ವಿದ್ಯಾರ್ಥಿಗಳೇ LIC ಸ್ಕಾಲರ್ಶಿಪ್ಗೆ ಅರ್ಜಿ ಹಾಕಲು ಇವತ್ತೇ ಕೊನೆ ದಿನ-20,000 ಮಿಸ್ ಮಾಡ್ಕೋಬೇಡಿ!
LIC Golden Jubilee Scholarship: ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಭಾರತೀಯ ಜೀವ ವಿಮಾ ನಿಗಮ ನೀಡುವ ವಿದ್ಯಾರ್ಥಿ ವೇತನವಾಗಿದೆ. ಒಂದು ಕುಟುಂಬದಿಂದ ಒಬ್ಬ ವಿದ್ಯಾರ್ಥಿ ಮಾತ್ರ ವಿದ್ಯಾರ್ಥಿವೇತನ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು LIC ವೆಬ್ಸೈಟ್ಗೆ ಭೇಟಿ ನೀಡಿ, ಅಲ್ಲಿ 'ಗೋಲ್ಡನ್ ಜುಬಿಲಿ ಫೌಂಡೇಶನ್ ' ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಬೇಕು.
LIC Golden Jubilee Scholarship: ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಭಾರತೀಯ ಜೀವ ವಿಮಾ ನಿಗಮ ನೀಡುವ ವಿದ್ಯಾರ್ಥಿ ವೇತನವಾಗಿದೆ.
2/ 8
ಒಂದು ಕುಟುಂಬದಿಂದ ಒಬ್ಬ ವಿದ್ಯಾರ್ಥಿ ಮಾತ್ರ ವಿದ್ಯಾರ್ಥಿವೇತನ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು LIC ವೆಬ್ಸೈಟ್ಗೆ ಭೇಟಿ ನೀಡಿ, ಅಲ್ಲಿ 'ಗೋಲ್ಡನ್ ಜುಬಿಲಿ ಫೌಂಡೇಶನ್ ' ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಬೇಕು.
3/ 8
ಪ್ರತಿ ವಿಭಾಗದಿಂದ 10 ವಿದ್ಯಾರ್ಥಿಗಳು ಮತ್ತು ವಿಶೇಷ ಹೆಣ್ಣು ಮಕ್ಕಳ ವರ್ಗದಿಂದ 10 ವಿದ್ಯಾರ್ಥಿಳು ಈ ಸ್ಕಾಲರ್ ಶಿಪ್ ಪಡೆಯಲು ಅರ್ಹರಾಗಿದ್ದಾರೆ. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಡಿಸೆಂಬರ್ 18, 2022 ಅಂದರೆ ಇವತ್ತೇ ಕೊನೆಯ ದಿನವಾಗಿದೆ.
4/ 8
ಈ ಸ್ಕಾಲರ್ಶಿಪ್ನ ಷರತ್ತು ಮತ್ತು ಪ್ರಯೋಜನಗಳೇನು? LIC ಗೋಲ್ಡನ್ ಜುಬಿಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಬೇಕಾದರೆ ವಿದ್ಯಾರ್ಥಿಗಳು ಕೆಲವೊಂದು ಷರತ್ತುಗಳಿಗೆ ಬದ್ದರಾಗಿರಬೇಕು. ಅವುಗಳು ಈ ಕೆಳಕಂಡಂತಿವೆ.
5/ 8
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು.
6/ 8
2021-22ರಲ್ಲಿ ಶೇ.60 ಅಂಕಗಳೊಂದಿಗೆ 12ನೇ ತರಗತಿ ಪಾಸಾದವರಿಗೆ ಮತ್ತು 2021-22 ರಲ್ಲಿ ಶೇ. 60 ಅಂಕಗಳೊಂದಿಗೆ 10ನೇ ತರಗತಿ ಪಾಸಾದವರಿಗೆ ಡಿಪ್ಲೋಮಾ ವೊಕೇಶನಲ್/ ITI ವ್ಯಾಸಂಗಕ್ಕಾಗಿ ಈ ಸ್ಕಾಲರ್ ಶಿಪ್ ನೀಡಲಾಗುತ್ತದೆ.
7/ 8
ಉನ್ನತ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ಗೆ ಇವತ್ತೇ ಅಪ್ಲೈ ಮಾಡಿ. ವಿದ್ಯಾರ್ಥಿವೇತನದ ಲಾಭ ಪಡೆದುಕೊಳ್ಳಿ. ಅರ್ಹ ವಿದ್ಯಾರ್ಥಿಗಳಿಗೆ ಮತ್ತು ವಿಶೇಷ ಹೆಣ್ಣು ಮಕ್ಕಳಿಗೆ 2 ವರ್ಷಗಳವರೆಗೆ ಈ ವಿದ್ಯಾರ್ಥಿವೇತನದ ಪ್ರಯೋಜನ ಇರುತ್ತದೆ.
8/ 8
ಈ ಸ್ಕಾಲರ್ಶಿಪ್ಗೆ ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಷಕ್ಕೆ 20,000 ವಿದ್ಯಾರ್ಥಿವೇತನವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. 12ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ 10,000 ವಿದ್ಯಾರ್ಥಿ ವೇತನ ಕೊಡಲಾಗುತ್ತದೆ.