ಮಾರ್ಚ್ ತಿಂಗಳಿನಲ್ಲಿ ಸುಮಾರು ಮೂರ್ನಾಲ್ಕು ಹಬ್ಬಗಳಿವೆ. ಅದರಲ್ಲೂ ವಿಶೇಷವಾಗಿ.. ಹೋಳಿ, ಯುಗಾದಿ, ಶ್ರೀರಾಮನವಮಿ ಈ ದಿನದಂದು ವಿದ್ಯಾರ್ಥಿಗಳಿಗೆ ರಜೆ ಸಿಗುತ್ತದೆ. ಇದರ ಜೊತೆ ಇನ್ನೂ ಐದು ರಜೆಗಳಿವೆ. ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 8 ರಂದು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ. ಯುಗಾದಿ ಹಬ್ಬ ಕೂಡ ಮಾರ್ಚ್ ತಿಂಗಳಲ್ಲೇ ಬಂದಿರುವ ಕಾರಣ ವಿದ್ಯಾರ್ಥಿಗಳಿಗೆ ಅಂದೂ ರಜೆ ನೀಡಲಾಗುತ್ತದೆ. ದಿನವಾದ ಮಾರ್ಚ್ 22 ರಂದು ರಜೆ ಸಿಗಲಿದೆ. ಈ ವರ್ಷ ಶೋಭಾಕೃತ ನಾಮ ಸಂವತ್ಸರ ಆರಂಭವಾಗಲಿದೆ. ಈ ತಿಂಗಳಲ್ಲಿ ಶ್ರೀರಾಮನವಮಿ ಹಬ್ಬವೂ ಬಂದಿದೆ. ಈ ತಿಂಗಳ ಕೊನೆಗೆ ಇದರ ರಜೆ ಇರಲಿದೆ. ತಿಂಗಳ ಕೊನೆಯಲ್ಲಿ ಅಂದರೆ 30ರಂದು ರಜೆ ನೀಡಲಾಗುತ್ತದೆ. ರಾಮನವಮಿಯ ಪ್ರಯುಕ್ತ. ಆದ್ದರಿಂದ ರವಿವಾರದ ರಜೆ ಹೊರತು ಪಡಿಸಿ ಶಾಲಾ ಮಕ್ಕಳಿಗೆ ಈ ತಿಂಗಳು ಮೂರು ವಿಶೇಷ ರಜೆ ನೀಡಲಾಗಿದೆ. ತಿಂಗಳಲ್ಲಿ ಸಿಗುವ ಮೂರು ರಜೆ ಹೊರತು ಪಡಿಸಿ ವಾರ ವಾರ ರವಿವಾರದ ರಜೆಗಳಿರುತ್ತವೆ. ಈ ರಜೆಯನ್ನು ಸರಿಯಾಗಿ ಪ್ಲಾನ್ ಮಾಡಿ ತೆಗೆದುಕೊಳ್ಳಿ. ಯಾವಾಗ ರಜೆ ಇದೆ ಎಂದು ಮೊದಲೇ ತಿಳಿದಿದ್ದರೆ. ನೀವು ಎಲ್ಲಾದರೂ ಹೋಗುವುದಾದರೆ ಪ್ಲಾನ್ ಮಾಡಿಕೊಳ್ಳಬಹುದು. ಉತ್ತಮ ರೀತಿಯಲ್ಲಿ ರಜೆ ಕಳಿಯಬಹುದು.