Republic Day Dress: ಗಣರಾಜ್ಯೋತ್ಸವಕ್ಕೆ ನಿಮ್ಮ ಮಕ್ಕಳನ್ನು ಹೀಗೆ ರೆಡಿ ಮಾಡಿ
ಭಾರತೀಯ ಸಾಂಪ್ರದಾಯಿಕ ಉಡುಪುಗಳಲ್ಲಿ ಚಿಕ್ಕ ಮಕ್ಕಳು ನಿಜವಾಗಿಯೂ ಮುದ್ದಾಗಿ ಕಾಣುತ್ತಾರೆ. ಘಾಘ್ರಾ ಚೋಲಿ, ಸಲ್ವಾರ್ ಕಮೀಜ್, ಕುರ್ತಾ ಪೈಜಾಮ ಅಥವಾ ಪಠಾಣ್ ಸೂಟ್ ಇವುಗಳ ಮೂಲಕ ತಾಯಂದಿರು ತಮ್ಮ ಪುಟ್ಟ ಮಕ್ಕಳನ್ನು ಸಿದ್ಧಗೊಳಿಸಬಹುದು.
ಪ್ರತಿಯೊಂದು ಶಾಲೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಮಕ್ಕಳನ್ನು ನಾನಾ ರೀತಿಯ ಉಡುಪುಗಳಿಂದ ಸಿದ್ಧಗೊಳಿಸುತ್ತಾರೆ. ಅಷ್ಟೇ ಅಲ್ಲ ಇನ್ನೂ ಕೆಲವು ಶಾಲೆಗಳಲ್ಲಿ ಪ್ಯಾನ್ಸಿಡ್ರೆಸ್ ಕಾಂಪಿಟೇಶನ್ ಕೂಡಾ ಇರುತ್ತದೆ.
2/ 7
ಗಣರಾಜ್ಯೋತ್ಸವಕ್ಕೆ ವಿದ್ಯಾರ್ಥಿಗಳಿಗೆ ಥೀಮ್ಗೆ ತಕ್ಕ ಹಾಗೆ ಡ್ರೆಸ್ ಮಾಡಲು ಪಾಲಕರು ಹಲವಾರು ಐಡಿಯಾಗಳನ್ನು ಹುಡುಕುತ್ತಿರುತ್ತಾರೆ. ಅದಕ್ಕೆ ಬೇಕಾದ ಕೆಲವು ಉಪಾಯಗಳನ್ನು ಹಾಗೂ ಡ್ರೆಸ್ಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
3/ 7
ನಿಮ್ಮ ಮಕ್ಕಳಿಗೆ ದೇಶಭಕ್ತಿ ವಿಷಯಕ್ಕೆ ಸಂಬಂಧಿಸಿದಂತೆ ಡ್ರೆಸ್ ಮಾಡುವುದು ಉತ್ತಮ ಅಥವಾ ಯಾರಾದರೂ ಸ್ವಾತಂತ್ರ್ಯ ಹೋರಾಟಗಾರರ ರೀತಿ ಉಡುಪು ಹಾಕುವುದು ಉತ್ತಮ. ಅಂಬೇಡ್ಕರ್, ಗಾಂಧೀಜಿ, ಜವಾಹರ್ ಲಾಲ್ ನೆಹರು, ಭಗತ್ ಸಿಂಗ್ ಹೀಗೆ ಹಲವು ರಾಷ್ಟ್ರನಾಯಕರ ವೇಷವನ್ನೂ ಕೂಡಾ ಹಾಕಬಹುದು.
4/ 7
ವೀರರ ಮತ್ತು ಹುತಾತ್ಮರನ್ನು ನೆನಪಿಸುವ ಉಡುಗೆ ತೊಡಿಸಬಹುದು. ಹೆಣ್ಣು ಮಕ್ಕಳಿಗೆ ಅಂದದ ಕೇಸರಿ, ಬಿಳಿ, ಹಸಿರು ಮತ್ತು ನೀಲಿ ಬಣ್ಣದ ಫ್ರಾಕ್ ಧರಿಸಬಹುದು. ಕೈಗೆ ಕೇಸರಿ ಬಿಳಿ ಹಸಿರಿನ್ ರಬ್ಬರ್ ಧರಿಸಬಹುದು. ಹೇರ್ ಬ್ಯಾಂಡ್ ಧರಿಸಬಹುದು.
5/ 7
ಕೇಸರಿ ರಿಬ್ಬನ್ ಹಾಗೂ ಕ್ಯಾಪ್ ಧರಿಸಬಹುದು. ಬಿಳಿ ಸೀರೆ ಉಡಿಸಬಹುದು. ಕುರ್ತಾ-ಪೈಜಾಮ ಅಥವಾ ಧೋತಿ-ಕುರ್ತಾವನ್ನೂ ಕೂಡಾ ಗಂಡು ಮಕ್ಕಳಿಗೆ ಹಾಕಬಹುದು. ಪೇಟ ಧರಿಸಬಹುದು.
6/ 7
ಭಾರತೀಯ ಸಾಂಪ್ರದಾಯಿಕ ಉಡುಪುಗಳಲ್ಲಿ ಚಿಕ್ಕ ಮಕ್ಕಳು ನಿಜವಾಗಿಯೂ ಮುದ್ದಾಗಿ ಕಾಣುತ್ತಾರೆ. ಘಾಘ್ರಾ ಚೋಲಿ, ಸಲ್ವಾರ್ ಕಮೀಜ್, ಕುರ್ತಾ ಪೈಜಾಮ ಅಥವಾ ಪಠಾಣ್ ಸೂಟ್ ಇವುಗಳ ಮೂಲಕ ತಾಯಂದಿರು ತಮ್ಮ ಪುಟ್ಟ ಮಕ್ಕಳನ್ನು ಸಿದ್ಧಗೊಳಿಸಬಹುದು.
7/ 7
ಪಂಜಾಬಿ ಭಾಂಗ್ರಾ, ಗುಜರಾತಿ ಗರ್ಬಾ, ಅಸ್ಸಾಂನ ಬಿಹು ನೃತ್ಯ, ಮಹಾರಾಷ್ಟ್ರದ ಲಾವ್ನಿ ಅಥವಾ ಭರತನಾಟ್ಯಂ ಅಥವಾ ದಕ್ಷಿಣದ ಕಥಕ್ಕಳಿ ಯಾವುದೇ ಪ್ರದೇಶದ ವರ್ಣರಂಜಿತ ವೇಷಭೂಷಣದಲ್ಲಿ ನೀವು ನಿಮ್ಮ ಮಗುವನ್ನು ಸಿದ್ಧಗೊಳಿಸಬಹುದು.