Anganwadi Workers: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಕೊನೆ ಯಾವಾಗ? ಈ ಬಾರಿ ಬಜೆಟ್ನಲ್ಲಿ ಸಿಗುತ್ತಾ ಗುಡ್ ನ್ಯೂಸ್!
ಹೊಸ ರಾಷ್ಟೀಯ ಶಿಕ್ಷಣ ನೀತಿಯ ಪ್ರಕಾರ ಇನ್ನು ಮುಂದೆ ಖಡ್ಡಾಯವಾಗಿ ಹತ್ತು ಹಾಗೂ ಹನ್ನೆರಡನೇ ತರಗತಿ ಪಾಸ್ ಆಗಿದ್ದರೆ ಮಾತ್ರ ಉದ್ಯೋಗ ನೀಡಲಾಗುವುದು ಅಥವಾ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೆಲಸದಲ್ಲಿ ಹಲವಾರು ಸವಾಲುಗಳನ್ನು ಮತ್ತು ಸಮಸ್ಯೆಗಳನ್ನು ಆಗಾಗ ಎದುರಿಸುತ್ತಾರೆ. ಅವರು ಅನುಭವಿಸುವ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗದೆ ಪ್ರತಿಭಟನೆಗಳನ್ನೂ ಸಹ ಕೈಗೊಳ್ಳುತ್ತಾರೆ.
2/ 8
ಮನೆ ಮನೆಗೆ ತಿರುಗಿ ಮಕ್ಕಳ ಪೋಷಕಾಂಶ, ಆರೋಗ್ಯ, ಬಾಳಂತಿ ಹಾಗೂ ಬಸುರಿ ಹೆಂಗಸರ ಆರೈಕೆಯಿಂದ ಹಿಡಿದು ಗ್ರಾಮದ ಪ್ರತೊಯೊಬ್ಬರ ಆರೋಗ್ಯದ ಕುರಿತು ಕಾಳಜಿವಹಿಸುವ ಜವಾಬ್ಧಾರಿ ಅಂಗನವಾಡಿ ಕಾರ್ಯಕರ್ತೆಯರಿಗಿರುತ್ತದೆ. ಆದರೂ ಸಹ ಅವರಿಗೆ ಕಡಿಮೆ ವೇತನ ಸಿಗುತ್ತದೆ.
3/ 8
ಸೀಮಿತ ಉದ್ಯೋಗ ಭದ್ರತೆ: ಅಂಗನವಾಡಿ ಕಾರ್ಯಕರ್ತೆಯರು ಸ್ಥಿರ ಉದ್ಯೋಗವನ್ನು ಹೊಂದಿಲ್ಲದಿರಬಹುದು, ಏಕೆಂದರೆ ಅವರ ಸ್ಥಾನಗಳು ಸಾಮಾನ್ಯವಾಗಿ ತಾತ್ಕಾಲಿಕ ಅಥವಾ ಗುತ್ತಿಗೆ ಆಧಾರಿತವಾಗಿರುತ್ತವೆ. ಆದ್ದರಿಂದ ತಾವೂ ಯಾವಾಗಲೂ ಈ ಉದ್ಯೋಗವನ್ನೇ ಮಾಡುತ್ತೇವೆ ಎಂಬ ಭದ್ರತೆಯ ಭಾವನೆ ಅವರಿಗಿರುವುದಿಲ್ಲ.
4/ 8
ಭಾರೀ ಕೆಲಸದ ಹೊರೆ: ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರಬಹುದು ಅಥವಾ ಸ್ವಲ್ಪ ಮಾತ್ರವೇ ಮಕ್ಕಳನ್ನು ಹೊಂದಿರುವ ಅಂಗನವಾಡಿ ಕೇಂದ್ರ ಇರಬಹುದು. ಇಂತಹ ಸ್ಥಳದಲ್ಲಿ ಅವರು ನಿಜಕ್ಕೂ ಕಾರ್ಯಕರ್ತೆ ಹಾಗೂ ಸಹಾಯಕಿ ಇಬ್ಬರ ಕೆಲಸವನ್ನೂ ಒಬ್ಬರೇ ನಿರ್ವಹಿಸುವ ಪರಿಸ್ಥಿತಿ ಕೂಡಾ ಕೆಲವು ಕಡೆ ಇದೆ.
5/ 8
ಈ ಸವಾಲುಗಳನ್ನು ಎದುರಿಸಿ ತಮ್ಮ ಕಾರ್ಯವನ್ನು ದಿನನಿತ್ಯ ಕೈಗೊಳ್ಳುವ ಇವರಿಗೆ ಊರ ಜನರ ಬೆಂಬಲ ಹಾಗೂ ಸರ್ಕಾರದ ಪ್ರಶಂಸೆ ಸಿಕ್ಕರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ.
6/ 8
ವೃತ್ತಿಪರ ಅಭಿವೃದ್ಧಿಗೆ ಸೀಮಿತ ಅವಕಾಶಗಳು: ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವೃತ್ತಿಜೀವನವನ್ನು ಮುನ್ನಡೆಸಲು ತರಬೇತಿ ಅಥವಾ ಇತರ ಅವಕಾಶಗಳನ್ನು ಅಷ್ಟಾಗಿ ಹೊಂದಿರುವುದಿಲ್ಲ. ಆದ್ದರಿಂದ ಈ ಬಾರಿ ಶಿಕ್ಷಣ ಇಲಾಖೆ ಅಂಗನವಾಡಿಯ ವರ್ಕರ್ಸ್ಗಳಿಗೆ ಡಿಪ್ಲೋಮಾ ಅಥವಾ ಯಾವುದಾದರೂ ತರಬೇತಿ ಪಡೆಯಲು ಸೂಚಿಸಿದೆ.
7/ 8
ಹೊಸ ರಾಷ್ಟೀಯ ಶಿಕ್ಷಣ ನೀತಿಯ ಪ್ರಕಾರ ಇನ್ನು ಮುಂದೆ ಖಡ್ಡಾಯವಾಗಿ ಹತ್ತು ಹಾಗೂ ಹನ್ನೆರಡನೇ ತರಗತಿ ಪಾಸ್ ಆಗಿದ್ದರೆ ಮಾತ್ರ ಉದ್ಯೋಗ ನೀಡಲಾಗುವುದು ಅಥವಾ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಲಾಗಿದೆ.
8/ 8
ಚುನಾವಣೆ ಹೊಸ್ತಿನಲ್ಲಿರುವ ಕಾರಣ ಸಿಎಂ ಬೊಮ್ಮಾಯಿ ಸರ್ಕಾರ ಈ ಬಾರಿ ಬಜೆಟ್ನಲ್ಲಿ ಜನಪ್ರಿಯ ಘೋಷಣೆಗಳನ್ನು ಮಾಡುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಈ ಬಾರಿಯ ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಗುಡ್ ನ್ಯೂಸ್ ಸಿಗುತ್ತಾ ಅಂತ ಕಾದು ನೋಡಬೇಕಿದೆ.