School Bus Problem: ವಿದ್ಯಾರ್ಥಿಗಳು ಶಾಲೆಗೆ ಹೋಗೋಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ, ಸರ್ಕಾರದ ವಿರುದ್ಧ ಸಿದ್ದು ಗುಡುಗು!
ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಹೋದಾಗ, ಬಸ್ಸುಗಳ ಬಗ್ಗೆ ದೂರು ಕೇಳಿದ್ದಾರಂತೆ ಜನರು ತಾವಾಗಿಯೇ ಬಂದು ಬಸ್ನಿಂದಾಗುತ್ತಿರುವ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರಂತೆ. ಡಿಸಿ ಅವರಿಗೆ ತಿಳಿಸಿದಾಗ , ಸ್ಟಾಪ್ ಇಲ್ಲ, ಬಸ್ಸುಗಳು ಇಲ್ಲ ಎಂಬ ಉತ್ತರ ಕೇಳಿ ಬಂದಿದೆ ಎಂದಿದ್ದಾರೆ.
ವಿದ್ಯಾರ್ಥಿಗಳಿಗೆ ಶಾಲಾ ಬಸ್ ಕೊರತೆ ಇದೆ ಎಂಬ ವಿಚಾರ ವಿಧಾನ ಸಭೆಯಲ್ಲಿ ಇಂದು ಚರ್ಚೆಯಾಯ್ತು. ಈ ವಿಷಯವನ್ನು ಸಿದ್ಧರಾಮಯ್ಯ ಪ್ರಸ್ತಾಪಿಸಿದರು. ಇದರೊಟ್ಟಿಗೆ ಇನ್ನು ಹಲವು ವಿಷಯವನ್ನು ಅವರು ಪ್ರಸ್ತಾಪಿಸಿದರು.
2/ 7
ವಿಧಾನಸಭೆಯಲ್ಲಿ ಇಂದು ಮಾತಿಗಿಳಿದ ಸದ್ಧರಾಮಯ್ಯ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಗೆ ಬರಲು ಅನುಭವಿಸಿತ್ತಿರುವ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ವಿವರಿಸಿದರು ಇದರೊಟ್ಟಿಗೆ ಅದರಲ್ಲಿ ಸಾರ್ವಜನಿಕರ ಸಮಸ್ಯೆ ಬಗ್ಗೆ ವಿವರಿಸಿದರು.
3/ 7
ಅನೇಕ ಕಡೆಗಳಲ್ಲಿ ಬಸ್ಸುಗಳ ಸಮಸ್ಯೆ ಇದೆ. ಕೊವೀಡ್ ನಂತರ 40 ರಷ್ಟು ಬಸ್ಸುಗಳು ಕಡಿತ ಆಗಿವೆ ಆದಾದ ನಂತರ ಈಗ ಎಲ್ಲವೂ ಮೊದಲಿನಂತಾಗಿದ್ದರೂ ಸಹ ಪೂರ್ಣ ಪ್ರಮಾಣದಲ್ಲಿ ಬಸ್ ಓಡಾಟ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದರು.
4/ 7
ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಹೋದಾಗ, ಬಸ್ಸುಗಳ ಬಗ್ಗೆ ದೂರು ಕೇಳಿದ್ದಾರಂತೆ ಜನರು ತಾವಾಗಿಯೇ ಬಂದು ಬಸ್ನಿಂದಾಗುತ್ತಿರುವ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರಂತೆ. ಡಿಸಿ ಅವರಿಗೆ ತಿಳಿಸಿದಾಗ , ಸ್ಟಾಪ್ ಇಲ್ಲ, ಬಸ್ಸುಗಳು ಇಲ್ಲ ಎಂಬ ಉತ್ತರ ಕೇಳಿ ಬಂದಿದೆ ಎಂದಿದ್ದಾರೆ.
5/ 7
ಇದು ಗಂಭೀರವಾದ ವಿಷಯ ಜನರು ಆಸ್ಪತ್ರೆ, ಜಾತ್ರೆಗಳಿಗೆ ಹೋಗಬೇಕು. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಬೇಕು ವಿದ್ಯಾರ್ಥಿಗಳಂತೂ ಪ್ರತಿನಿತ್ಯ ಎರಡು ಬಾರಿ ಇದೇ ಬಸ್ಸುಗಳನ್ನು ಅವಲಂಬಿಸಿರುತ್ತಾರೆ.
6/ 7
ಯಾಕೆ ಇಷ್ಟು ದಿನ ಕೆಎಸ್ಆರ್ಟಿಸಿ ಬಸ್ಸುಗಳನ್ನು ಇಟ್ಟು ಕೊಂಡಿದ್ದೀರಿ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿ. ಈ ಸಮಸ್ಯೆಗಳ ಬಗ್ಗೆ ಅರ್ಧಗಂಟೆ ಚರ್ಚೆಗೆ ಕೊಡಬೇಕು ಎಂದು ಅವರು ಕೇಳಿದ್ದಾರೆ.
7/ 7
ನಿಜಕ್ಕೂ ಇದೊಂದು ಗಂಭಿರ ಸಮಸ್ಯೆ. ಸಾಮಾನ್ಯವಾಗಿ ಎಲ್ಲಾ ಭಾಗದಲ್ಲೂ ಬಸ್ಗಳ ಕೊರತೆ ಇದೆ. ಎಲ್ಲಾ ಕಡೆಯೂ ಬಸ್ಗಳು ಓವರ್ ಲೋಡ್ ಆಗಿಯೇ ಇರುತ್ತದೆ. ಅದರಲ್ಲು ಕೆಲವು ನಿಗದಿತ ಸಮಯದಲ್ಲಿ ಈ ಸಮಸ್ಯೆ ವಿದ್ಯಾರ್ಥಿಗಳನ್ನು ತುಂಬಾ ಕಾಡುತ್ತದೆ.