Kiccha Sudeep: ಕಿಚ್ಚ ಸುದೀಪ್ ಮೈ ಆಟೋಗ್ರಾಫ್ ಸಿನಿಮಾ ಶೂಟಿಂಗ್ ನಡೆದ ಶಾಲೆ ಸ್ಥಿತಿ ಈಗ ಹೇಗಿದೆ ನೋಡಿ
ಯಾವ ಕ್ಷಣದಲ್ಲಿ ಬೇಕಾದರೂ ಕಟ್ಟಡ ಕುಸಿದು ಅಪಾಯ ಸಂಭವಿಸೋ ಸಾಧ್ಯತೆಯಿದೆ ಎಂದು ಶಾಲೆಯನ್ನು ನೋಡಿದರೆ ತಿಳಿಯುವಂತಾಗಿದೆ. ಆದಷ್ಟು ಬೇಗ ಕಟ್ಟಡವನ್ನು ಮರು ನಿರ್ಮಾಣ ಮಾಡಿದರೆ ಎಲ್ಲರಿಗೂ ತುಂಬಾ ಸಹಾಯವಾಗುತ್ತದೆ.
ಮಂಡ್ಯದ ಪಾಲಹಳ್ಳಿ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯವೂ ಕಷ್ಟ ಅನುಭವಿಸುತ್ತಿದ್ದಾರೆ. 102 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಈಗ ಮಕ್ಕಳು ನಿತ್ಯವೂ ಪ್ರಾಣ ಭಯದಲ್ಲಿ ಕೂತು ಪಾಠ ಕೇಳುವಂತಾಗಿದೆ.
2/ 7
ಯಾವ ಕ್ಷಣದಲ್ಲಿ ಬೇಕಾದರೂ ಕಟ್ಟಡ ಕುಸಿದು ಅಪಾಯ ಸಂಭವಿಸೋ ಸಾಧ್ಯತೆಯಿದೆ ಎಂದು ಶಾಲೆಯನ್ನು ನೋಡಿದರೆ ತಿಳಿಯುವಂತಾಗಿದೆ. ಆದಷ್ಟು ಬೇಗ ಕಟ್ಟಡವನ್ನು ಮರು ನಿರ್ಮಾಣ ಮಾಡಿದರೆ ಎಲ್ಲರಿಗೂ ತುಂಬಾ ಸಹಾಯವಾಗುತ್ತದೆ.
3/ 7
ಒಂದು ಕಾಲದಲ್ಲಿ ಸಿನಿಮಾದಿಂದ ಫೇಮಸ್ ಆಗಿದ್ದ ಈ ಶಾಲೆಯನ್ನು ಈಗ ಯಾರೂ ಸಹ ತಿರುಗಿಯೂ ನೋಡುತ್ತಿಲ್ಲ. ಅಲ್ಲಿನ ಮಕ್ಕಳಿಗೆ ಕುಳಿತು ಪಾಠ ಕೇಳಲೂ ಆಗದ ಸ್ಥಿತಿ ನಿರ್ಮಾಣವಾಗಿದೆ.
4/ 7
102 ವರ್ಷಗಳ ಇತಿಹಾಸವುಳ್ಳ ಪಾಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳು ದಿನವೂ ಕಟ್ಟದ ಕಾರಣದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಮೈ ಆಟೋಗ್ರಾಫ್ ಸಿನಿಮಾ ಚಿತ್ರೀಕರಣಕ್ಕೆ ಶಾಲೆಯನ್ನ ಬಳಸಿಕೊಂಡು ಚಿತ್ರೀಕರಿಸಲಾಗಿತ್ತು
5/ 7
ನೂರಾರು ವರ್ಷ ಇತಿಹಾಸವುಳ್ಳ ಸರ್ಕಾರಿ ಶಾಲೆಯ ಪರಿಸ್ಥಿತಿ ಕೇಳೊರೆ ಇಲ್ಲಾವಾಗಿದೆ. ಗೋಡೆ ಕುಸಿದು ಶಾಲೆಯಲ್ಲಿ ಕುಳಿತುಕೊಳ್ಳಲೂ ಸ್ಥಳವಿಲ್ಲದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುತ್ತಿದ್ದಾರೆ.
6/ 7
ಹೊಸ ಕಟ್ಟಡ ನಿರ್ಮಾಣ ಮಾಡಿ ಕೊಡುವಂತೆ ಮನವಿ ಮಾಡಿದ್ದರೂ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯ ತೋರಿದೆ. ಇದರೊಂದಿಗೆ 47 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. ಶಾಲೆಗಳನ್ನು ಉಳಿಸ ಬೇಕು. ಕನ್ನಡ ಶಾಲೆಗಳನ್ನು ಬೆಳೆಸ ಬೇಕು ಎಂಬ ಮಾತುಗಳೆಲ್ಲ ಎಲ್ಲಿ ಹೋಯ್ತು ಎನ್ನುವ ಪ್ರಶ್ನೆ ಉದ್ಭವಿಸುತ್ತಿದೆ.
7/ 7
ಜಿಲ್ಲಾಡಳಿತವು ಬಡವರು, ರೈತರ ಮಕ್ಕಳ ಭವಿಷ್ಯಕ್ಕೆ ಮತ್ತು ಅವರ ಓದಿಗೆ ಯಾವ ರೀತಿ ಬೆಂಬಲ ನೀಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಸುದೀಪ್ ಅವರು ಅಭಿನಯಿಸಿದ ಚಿತ್ರದಲ್ಲಿರುವ ಈ ಶಾಲೆ ಈಗ ಈ ಸ್ಥಿತಿಯಲ್ಲಿರುವುದು ಶೋಚನೀಯ