಲ್ಲಕ್ಕಿಂತ ಮುಖ್ಯವಾಗಿ ನೀವು ಹೆದರದೆ ಈಗಿನಿಂದಲೇ ದಿನಕ್ಕೊಂದು ವಿಷಯದಂತೆ ಓದುತ್ತಾ ಹೋದರೆ ಸಾಕು. 80ಕ್ಕಿಂತ ಹೆಚ್ಚಿನ ಅಂಕ ಗಳಿಸಬಹುದು ಇದು ನಿಖರ.
3/ 9
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಪರೀಕ್ಷೆಗಳು ನಡೆದಿರಲಿಲ್ಲ. ಶ್ರೇಣಿ ಆಧಾರದ ಮೇಲೆ ಅಂಕಗಳನ್ನು ನೀಡಿ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಆದರೆ ಈ ಬಾರಿ ಕೋವಿಡ್ ಇಲ್ಲದ ಕಾರಣ ಪರೀಕ್ಷೆ ಕಟ್ಟು ನಿಟ್ಟಿನಲ್ಲಿ ನಡೆಯುವುದರಲ್ಲಿ ಸಂಶಯವಿಲ್ಲ.
4/ 9
ನೀವು ಪರೀಕ್ಷೆಯಲ್ಲಿ ಯಾವ ವಿಷಯವನ್ನೂ ಕಡೆಗಣಿಸದೆ ಅಭ್ಯಾಸ ಮಾಡಬೇಕು. ಹಾಗಂತ ನೀವು ನಿಮಗೆ ಇಷ್ಟವಿಲ್ಲದ ವಿಷಯವನ್ನು ಓದದೆ ಸುಮ್ಮನಾದರೆ ಸಾಲುವುದಿಲ್ಲ. ಎಲ್ಲಾ ವಿಷಯಗಳೂ ಸಹ ಸಮಾನ ಪ್ರಾಮುಖ್ಯತೆ ಹೊಂದಿರುತ್ತದೆ.
5/ 9
ನಿಮಗೆ ಯಾವ ವಿಷಯ ಕಷ್ಟ ಎನಿಸುತ್ತದೆಯೋ ಆ ವಿಷಯದ ಮೇಲೆ ಹೆಚ್ಚು ಕೇಂದ್ರೀಕರಿಸಿ ಓದಬೇಕು. ಅಥವಾ ಟ್ಯೂಷನ್ ತೆಗೆದುಕೊಳ್ಳಬೇಕು. ನಿಮ್ಮ ಮನೆಯಲ್ಲಿ ಯಾರಾದರು ಹಿರಿಯರಿದ್ದರೆ ಅವರಿಂದ ಕಲಿಯಬೇಕು.
6/ 9
ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳು ಉತ್ತಮ ಅಂಕ ಬರುತ್ತದೆ ಇನ್ನು ಕೆಲವರಿಗೆ ಕಡಿಮೆ ಅಂಕ ಬರುತ್ತದೆ. ಇದೊಂದು ಸಹಜ ಪ್ರಕ್ರಿಯೆ ಹಾಗಂತ ನೀವು ಯಾವುದಕ್ಕೂ ಬೇಸರ ಪಡಬಾರದು. ಮುಖ್ಯವಾಗಿ ಪರೀಕ್ಷೆಗೆ ಭಯ ಪಡಬಾರದು.
7/ 9
ಶಿಕ್ಷಣ ಇಲಾಖೆ ಮತ್ತೆ ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ನಡೆಸುತ್ತಿದೆ. ಈ ಪರೀಕ್ಷೆಯನ್ನು ಬರೆದು ವಿದ್ಯಾರ್ಥಿಗಳು ಉತ್ತೀರ್ಣರಾಗಬಹುದು. ನಿಮ್ಮ ಅವಕಾಶವನ್ನು ನೀವು ಎಂದಿಗೂ ಕಳೆದುಕೊಳ್ಳುವುದಿಲ್ಲ ನೆನಪಿರಲಿ.
8/ 9
ಪಾಲಕರು ಮಕ್ಕಳಿಗೆ ಹೆಚ್ಚಿನ ಒತ್ತಡ ನೀಡಬೇಡಿ ಯಾಕೆಂದರೆ ಎಲ್ಲರಿಗೂ ಸಮಾನ ಸಾಮರ್ಥ್ಯವಿರುವುದಿಲ್ಲ. ಅಷ್ಟೇ ಅಲ್ಲ ನೀವು ಒತ್ತಾಯ ಮಾಡಿದರೂ ಸಹ ಅವರು ಅಭ್ಯಾಸ ಮಾಡದೇ ಇರಬಹುದು. ನಿಮ್ಮ ಒತ್ತಾಯ ಅವರಿಗೆ ಒತ್ತಡವಾಗಬಹುದು.
9/ 9
ಪರೀಕ್ಷೆ ದಿನಕ್ಕೆ ಯಾವುದೆಲ್ಲಾ ತಯಾರಿ ಬೇಕು ಅದನ್ನು ಇಂದಿನಿಂದಲೇ ಆರಂಭಿಸುವುದು ಮುಖ್ಯವಾಗಿರುತ್ತದೆ. ಅಭ್ಯಾಸದ ಕಡೆ ಸರಿಯಾದ ಗಮನಕೊಡಿ. ಈಗಿನಿಂದಲೇ ಮನಸ್ಸನ್ನು ಅಣಿಗಳಿಸಿಕೊಳ್ಳಿ.