Life Lesson: ಪ್ರತಿಯೊಬ್ಬರೂ ಕಲಿಯಲೇಬೇಕಾದ ಜೀವನ ಪಾಠ ಇದು!
ಕಲಿಕೆಯನ್ನು ಎಂದಿಗೂ ನಿಲ್ಲಿಸಲೇಬಾರದು ಏನಾದರು ಒಂದು ಹೊಸ ವಿಷಯವನ್ನು ನೀವು ಕಲಿಯುತ್ತಲೇ ಮುಂದೆ ಸಾಗುತ್ತಿರಬೇಕು. ಕೆಲವು ವಿಷಯದ ಬಗ್ಗೆ ನಮಗೆ ತಿಳಿದಿದೆ ಎಂದು ನಾವು ಎಷ್ಟೇ ಯೋಚಿಸಿದರೂ, ಆ ಜ್ಞಾನವನ್ನು ನಾವು ಇತರರೊಂದಿಗೆ ಹಂಚಿಕೊಳ್ಳದೇ ಇದ್ದಾಗ ನೀವು ಮಾಡಿದ್ದೇ ಹೆಚ್ಚು ಎಂಬ ಗರ್ವ ನಿಮ್ಮಲ್ಲಿ ಬೆಳೆಯಬಹುದು.
ಜೀವನದುದ್ದಕ್ಕೂ ನಾವು ಏರುತ್ತಲೇ ಇರುತ್ತೇವೆ ಮತ್ತು ಬೀಳುತ್ತೇವೆ. ಜೀವನವು ನಿರಂತರ ಕಲಿಕೆಯಾಗಿದೆ ಇಂದಿಗೆ ನಾನು ಎಲ್ಲವನ್ನೂ ಕಲಿತಿದ್ದೇನೆ ಎಂದು ಭಾವಿಸುವುದು ತುಂಬಾ ಮೂರ್ಖತನ. ಜೀವನದಲ್ಲಿ ನೀವು ಕಲಿಯ ಬೇಕಾದ ಕೆಲವು ಮುಖ್ಯ ವಿಷಯಗಳ ಕುರಿತು ಇಲ್ಲಿ ಕೆಲವು ಅಂಶಗಳನ್ನು ನೀಡಲಾಗಿದೆ ಗಮನಿಸಿ.
2/ 7
ಇತರ ಜನರ ಜೀವನದ ಬಗ್ಗೆ ತುಲನೆ ಮಾಡಿಕೊಳ್ಳುವುದನ್ನು ನೀವು ಬಿಡಬೇಕು ಇದೂ ಕೂಡಾ ಜೀವನದ ಯಶಸ್ಸಿಗೆ ಬೇಕಾದ ಮೊದಲನೇ ಪಾಠ. ಕೇವಲ ಶಾಲೆ ಹಾಗೂ ತರಗತಿಯಲ್ಲಿ ಕಲಿತ ಪಾಠ ನಿಮ್ಮ ಜೀವನದಲ್ಲಿ ಕೈ ಹಿಡಿಯಲಾರದು ಅನುಭವಗಳೇ ಜೀವನದ ಅತೀ ದೊಡ್ಡ ಪಾಠವಾಗುತ್ತದೆ.
3/ 7
ಆತ್ಮವಿಶ್ವಾಸ ಅಥವಾ ಧೈರ್ಯದ ಕೊರತೆಯಿಂದಾಗಿ ನೀವು ಕೆಲವು ಕಾರ್ಯಗಳಲ್ಲಿ ವಿಫಲರಾಗಬಹುದು. ಆದರೆ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ನೀವು ನಿಮಗನಿಸಿದನ್ನು ಮಾಡಲು ಕಲಿಯಬೇಕು ಯಾವುದಕ್ಕೂ ಹಿಂಜರಿಕೆ ಬೇಡ.
4/ 7
ಕೆಲವು ವಿಷಯದ ಬಗ್ಗೆ ನಮಗೆ ತಿಳಿದಿದೆ ಎಂದು ನಾವು ಎಷ್ಟೇ ಯೋಚಿಸಿದರೂ, ಆ ಜ್ಞಾನವನ್ನು ನಾವು ಇತರರೊಂದಿಗೆ ಹಂಚಿಕೊಳ್ಳದೇ ಇದ್ದಾಗ ನೀವು ಮಾಡಿದ್ದೇ ಹೆಚ್ಚು ಎಂಬ ಗರ್ವ ನಿಮ್ಮಲ್ಲಿ ಬೆಳೆಯಬಹುದು. ಆದರೆ ನೀವು ಇತತರ ಅನುಭವವನ್ನೂ ಕೇಳಿದಾಗ ನಿಮ್ಮ ಸ್ಥಾನದ ಬಗ್ಗೆ ತಿಳಿದುಕೊಳ್ಳುತ್ತೀರಿ.
5/ 7
ನೀವು ಯಶಸ್ವಿ ವೃತ್ತಿಜೀವನ, ಭಾವನಾತ್ಮಕ ತೃಪ್ತಿ ಮತ್ತು ವಿಶ್ವಾಸಾರ್ಹ ಸ್ನೇಹಿತರೊಂದಿಗೆ ಉತ್ತಮ ಜೀವನವನ್ನು ಹೊಂದಲು ಬಯಸಿದರೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಅದೃಷ್ಟವು ನಿಮ್ಮ ಜೀವನವನ್ನು ಹೆಚ್ಚು ದೂರ ಕೊಂಡೊಯ್ಯುವುದಿಲ್ಲ.
6/ 7
ಕಲಿಕೆಯನ್ನು ಎಂದಿಗೂ ನಿಲ್ಲಿಸಲೇಬಾರದು ಏನಾದರು ಒಂದು ಹೊಸ ವಿಷಯವನ್ನು ನೀವು ಕಲಿಯುತ್ತಲೇ ಮುಂದೆ ಸಾಗುತ್ತಿರಬೇಕು. ಜೀವನದಲ್ಲಿ ಸೋಲನ್ನು ಅನುಭವಿಸಿದರೂ ಸಹ ಗೆಲುವು ಎಂಬ ಬಾಗಿಲು ನಾಳೆಗಾಗಿ ತೆರೆದಿರುತ್ತದೆ ಎಂಬುದನ್ನು ಮರೆಯದೇ ಹೊಸ ಪಾಠ ಕಲಿಯಿರಿ.
7/ 7
ವಯಸ್ಸಾದಂತೆಲ್ಲಾ ಅನುಭವ ಹೆಚ್ಚುತ್ತಾ ಹೋಗುತ್ತದೆ. ನೀವು ಯಾರಾದರೂ ನಿಮಗಿಂತ ಅನುಭವದಲ್ಲಿ ದೊಡ್ಡವರು ಎಂದೆನಿಸಿದವರೊಡನೆ ಆಗಾಗ ಮಾತನಾಡುತ್ತಿರಿ. ಇದು ನಿಮ್ಮ ಜೀವನದಲ್ಲಿ ಯಶಸ್ಸು ತಂದುಕೊಡುತ್ತದೆ.