Mid Day Meal: ಇನ್ಮೇಲೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ರಾಗಿ ಗಂಜಿ ಸಿಗುತ್ತೆ!

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಆಂದ್ರದಲ್ಲಿ ಒಂದು ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಬಿಸಿ ಊಟದಲ್ಲಿ ರಾಗಿ ಗಂಜಿ ನೀಡಲಾಗುತ್ತದೆ.

First published:

  • 18

    Mid Day Meal: ಇನ್ಮೇಲೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ರಾಗಿ ಗಂಜಿ ಸಿಗುತ್ತೆ!

    ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರದ ಮಧ್ಯಾಹ್ನದ ಊಟದ ಯೋಜನೆಯಲ್ಲಿ ಮುದ್ದೆಯನ್ನು ನೀಡಲು ಆಂದ್ರಪ್ರದೇಶ ಸಿದ್ಧವಾಗಿದೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ರಾಗಿ ಮಾಲ್ಟ್ ಪಾನೀಯವನ್ನು ಬಿಸಿ ಊಟದಲ್ಲಿ ಸೇರಿಸಿದ್ದಾರೆ.

    MORE
    GALLERIES

  • 28

    Mid Day Meal: ಇನ್ಮೇಲೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ರಾಗಿ ಗಂಜಿ ಸಿಗುತ್ತೆ!

    ಮಂಗಳವಾರ ತಾಡೆಪಲ್ಲಿ ಕ್ಯಾಂಪ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆನ್‌ಲೈನ್‌ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಗನ್, 37,63,698 ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ಅನ್ನು ನೀಡಲಾಗುವುದು ಎಂದು ಹೇಳಿದರು.

    MORE
    GALLERIES

  • 38

    Mid Day Meal: ಇನ್ಮೇಲೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ರಾಗಿ ಗಂಜಿ ಸಿಗುತ್ತೆ!

    ರಾಜ್ಯಾದ್ಯಂತ 44,392 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ಬೆಳಗಿನ ಮೆನುವಿನ ಭಾಗವಾಗಿರುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಮತ್ತು ಶೈಕ್ಷಣಿಕ ವಾತಾವರಣವನ್ನು ಸುಧಾರಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.

    MORE
    GALLERIES

  • 48

    Mid Day Meal: ಇನ್ಮೇಲೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ರಾಗಿ ಗಂಜಿ ಸಿಗುತ್ತೆ!

    ರಾಗಿ ಗಂಜಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಹೆಚ್ಚುವರಿ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ರಕ್ತಹೀನತೆಯ ಸಮಸ್ಯೆ ಹೊಂದಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ ಎಂದು ಜಗನ್ ಹೇಳಿದರು.

    MORE
    GALLERIES

  • 58

    Mid Day Meal: ಇನ್ಮೇಲೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ರಾಗಿ ಗಂಜಿ ಸಿಗುತ್ತೆ!

    ಸರ್ಕಾರದೊಂದಿಗೆ ಪಾಲುದಾರಿಕೆ ಹೊಂದಿದ್ದಕ್ಕಾಗಿ ಮತ್ತು ವಾರ್ಷಿಕ 86 ಕೋಟಿ ವೆಚ್ಚದಲ್ಲಿ 42 ಕೋಟಿ ಭರಿಸಲು ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್‌ಗೆ ಧನ್ಯವಾದ ಅರ್ಪಿಸಿದರು. ದಿನನಿತ್ಯದ ಮೆನು ಬದಲಾವಣೆ ಮತ್ತು ಪೌಷ್ಟಿಕಾಂಶದ ಪದಾರ್ಥಗಳೊಂದಿಗೆ ವಿದ್ಯಾರ್ಥಿಗಳಿಗೆ 15 ವಿಧದ ಆಹಾರವನ್ನು ಒದಗಿಸುತ್ತಿದೆ.

    MORE
    GALLERIES

  • 68

    Mid Day Meal: ಇನ್ಮೇಲೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ರಾಗಿ ಗಂಜಿ ಸಿಗುತ್ತೆ!

    ವಿದ್ಯಾರ್ಥಿಗಳಿಗೆ ವಾರದಲ್ಲಿ ಐದು ದಿನ ಬೇಯಿಸಿದ ಮೊಟ್ಟೆಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಕಡಲೆ ಚಿಕ್ಕಿ ಸಿಗುತ್ತಿದ್ದರೆ, ಇನ್ನು ಮುಂದೆ ಉಳಿದ ದಿನಗಳಲ್ಲಿ ರಾಗಿ ಮಾಲ್ಟ್ ನೀಡಲಾಗುವುದು.

    MORE
    GALLERIES

  • 78

    Mid Day Meal: ಇನ್ಮೇಲೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ರಾಗಿ ಗಂಜಿ ಸಿಗುತ್ತೆ!

    ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಅವರ ಹಸಿವನ್ನು ನೀಗಿಸುವ ಭರವಸೆಯನ್ನು ನೀಡುತ್ತಿದ್ದಾರೆ.

    MORE
    GALLERIES

  • 88

    Mid Day Meal: ಇನ್ಮೇಲೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ರಾಗಿ ಗಂಜಿ ಸಿಗುತ್ತೆ!

    ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಅಧ್ಯಕ್ಷ ಆರ್.ಜೆ.ರತ್ನಾಕರ್ ಅವರು ಪುಟ್ಟಪರ್ತಿಯಲ್ಲಿ ಆನ್‌ಲೈನ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನದ ಊಟದ ಕಾರ್ಯಕ್ರಮದಲ್ಲಿ ಟ್ರಸ್ಟ್ ಅನ್ನು ಸರ್ಕಾರದ ಪಾಲುದಾರರನ್ನಾಗಿ ಮಾಡಿದ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

    MORE
    GALLERIES