0 ಹೈಪರ್ ಆಕ್ಟೀವ್ ತುಂಟ ಮಕ್ಕಳನ್ನು ಪಾಠದ ಕಡೆ ಗಮನ ಕೊಡುವಂತೆ ಮಾಡುವುದು ತುಂಬಾ ಕಷ್ಟ ಈ ಕಷ್ಟವನ್ನು ಪೋಷಕರು ಮತ್ತು ಶಿಕ್ಷಕರು ಹಲವಾರು ಬಾರಿ ಅನುಭವಿಸಿರುತ್ತಾರೆ. ಆದರೆ ಅಂತಹ ಮಕ್ಕಳನ್ನೂ ಹಿಡಿತದಲ್ಲಿಟ್ಟುಕೊಳ್ಳಲು ಈ ಟಿಪ್ಸ್ ನಿಮಗೆ ಅನುಕೂಲವಾಗಬಹುದು.
2/ 7
ಮಕ್ಕಳನ್ನು ಎದುರು ಬದುರಾಗಿ ಕೂರಿಸಿ ಒಂದು ಸ್ಲೇಟ್ ನೀಡಿ ಅದರಲ್ಲಿ ಒಂದು ಚಿತ್ರ ರಚಿಸಲು ಹೇಳಿ. ಇನ್ನೊಂದು ಮಗುವಿಗೆ ಪ್ರಾಣಿಯ ವಿವರಣೆ ಕೊಡಲು ಹೇಳಿ. ಅದನ್ನು ಕೇಳಿ ಆ ಮಗು ಸರಿಯಾಗಿ ಚಿತ್ರ ಬಿಡಿಸಿದರೆ ಅವರನ್ನು ಪ್ರೋತ್ಸಾಹಿಸಿ. ಹೀಗೆ ಮಾಡುವುದರಿಂದ ನಿಮ್ಮ ಮಗು ವಸ್ತು ಹಾಗೂ ಪ್ರಾಣಿಗಳನ್ನು ಗುರುತಿಸಲು ಆರಂಭಿಸುತ್ತದೆ.
3/ 7
ಡೋಂಟ್ ಆನ್ಸರ್ - ಈ ಆಟವಾಡುವಾಗ ನಿಮ್ಮ ಮಗುವಿನ ಚುರುಕುತನ ಹೆಚ್ಚುತ್ತದೆ. ಯಾವುದಾದರೂ ಒಂದು ಪ್ರಶ್ನೆ ಕೇಳಿದಾಗ ಅದಕ್ಕೆ ಸರಿಯಾದ ಉತ್ತರ ನೀಡದೇ ಇರಬೇಕು. ಉದಾಹರಣೆಗೆ ಸೇಬಿನ ಬಣ್ಣ ಯಾವುದು ಎಂದು ಕೇಳಿದರೆ ಅವರು ಕೆಂಪು ಎನ್ನಬಾರದು ಬದಲಾಗಿ ಹಳದಿ ಎನ್ನಬೇಕು. ಇದು ಏಕಾಗ್ರತೆ ಮತ್ತು ಗಮನವಿಟ್ಟು ಕೇಳುವುದನ್ನು ಕಲಿಸಿ ಕೊಡುತ್ತದೆ.
4/ 7
ಕ್ರೇಜಿ ರೈಲು - ಪ್ರಾಥಮಿಕ ಮತ್ತು ಶಿಶುವಿಹಾರದ ಮಕ್ಕಳಿಗೆ ಸೂಕ್ತವಾಗಿದೆ. ಕ್ರೇಜಿ ಟ್ರೈನ್ ಎನ್ನುವುದು ಒಂದು ಮೋಜಿನ ಆಟ ಇದರಲ್ಲಿ ಮಕ್ಕಳಿಗೆ ದಿಕ್ಕಿನ ಬಗ್ಗೆ ತಿಳಿಸಿಕೊಡುತ್ತದೆ. ಎಡ, ಬಲ, ಮುಂದೆ ಹಿಂದೆ ಹೀಗೆ ಟೀಚರ್ ಹೇಳಿದಂತೆ ಮಕ್ಕಳು ಆಟ ಆಡಬೇಕು. ಈ ಆಟಕ್ಕೆ ಮೂರಕ್ಕಿಂತ ಹೆಚ್ಚು ಜನ ಬೇಕು.
5/ 7
ಬಣ್ಣ ಗುರುತಿಸುವ ಆಟ - ಮಕ್ಕಳಿಗೆ ಒಂದು ಸಾಲಿನಲ್ಲಿ ನಿಲ್ಲಿಸಿ ಒಂದು ಬಣ್ಣದ ಹೆಸರು ಹೇಳಿ ಆ ಬಣ್ಣದ ವಸ್ತುಗಳನ್ನು ಮುಟ್ಟುವಂತೆ ಸೂಚಿಸಿ ಹಾಗೆ ಮಾಡಿದಾಗ ಅವರಿಗೆ ಬಣ್ಣದ ಕುರಿತು ತಿಳುವಳಿಕೆ ಬರುತ್ತದೆ.
6/ 7
ಮಕ್ಕಳಿಗೆ ಯಾವಾಗಲೂ ಪಾಠವೊಂದನ್ನೇ ಕೇಂದ್ರೀಕರಿಸಲು ಹೇಳಿದರೆ ತುಂಬಾ ಕಷ್ಟವಾಗುತ್ತದೆ. ಅವರ ಮನಸ್ಸು ಅಷ್ಟು ಪಕ್ವವಾಗಿರುವುದಿಲ್ಲ. ಆದ್ದರಿಂದ ಆಟದ ಜೊತೆಗೆ ಪಾಠ ಇರಬೇಕು ಎಂಬುದು ಮುಖ್ಯವಾಗುತ್ತದೆ.
7/ 7
ಆಟ ಎಂಬುದು ಪ್ರಾಯೋಗಿಕ ಹಾಗೂ ದೈಹಿಕ ಶ್ರಮದ್ದಾಗಿರಬೇಕು. ಮೊಬೈಲ್ನಲ್ಲಿ ಅಥವಾ ಬೇರೆ ಯಾವುದೇ ಆಟಿಕೆಗಳಲ್ಲಿ ಸಿಗುವ ಆಟಕ್ಕಿಂತ ಈ ರೀತಿ ಶ್ರಮದಾಯಕ ಆಟ ಮುಖ್ಯ.