ಮಕ್ಕಳಿಗಾಗಿ ಸಂಗೀತ ಚಟುವಟಿಕೆಗಳು ಸಂಪೂರ್ಣವಾಗಿ ಹೊಸ ಆಸಕ್ತಿಯನ್ನು ಹುಟ್ಟುಹಾಕುತ್ತದೆ. ನೆನಪಿನ ಶಕ್ತಿ ಹೆಚ್ಚಿಸಲು ಸಂಗೀತ ಒಂದು ಉತ್ತಮ ಮಾಧ್ಯಮ ಎಂದು ಸಂಶೋಧನೆಗಳು ತಿಳಿಸಿವೆ.
2/ 8
ಸಂಗೀತವು ಕಲಾತ್ಮಕ ಚಟುವಟಿಕೆಯಾಗಿದ್ದು, ಅದರ ಕಲಿಕೆಯನ್ನು ಸಾಧಿಸಲು ಸಾಕಷ್ಟು ಶಿಸ್ತು ಅಗತ್ಯವಿರುತ್ತದೆ. ಇದು ವಿದ್ಯಾರ್ಥಿಗಳಲ್ಲಿನ ವಿವಿಧ ಸಾಮರ್ಥ್ಯಗಳನ್ನು ಬಹಿರಂಗಪಡಿಸಲು ಅವಕಾಶ ಮಾಡಿಕೊಡುತ್ತದೆ.
3/ 8
ಮೆಮೊರಿ, ಹೊಸ ಶಬ್ದಗಳನ್ನು ಕಲಿಯುವುದು, ಅರಿವಿನ ಸಾಮರ್ಥ್ಯ ಹೆಚ್ಚಿಸುವುದು ಮಾನಸಿಕ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ, ಮಕ್ಕಳು ತಮ್ಮ ಭಾವನೆಗಳನ್ನು ಸಂಗೀತದ ಮೂಲಕ ಹೇಳಿಕೊಳ್ಳುವುದು ಅಥವಾ ವ್ಯಕ್ತಪಡಿಸುವುದನ್ನು ಕಲಿಯುತ್ತಾರೆ.
4/ 8
ಈ ಕೌಶಲ್ಯವನ್ನು ಅಭ್ಯಾಸಕ್ಕೆ ತರಲು ಹಲವಾರು ಮಾರ್ಗಗಳಿವೆ, ಹಾಡುವಿಕೆಯಿಂದ, ಅದರ ವಿಭಿನ್ನ ಪಿಚ್ ಮಾಡ್ಯುಲೇಶನ್ ಆಗುತ್ತದೆ. ಟ್ಯೂನಿಂಗ್ನಲ್ಲಿ ಪರಿಣಿತರಾಗುತ್ತಾರೆ. ಅವರೇ ಹೊಸ ಟ್ಯೂನಿಂಗ್ ಸಂಯೋಜಿಸುತ್ತಾರೆ.
5/ 8
ತಮ್ಮದೇ ಆದ ಕೆಲವು ಸಂಶೋಧನೆಗಳನ್ನು ಮತ್ತು ಹೊಸ ಸಾಹಿತ್ಯವನ್ನು ರಚಿಸುವಲ್ಲಿ ಅವರು ಹೆಚ್ಚು ಆಸಕ್ತಿಹೊಂದುತ್ತಾರೆ. ಆಗ ಅವರಲ್ಲಿನ ಬುದ್ಧಿ ಹೆಚ್ಚು ಬೆಳವಣಿಗೆಯಾಗುತ್ತದೆ. ಕೆಲಸ ಮಾಡುವುದು ಮತ್ತು ತಮ್ಮದೇ ಆದ ಸಾಹಿತ್ಯವನ್ನು ರಚಿಸುವ ಸಾಮರ್ಥ್ಯ ಅವರಲ್ಲಿ ಬೆಳೆದರೆ ಅವರು ಸಾಧನೆ ಮಾಡುತ್ತಾರೆ.
6/ 8
ವಾದ್ಯ ನುಡಿಸುವುದು ಸಹ ಸಂಗೀತದ ಪ್ರಮುಖ ಭಾಗವಾಗಿರುತ್ತದೆ. ಇವುಗಳನ್ನು ನುಡಿಸಲು ಏಕಾಗ್ರತೆಯ ಅವಶ್ಯಕಥೆ ಇರುತ್ತದೆ. ಆದ್ದರಿಂದ ಶಾಲೆಗೆ ನಿಮ್ಮ ಮಗು ಹೋಗುತ್ತಿದ್ದರೆ ಅದರೊಟ್ಟಿಗೆ ಸಂಗೀತವನ್ನೂ ಸಹ ನೀವು ಕಲಿಸಬಹುದು.
7/ 8
ಸಂಗೀತದಲ್ಲಿ ದೀರ್ಘ ಉಚ್ಚಾರಣೆ ಮಾಡುವ ಅಗತ್ಯವಿರುತ್ತದೆ ಆದ್ದರಿಂದ ಮಕ್ಕಳು ಉದ್ದನೆಯ ಪದಗಳನ್ನು ಹೇಳಲು ಕಲಿಯುತ್ತಾರೆ. ಉಸಿರಿನ ಹಿಡಿತದಿಂದ ಆರೋಗ್ಯ ಪ್ರಯೋಜನಗಳೂ ಸಹ ಹೆಚ್ಚುತ್ತವೆ.
8/ 8
ಈ ಎಲ್ಲಾ ಕಾರಣಗಳಿಂದ ನಿಮ್ಮ ಮಗುವನ್ನು ಸಂಗೀತ ತರಗತಿಗೆ ಕಳಿಸಿ. ಅವರಲ್ಲಿ ಸಂಗೀತ ಇಷ್ಟ ಪಡುವ ಗುಣ ಬೆಳೆಸಿ ಹಾಗಾದಾಗ ಈ ಮೇಲೆ ತಿಳಿಸಿರುವ ಎಲ್ಲಾ ಪ್ರಯೋಜನಗಳೂ ಸಹ ನಿಮ್ಮ ಮಕ್ಕಳಿಗೆ ದೊರೆಯುತ್ತದೆ.