Swami Vivekananda: ಆತ್ಮವಿಶ್ವಾಸವೇ ನಿಜವಾದ ಶಿಕ್ಷಣ: ಸ್ವಾಮಿ ವಿವೇಕಾನಂದ
ನಮ್ಮಲ್ಲಿ ಜೀವನ ನಿರ್ಮಾಣ, ಮನುಷ್ಯ ರಚನೆ, ಚಾರಿತ್ರ್ಯ ನಿರ್ಮಾಣ ಕಲ್ಪನೆಗಳ ಸಮನ್ವಯತೆ ಇರಬೇಕು. ನೀವು ಈ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದರೆ ಮತ್ತು ಅವುಗಳನ್ನು ನಿಮ್ಮ ಜೀವನ ಮತ್ತು ವ್ಯಕ್ತಿತ್ವವನ್ನಾಗಿ ಮಾಡಿಕೊಂಡಿದ್ದರೆ ನೀವು ಪೂರ್ಣ ಶಿಕ್ಷಣ ಹೊಂದಿದ್ದೀರಿ ಎಂದರ್ಥ ಎಂದು ಹೇಳಿದ್ದರು.
ಸ್ವಾಮಿ ವಿವೇಕಾನಂದರೇ ಹೇಳುವಂತೆ ಶಿಕ್ಷಣವೆಂದರೆ 'ಮಾನವೀಯತೆಯ ವಿಕಾಸ, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ. ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ ಎಂದು ವಿವೇಕಾನಂದರು ಹೇಳಿದ್ದಾರೆ. ಭಾರತದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ಒಂದೇ ಪರಿಹಾರ ಎಂದು ನಂಬಿದ್ದರು.
2/ 8
ಭವ್ಯ ಭಾರತದ ಕನಸು ಕಂಡಿದ್ದ ಸ್ವಾಮಿ ವಿವೇಕಾನಂದ ಅವರು ಶಿಕ್ಷಣದ ಬಗ್ಗೆ ಏನು ಹೇಳಿದ್ದರು ಎಂದು ನಾವು ಒಮ್ಮೆ ಅವಲೋಕನ ಮಾಡುವುದಾದರೆ, ಅವರು ಹೇಳಿದ ಮಾತುಗಳು ಒಂದಿಲ್ಲೊಂದು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತದೆ. ತಮ್ಮ ಬದುಕು ರೂಪಿಸಿಕೊಳ್ಳಲು ಸಹಾಯವಾಗುತ್ತದೆ.
3/ 8
ವಿವೇಕಾನಂದರು ಶಿಕ್ಷಣವು ಈಗಾಗಲೇ ಪುರುಷರಲ್ಲಿರುವ ಪರಿಪೂರ್ಣತೆಯ ಅಭಿವ್ಯಕ್ತಿ ಎಂದು ನಂಬಿದ್ದರು. ಆದರೆ ವ್ಯಕ್ತಿಯೊಬ್ಬ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಲು ಇಷ್ಟು ಸಾಲದು ಎಂಬ ಅಭಿಪ್ರಾಯವೂ ಅದರಲ್ಲಿತ್ತು. ಶಿಕ್ಷಣದಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಗೌರವ ಕಲಿಸಬೇಕು ವಿದ್ಯಾರ್ಥಿಗಳು ಅದನ್ನು ಹೊಂದಬೇಕು ಎಂಬುದು ಅವರ ಆಶಯವಾಗಿತ್ತು.
4/ 8
ವಿವೇಕಾನಂದರಿಗೆ ಶಿಕ್ಷಣವು ಕೇವಲ ಮಾಹಿತಿಯ ಸಂಗ್ರಹವಾಗಿರಲಿಲ್ಲ ಹೆಚ್ಚು ಅರ್ಥಪೂರ್ಣವಾಗಿತ್ತು. ಶಿಕ್ಷಣವು ಮಾನವ ನಿರ್ಮಾಣ, ಜೀವನ ನೀಡುವ ಮತ್ತು ಚಾರಿತ್ರ್ಯ ನಿರ್ಮಾಣವ ಸಾಧನ ಎಂದು ಅವರು ಭಾವಿಸಿದ್ದರು. ಅವರಿಗೆ ಶಿಕ್ಷಣವು ಉದಾತ್ತ ವಿಚಾರಗಳ ಸಮೀಕರಣವಾಗಿತ್ತು.
5/ 8
ಶಿಕ್ಷಣವು ನಾವು ನಿಮ್ಮ ಮೆದುಳಿಗೆ ಹಾಕುವ ಮಾಹಿತಿಯ ಪ್ರಮಾಣವಲ್ಲ ಮತ್ತದು ನಿಮ್ಮ ಜೀವನದುದ್ದಕ್ಕೂ ಜೀರ್ಣವಾಗದೆ ಹಾಗೇ ಉಳಿದೇ ಹೋಗಬಾರದು ನೀವು ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಸ್ವೀಕರಿಸಬೇಕು ಎಂದು ಅವರು ಹೇಳಿದ್ದರು.
6/ 8
ನಮ್ಮಲ್ಲಿ ಜೀವನ ನಿರ್ಮಾಣ, ಮನುಷ್ಯ ರಚನೆ, ಚಾರಿತ್ರ್ಯ ನಿರ್ಮಾಣ ಕಲ್ಪನೆಗಳ ಸಮನ್ವಯತೆ ಇರಬೇಕು. ನೀವು ಈ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದರೆ ಮತ್ತು ಅವುಗಳನ್ನು ನಿಮ್ಮ ಜೀವನ ಮತ್ತು ವ್ಯಕ್ತಿತ್ವವನ್ನಾಗಿ ಮಾಡಿಕೊಂಡಿದ್ದರೆ ನೀವು ಪೂರ್ಣ ಶಿಕ್ಷಣ ಹೊಂದಿದ್ದೀರಿ ಎಂದರ್ಥ ಎಂದು ಹೇಳಿದ್ದರು.
7/ 8
ಸ್ವಾಮಿ ವಿವೇಕಾನಂದರ ಪ್ರಕಾರ ಮಕ್ಕಳಿಗೆ ಸಕಾರಾತ್ಮಕ ಶಿಕ್ಷಣವನ್ನು ಮಾತ್ರ ನೀಡಬೇಕು. ಜನಸಾಮಾನ್ಯರಲ್ಲಿ ಕೂಡಾ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದ್ದಾರೆ.
8/ 8
ಇಂದಿಗೂ ಅವರ ಚಿಂತನೆಗಳು ಅವರ ಉದಾರತೆ ಹಲವಾರು ಜನರಿಗೆ ಮಾದರಿಯಾಗಿದೆ. ಅವರ ಆದರ್ಶಗಳನ್ನು ಪಾಲಿಸುವ ಅನೇಕರಿದ್ದಾರೆ. ಯುವಜನತೆ ಹಾಗೂ ಯುವಶಕ್ತಿಯನ್ನೇ ನಂಬಿದ್ದ ವಿವೇಕಾನಂದರು ಹವರಿಗೆ ಸ್ಪೂರ್ತಿಯಾಗಿದ್ದಾರೆ.