ಹತ್ತನೇ ತರಗತಿ ಪರೀಕ್ಷೆಯಲ್ಲಿ ಅಂಕ ಗಳಿಸುವುದು ತುಂಬಾ ಮುಖ್ಯವಾಗುತ್ತದೆ. ಯಾಕೆಂದರೆ ಮುಂದೆ ನೀವು ಕಲಿಕೆಗೆ ಯಾವ ಕ್ಷೇತ್ರವನ್ನು ಆಯ್ದುಕೊಳ್ಳಬೇಕು ಎಂದು ನಿಮಗೆ ನಿರ್ಧರಿಸಲು ಸಹಾಯ ಮಾಡುವುದೇ ಈ ಪರೀಕ್ಷೆ.
2/ 8
ನೀವು ಗಮನವಿಟ್ಟು ಓದುವಾಗ ಈ ಒಂದು ವಿಷಯವನ್ನು ಮರೆಯಲೇ ಬೇಡಿ ಅದೇನೆಂದರೆ ಭಾಷಾ ವಿಷಯಗಳು ನಿಮ್ಮ ಆಯ್ಕೆಯ ಯಾವುದಾದರೂ ಒಂದು ಭಾಷೆ ಮತ್ತು ಖಡ್ಡಾಯವಾಗಿ ನೀವು ಆರಿಸಿಕೊಳ್ಳುವ ಭಾಷೆ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ.
3/ 8
ಕೆಲವೊಮ್ಮೆ ಏನಾಗುತ್ತದೆ ಎಂದರೆ ನೀವು ಯಾವುದೋ ಒಂದು ವಿಷಯದ ಮೇಲೆ ಮಾತ್ರ ನಿಮ್ಮ ಗಮನವನ್ನಿಟ್ಟು ಅಭ್ಯಾಸ ಮಾಡುತ್ತೀರಿ ಉದಾಹರಣೆಗೆ ವಿಜ್ಞಾನ ಇಲ್ಲವೇ ಗಣಿತ ವಿಷಯದ ಮೇಲೆ ಹೆಚ್ಚು ಗಮನಕೊಡುವಂತೆ ಎಲ್ಲರೂ ಸೂಚಿಸುತ್ತಾರೆ
4/ 8
ಆದರೆ ಆ ವಿಷಯಗಳನ್ನು ನೀವು ಎಷ್ಟು ಹೆಚ್ಚು ಗಮನಿಸುತ್ತೀರೋ ಅದೇ ರೀತಿ ಭಾಷಾ ವಿಷಯಗಳಿಗೂ ಪ್ರಾಮುಖ್ಯತೆ ನೀಡಲೇ ಬೇಕು. ಇವುಗಳಿಂದಲೇ ನಿಮ್ಮ ಅಂತಿಮ ಫಲಿತಾಂಶ ಹೆಚ್ಚುತ್ತದೆ. ಹೆಚ್ಚಿನ ಅಂಕ ನಿಮ್ಮ ಮಾರ್ಕ್ಸ್ ಕಾರ್ಡ್ನಲ್ಲಿ ಬರುವಂತಾಗುತ್ತದೆ.
5/ 8
ಗ್ರಾಮರ್ ಮತ್ತು ಕೆಲವು ಭಾಷಾ ಸಾಹಿತ್ಯ ಕಥೆ ಹಾಗೂ ಪದ್ಯಗಳನ್ನು ಸರಿಯಾಗಿ ಅಭ್ಯಾಸ ಮಾಡಿಕೊಳ್ಳಿ. ಆಗ ಮಾತ್ರ ನಿಮ್ಮ ಭಾಷಾ ವಿಷಯದಲ್ಲಿ ನೀವು ಹೆಚ್ಚು ಅಂಕಗಳಿಸಲು ಸಾಧ್ಯವಾಗುತ್ತದೆ.
6/ 8
ನೀವು ಭಾಷಾ ವಿಷಯಗಳಲ್ಲಿ ಪೂರ್ಣ ಪ್ರಮಾಣದ ಅಂಕವನ್ನು ಗಳಿಸಿದರೆ. ನೀವು ಯಾವುದಾದರೂ ಬೇರೆ ವಿಷಗಳಲ್ಲಿ ಕಡಿಮೆ ಅಂಕ ಬಂದಿದ್ದರೂ ಸಹ ಅದನ್ನು ಅಲ್ಲಿಗೆ ಬ್ಯಾಲೆನ್ಸ್ ಮಾಡಲು ಇದು ಸಹಾಯವಾಗುತ್ತದೆ.
7/ 8
ಪಾಠ ಬರೆದವರ ಹೆಸರು, ಪುಸ್ತಕ ಪರಿಚಯ, ಕವಿ ಪರಿಚಯ ಹೀಗೆ ಹಲವಾರು ರೀತಿಯ ಸುಲಭದ ವಿಷಯಗಳು ನಿಮಗೆ ಭಾಷಾ ವಿಷಯದಲ್ಲಿ ಸಹಾಯವಾಗುತ್ತದೆ. ಸುಲಭವಾಗಿ ನೆನಪಿನಲ್ಲಿಟ್ಟುಕೊಂಡು ಅಂಕಗಳಿಸಿ.
8/ 8
ಸಂಸ್ಕೃತ, ಹಿಂದಿ, ಕನ್ನಡ, ತೆಲುಗು, ಉರ್ದು, ಹಳೆಗನ್ನಡ, ಇಂಗ್ಲೀಷ್ ಹೀಗೆ ನಿಮ್ಮಿಷ್ಟದ ವಿಷಯವನ್ನು ನೀವು ಖುಷಿಯಿಂದ ಕಲಿತು ಹೆಚ್ಚಿನ ಅಂಕಗಳಿಸಿದರೆ ಇನ್ನಿತರ ವಿಷಯಕ್ಕೂ ಇದು ಸಹಾಯವಾಗುತ್ತದೆ.