PGCET ಕೀ ಉತ್ತರಗಳು ಪ್ರಕಟಗೊಂಡಿವೆ, ಇಲ್ಲಿ ನೀಡಿರುವ ಲಿಂಕ್ ಬಳಸಿ ಉತ್ತರ ಪರಿಶೀಲಿಸಿ
PGCET ಪರೀಕ್ಷೆ ಬರೆದವರ ಗಮನಕ್ಕೆ. ಪರೀಕ್ಷೆಯ ಕೀ ಉತ್ತರಗಳು ಪ್ರಕಟಗೊಂಡಿವೆ ನೀವು ಈ ಕೂಡಲೇ ಇಲ್ಲಿ ನೀಡಿರುವ ವೆಬ್ಸೈಟ್ಗೆ ಭೇಟಿ ನೀಡಿ ನಿಮ್ಮ ಉತ್ತರವನ್ನು ಪರಿಶೀಲಿಸಿಕೊಳ್ಳಬಹುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು PGCET ಪರೀಕ್ಷೆಯ ಕೀ ಉತ್ತರವನ್ನು ಪ್ರಕಟ ಮಾಡಿದೆ. ಈ ಉತ್ತರಗಳನ್ನು ಪರಿಶೀಲಿಸಲು ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.
2/ 8
ಈ ವೆಬ್ಸೈಟ್ಗೆ ಭೇಟಿ ನೀಡಿದಾಗ ಅಲ್ಲಿ ನಿಮಗೆ ಬೇಕಾಗಿರುವ ಮಾಹಿತಿ ಲಭ್ಯವಾಗುತ್ತದೆ. ಕೀ ಉತ್ತರಗಳನ್ನು ನೀವು ಡೌನ್ಲೋಡ್ ಕೂಡ ಮಾಡಬಹುದಾದ ಆಪ್ಶನ್ ಇದೆ. ಸೇವ್ ಕೂಡ ಮಾಡಬಹುದು.
3/ 8
ಕಳೆದ ನವೆಂಬರ್ 31ರಂದು ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ಸರಿಯಾದ ಉತ್ತರವನ್ನು ಪರಿಶೀಲಿಸಲು ನೀವು CET ಸಂಖ್ಯೆ ಮತ್ತು ನಿಮ್ಮ ಜನ್ಮದಿನಾಂಕವನ್ನು ನಮೂದಿಸಬೇಕಾಗುತ್ತದೆ. ಈ ಎರಡು ಅಂಶಗಳನ್ನು ನೀಡಿದ ನಂತರ ಕೀ ಉತ್ತರ ಪಟ್ಟಿ ದೊರೆಯುತ್ತದೆ.
4/ 8
ಮೇಲೆ ನೀಡಿರುವ ಲಿಂಕ್ ಅನ್ನು ಓಪನ್ ಮಾಡಿ. ಮುಖಪುಟ ತೆರೆಯುತ್ತದೆ. ಇತ್ತೀಚಿನ ಪ್ರಕಟಣೆಗಳು ಟ್ಯಾಬ್ ಓಪನ್ ಮಾಡಿ ನಂತರ ಅಲ್ಲಿ ನಿಮ್ಮ CET ಸಂಖ್ಯೆ ನಮೂದಿಸಿ ನಂತರ ಪರಿಶೀಲಿಸಬೇಕು.
5/ 8
KEA MBA, MCA ಮತ್ತು MTech ಪರೀಕ್ಷೆಗಳ ಕೀ ಉತ್ತರವನ್ನೂ ಸಹ ಬಿಡುಗಡೆ ಮಾಡಲಾಗಿದೆ. ನೀಡಿರುವ ಉತ್ತರಗಳು ಸರಿಯಿಲ್ಲವೆಂದು ಆಕ್ಷೇಪಣೆ ಇದ್ದರೆ ಡಿಸೆಂಬರ್ 4 ರಂದು ಅದನ್ನು ತಿಳಿಸುವಂತೆ ಸೂಚಿಸಲಾಗಿದೆ.
6/ 8
PGCET ಇದೊಂದು ಸ್ನಾತಕೋತ್ತರ ಪದವಿ ಸೇರಿಕೊಳ್ಳುವ ಮೊದಲು ಬರೆಯುವ ಎಂಟ್ರೆನ್ಸ್ ಪರೀಕ್ಷೆಯಾಗಿದ್ದು ಹಲವಾರು ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿರುತ್ತಾರೆ. ಉನ್ನತ ವ್ಯಾಸಾಂಗದ ಮೆಟ್ಟಿಲಾಗಿ ಈ ಪರೀಕ್ಷೆಯನ್ನು ಪರಿಗಣಿಸಲಾಗುತ್ತದೆ.
7/ 8
ಕೀ ಉತ್ತರಗಳನ್ನು ಪರಿಶೀಲಿಸಿಕೊಳ್ಳುವುದರಿಂದ ನೀವು ಯಾವೆಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದೀರಿ ಎಂದು ಸ್ವ ಮೌಲ್ಯಮಾಪನ ಮಾಡಿಕೊಳ್ಳಬಹುದು. ಹಾಗೇ ನಿಮಗೆ ನಿಮ್ಮ ಫಲಿತಾಂಶವನ್ನು ತಿಳಿಯಲು ಸಹಾಯವಾಗುತ್ತದೆ.
8/ 8
ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಕೂಡಲೇ ಮೇಲೆ ನೀಡಿರುವ ಲಿಂಕ್ ಓಪನ್ ಮಾಡಿ ಕೀ ಉತ್ತರವನ್ನು ಪರೀಕ್ಷಿಸಿ ಮತ್ತು ನಿಮ್ಮ ಅಂಕದ ಮೌಲ್ಯಮಾಪನ ಮಾಡಿಕೊಳ್ಳಿ.