ಮತ್ತೆ ಕೊರೊನಾ ತನ್ನ ಅಸ್ತಿತ್ವ ತೋರುತ್ತಿರುವ ಈ ವೇಳೆ ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸುವುದು ಬಹಳ ಮುಕ್ಯವಾಗುತ್ತದೆ. ರಾಜ್ಯದಲ್ಲಿ ಕೋವಿಡ್ ಹರಡುವ ಭೀತಿ ಹಿನ್ನೆಲೆ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗುತ್ತಿದೆ.
2/ 7
ವಿದ್ಯಾರ್ಥಿಗಳ ಆರೋಗ್ಯದ ಮುಂಜಾಗೃತಾ ಕ್ರಮವಾಗಿ ಈಗಿನಿಂದಲೇ ಕಟ್ಟು ನಿಟ್ಟಿನ ನಿಯಮ ಪಾಲನೆ ಮಾಡುವುದರಿಂದ ಮುಂದಿನ ಅಪಘಾತಗಳನ್ನು ತಪ್ಪಿಸಬಹುದು ಎಂಬ ನಿಟ್ಟಿನಲ್ಲಿ ಎಲ್ಲಾ ಶಾಲೆಗಳು ಎಚ್ಚೆತ್ತುಕೊಂಡಿವೆ.
3/ 7
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಮಾಸ್ಕ್ ಧರಿಸಿ ಕಾಲೇಜ್ ಪ್ರವೇಶಿಸುವಂತೆ ಸೂಚಿಸಲಾಗಿದೆ.
4/ 7
ಮಾಸ್ಕ್ ಧರಿಸುವುದನ್ನ ಕಡ್ಡಾಯಗೊಳಿಸಿದ ಬೆಂಗಳೂರು ವಿವಿ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯವೆಂದು ತಿಳಿಸಿದೆ. ಆದ್ದರಿಂದ ಎಲ್ಲರೂ ಮಾಸ್ಕ್ ಧರಿಸಬೇಕಾಗುತ್ತದೆ.
5/ 7
ಮಾಸ್ಕ್ ಜೊತೆಗೆ ಬೂಸ್ಟರ್ ಡೋಸ್ ಪಡೆಯಲು ಸೂಚನೆ ನೀಡಲಾಗಿದೆ. ಮುಂಜಾಗೃತಾ ಕ್ರಮವಾಗಿ ಎಷ್ಟು ಹುಶಾಗಿದ್ದರೂ ಸಹ ಕಡಿಮೆ ಆದ ಕಾರಣ ಯಾರೆಲ್ಲಾ ಇದು ವರೆಗೆ ಬೂಸ್ಟರ್ ಡೋಸ್ ಹಾಕಿಸಿಲ್ಲವೋ ಅವರಿಗೆ ಹಾಕಿಸಿಕೊಳ್ಳುವಂತೆ ಸೂಚಿಸಲಾಗಿದೆ.
6/ 7
ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯಮಾಡಲು ಇದೀಗ ನಿರ್ಧಾರ ಕೈಗೊಳ್ಳಲಾಗಿದೆ. ಕೊರೋನಾ ಕುರಿತು ಪೋಷಕರಿಂದ ನಿತ್ಯ ಶಾಲಾ ಮುಖ್ಯಸ್ಥರಿಗೆ ನೂರಾರು ಕರೆಗಳು ಬರಲು ಆರಂಭವಾಗಿದ್ದು ಮುಂಜಾಗೃತಾ ಕ್ರಮ ವಹಿಸಲಾಗಿದೆ.
7/ 7
ಇಂದು ಖಾಸಗಿ ಶಾಲೆ ಆಡಳಿತ ಮಂಡಳಿಗಳ ಜೊತೆ ರುಪ್ಸಾ ಕೂಡಾ ಪದಾಧಿಕಾರಿಗಳ ಸಭೆ ನಡೆಸಿದೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಪದಾಧಿಕಾರಿಗಳ ಸಭೆಯಲ್ಲಿ ಕೊರೊನಾ ಕುರಿತು ಚರ್ಚೆ ಮಾಡಿದ್ದಾರೆ.