SBI PO Admit Card 2022: ಎಸ್ಬಿಐ ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಕೆಲವೇ ದಿನ ಬಾಕಿ
SBI PO Admit Card 2022: SBI PO ಪರೀಕ್ಷೆ 2022 ಮೂಲಕ, ಒಟ್ಟು 1673 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಡಿಸೆಂಬರ್ 17, 18, 19 ಮತ್ತು 20, 2022 ರಂದು ಪರೀಕ್ಷೆ ನಡೆಯಲಿದ್ದು ಇನ್ನೂ ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಿಲಿಮ್ಸ್ ಪರೀಕ್ಷೆಗೆ ಪ್ರವೇಶಾತಿ ಆರಂಭಮಾಡಲಾಗಿದೆ. ಎಸ್ಬಿಐ ಪಿಒ ಪ್ರಿಲಿಮ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಇಲ್ಲಿ ನೀಡಿರುವ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಬಹುದು. ಈ ಕುರಿತು ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.
2/ 8
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಲು . ಅಧಿಕೃತ ಜಾಲತಾಣಕ್ಕೆ ನೀವು ಭೇಟಿ ನೀಡಿ ನಂತರ ಸೇವ್ ಮಾಡಲು ಬಯಸಿದರೆ ಆ ಆಯ್ಕೆ ಕೂಡ ಲಭ್ಯವಿದೆ. ಪ್ರೊಬೇಷನರಿ ಆಫೀಸರ್ ಹುದ್ದೆಗೆ ಎಸ್ಬಿಐ ಪಿಒ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
3/ 8
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಪ್ರಿಲಿಮ್ಸ್ ಪರೀಕ್ಷೆಯನ್ನು ಡಿಸೆಂಬರ್ 17, 18, 19 ಮತ್ತು 20, 2022 ರಂದು ನಡೆಸಲಾಗುವುದು. ಸದ್ಯ ಈ ಲಿಂಕ್ ಸ್ಥಗಿತವಾಗಿದೆ. ಆದರೆ ಸದ್ಯದಲ್ಲೇ ಇದನ್ನು ಸಕ್ರಿಯ ಮಾಡಲಾಗುವುದು.
4/ 8
ಈ ಲಿಂಕ್ ಸಕ್ರಿಯಗೊಂಡ ತಕ್ಷಣ ನೀವು ನಿಮ್ಮ ಪ್ರವೇಶ ಕಾರ್ಡ್ಅನ್ನು ಸೇವ್ ಮಾಡಬಹುದು ಅಷ್ಟೇ ಅಲ್ಲ ಡೌನ್ಲೋಡ್ ಕೂಡಾ ಮಾಡಬಹುದು. ಅತಿ ಶೀಘ್ರದಲ್ಲಿ ಈ ಲಿಂಕ್ ಸಕ್ರಿಯಗೊಳ್ಳಲಿದೆ.
5/ 8
ಅಭ್ಯರ್ಥಿಗಳು ಲಿಂಕ್ ಅನ್ನು ಸಕ್ರಿಯಗೊಳಿಸಲು ಕಾಯಬೇಕಾಗುತ್ತದೆ. SBI PO ಪರೀಕ್ಷೆ 2022 ಮೂಲಕ, ಒಟ್ಟು 1673 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮೂರು ಹಂತಗಳಲ್ಲಿ ಅಭ್ಯರ್ಥಿಗಳ ಅರ್ಹತಾ ಪರೀಕ್ಷೆ ನಡೆಯುತ್ತದೆ. ಅದನ್ನು ಪೂರ್ಣಗೊಳಿಸಿದವರಿಗೆ ಉದ್ಯೋಗ ದೊರೆಯುತ್ತದೆ.
6/ 8
ಇದು ಮೂರು ಹಂತದ ಪರೀಕ್ಷೆಯಾಗಿದ್ದು, ಪ್ರಿಲಿಮ್ಸ್, ಮುಖ್ಯ ಮತ್ತು ಸೈಕೋಮೆಟ್ರಿಕ್ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಆಯ್ಕೆಯಾಗಲು ಅಭ್ಯರ್ಥಿಗಳು ಈ ಮೂರು ಪರೀಕ್ಷೆಗಳಿಗೆ ಅರ್ಹತೆ ಪಡೆಯಬೇಕು. ಆಯ್ಕೆ ಪ್ರಕ್ರಿಯೆಯ ಮೂರನೇ ಹಂತವು ಸೈಕೋಮೆಟ್ರಿಕ್ ಪರೀಕ್ಷೆಯಾಗಿದೆ.
7/ 8
ಪೂರ್ವಭಾವಿ ಪರೀಕ್ಷೆಯಲ್ಲಿ 100 ಅಂಕಗಳಿಗೆ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಿರುತ್ತದೆ. ಮುಖ್ಯ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಿಗೆ 200 ಅಂಕಗಳಿಗೆ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಮತ್ತು 50 ಅಂಕಗಳಿಗೆ ವಿವರಣಾತ್ಮಕ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ.
8/ 8
ಇವಿಷ್ಟು ಪರೀಕ್ಷೆಯ ಕುರಿತಾದ ಮಾಹಿತಿಯಾಗಿದ್ದು ಇದಾದ ನಂತರ ಸಂದರ್ಶನ ವಿಧಾನ ಕೂಡ ಇರುತ್ತದೆ. ಈ ಎಲ್ಲಾ ಹಂತಗಳನ್ನು ಪೂರ್ತಿ ಗೊಳಿಸಿದವರಿಗೆ ಉದ್ಯೋಗ ಲಭಿಸುತ್ತದೆ.