ಅನುಭವದಿಂದ ಕಲಿಯುವುದು ಸ್ವಯಂ ಪ್ರೇರಣೆಯನ್ನು ಉತ್ತೇಜಿಸುವ ಪ್ರಮುಖ ಮಾರ್ಗವಾಗಿದೆ. ಇಂದು ಬೆಳೆಯುತ್ತಿರುವ ಮಕ್ಕಳು ಎಲ್ಲರೊಂದಿಗೆ ಪೈಪೋಟಿಯಲ್ಲಿ ಬೆಳೆಯುವ ಪರಿಸ್ಥಿತಿಗೆ ಸಿಲುಕಿದ್ದಾರೆ. ಜೀವನದಲ್ಲಿ ಯಾವುದೇ ಹಂತಕ್ಕೆ ಹೋದರೂ ಅವರ ಸ್ಥಾನವನ್ನು ಪಡೆಯಲು ಅವರು ಯಾರೊಂದಿಗಾದರೂ ಸ್ಪರ್ಧಿಸಬೇಕಾಗುತ್ತದೆ. ಆದರೆ ಇದಕ್ಕೆ ಪೂರಕವಾಗಿ ಪಾಲಕರು ಮಕ್ಕಳಿಗೆ ಕೆಲವು ಸಲಹೆ ನೀಡಬೇಕಾಗುತ್ತದೆ.