ಮನೆಯಲ್ಲೇ ಮಾಡಬಹುದಾದ ಹಲವಾರು ಪ್ರಯೋಗಗಳಿರುತ್ತವೆ. ನಿಮ್ಮ ಮಕ್ಕಳಿಗೆ ಶಾಲೆಯಲ್ಲಿ ವಿಜ್ಞಾನ ಪ್ರಯೋಗಗಳನ್ನು ಮಾಡಿಕೊಂಡು ಬರುವಂತೆ ಸೂಚಿಸಿದ್ದರೆ ನೀವು ಖಂಡಿತ ಇ ಪ್ರಯೋಗಗಳನ್ನು ನಿಮ್ಮ ಮಕ್ಕಳಿಗೆ ಮಾಡಿಸಬಹುದು.
2/ 7
ಮಕ್ಕಳು ಪ್ರಯೋಗಗಳನ್ನು ಮಾಡಲು ಬಹಳ ಆಸಕ್ತರಾಗಿರುತ್ತಾರೆ. ಅಷ್ಟೇ ಅಲ್ಲ ತುಂಬಾ ಕುತೂಹಲ ಮಕ್ಕಳಲ್ಲಿರುತ್ತದೆ. ಆದ್ದರಿಂದಲೇ ಮಕ್ಕಳು ಇ ಪ್ರಯೋಗಗಳನ್ನು ಮಾಡಲು ಕಾಯುತ್ತಿರುತ್ತಾರೆ.
3/ 7
ಇಲ್ಲಿ ಕೆಲವೊಂದು ಪ್ರಯೋಗದ ಐಡಿಯಾ ನೀಡಲಾಗಿದೆ. ಮೊದಲನೆಯದಾಗಿ ಒಂದು ಮೇಣದ ಬತ್ತಿಯನ್ನು ತೆಗೆದುಕೊಳ್ಳಿ ಅದಕ್ಕೆ ಬೆಂಕಿ ಹಚ್ಚಿ ಅದಕ್ಕೊಂದು ಗಾಜಿನ ಪಾತ್ರೆ ಮುಚ್ಚಿ ಆಗ ಏನಾಗುತ್ತದೆ ನೀವೆ ಗಮನಿಸಿ.
4/ 7
ಪ್ರಾಯೋಗಿಕ ಶಿಕ್ಷಣದಿಂದ ಮಾತ್ರ ಮಕ್ಕಳಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೇವಲ ಪಠ್ಯ ಚಟುವಟಿಕೆ ಒಂದೇ ಅಲ್ಲ ಪ್ರಾಯೋಗಿಕ ಜ್ಞಾನದ ಅವಶ್ಯಕತೆ ತುಂಬಾ ಇರುತ್ತದೆ.
5/ 7
ವಾತ ಹಾಗೂ ನಿರ್ವಾತದ ಕಲ್ಪನೆ, ಬೆಂಕಿ ಮತ್ತು ವಿದ್ಯುತ್ ಶಕ್ತಿ, ಪೀನ ಮತ್ತು ನಿಮ್ನ ದರ್ಪಣ, ಬೆಂಕಿಯ ಶಕ್ತಿ, ಹಾಗೂ ನೀರಿನ ವಕ್ರೀಭವನ, ಆಂತರಿಕ ಶಕ್ತಿ, ಅಯಸ್ಕಾಂತೀಯ ಶಕ್ತಿ, ಗುರುತ್ವಾಕರ್ಷಣೆ, ಈ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೀವು ಪ್ರಯೋಗ ಮಾಡಬಹುದು.
6/ 7
ಪ್ರಯೋಗ ಮಾಡಲು ಉತ್ತಮ ಉಪಕರಣ ಅಥವಾ ದುಬಾರಿ ವಸ್ತುಗಳ ಅವಶ್ಯಕತೆ ಇರುವುದಿಲ್ಲ ನಿಮ್ಮ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ನೀವು ಪ್ರಯೋಗ ಮಾಡಬಹುದು.
7/ 7
ಒಂದು ಹಾಳೆಯ ಮೇಲೆ ಮೇಣದ ಬತ್ತಿ ರಸವನ್ನು ಹಚ್ಚಿ ಮತ್ತು ಅದನ್ನು ಮನೆಯ ದಾರಿ ಸಮೀಪದ ಕಿಟಕಿಗೆ ನೇತು ಹಾಕಿ. ಅದು ಹೊರಗಿನ ಕಾರ್ಬನ್ ಕಸವನ್ನು ಹೀರಿಕೊಳ್ಳುತ್ತದೆ ಇದರಿಂದ ನೀವು ಅಲ್ಲಿ ಎಷ್ಟರ ಮಟ್ಟಿಗೆ ಮಾಲಿನ್ಯವಾಗಿದೆ ಎಂಬುದನ್ನು ಕಂಡುಹಿಡಿಯಬಹುದು.