KPTCL ಪರೀಕ್ಷಾ ಫಲಿತಾಂಶ ದಿನಾಂಕ ಪ್ರಕಟ! ನಾಳೆಯೇ ರಿಸಲ್ಟ್
ಈ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಈಗ ಅಂತಿಮ ಕೀ ಉತ್ತರದ ಜೊತೆಗೆ ಫಲಿತಾಂಶದ ದಿನಾಂಕ ಬಿಡುಗಡೆಯಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ನಾಳೆ ಅಧಿಕೃತ ಜಾಲತಾಣದಲ್ಲಿ ಫಲಿತಾಂಶ ಚೆಕ್ ಮಾಡಬಹುದು.
KPTCL ಎಇ, ಜೆಇ, ಜೂನಿಯರ್ ಅಸಿಸ್ಟಂಟ್ ಫಲಿತಾಂಶದ ಅಧಿಕೃತ ದಿನಾಂಕ ಪ್ರಕಟವಾಗಿದೆ. ನೀವೂ ಸಹ ಈ ಪರೀಕ್ಷೆ ಬರೆದಿದ್ದರೆ ಫಲಿತಾಂಶಕ್ಕಾಗಿ ಕಾದಿದ್ದರೆ ಖಂಡಿತ ಇದನ್ನು ಪೂರ್ತಿಯಾಗಿ ಓದಿ.
2/ 7
ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು ಕೆಪಿಟಿಸಿಎಲ್'ನ ಸಹಾಯಕ ಇಂಜಿನಿಯರ್ (ವಿದ್ಯುತ್, ಸಿವಿಲ್) ಕಿರಿಯ ಇಂಜಿನಿಯರ್ (ವಿದ್ಯುತ್, ಸಿವಿಲ್) ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ರಿಸಲ್ಟ್ ಅನ್ನು ಬಿಡುಗಡೆ ಮಾಡುವ ಅಧಿಕೃತ ದಿನಾಂಕವನ್ನು ಇದೀಗ ಪ್ರಕಟಿಸಲಾಗಿದೆ.
3/ 7
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಎಇ ಹಾಗೂ ಜೆಇ ಹುದ್ದೆಗಳಿಗೆ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಫಲಿತಾಂಶವನ್ನು ಜನವರಿ 03 ರಂದು ಬಿಡುಗಡೆಯಾಗಲಿದೆ. ಅಂದರೆ ನಾಳೆ ಫಲಿತಾಂಶ ಅಭ್ಯರ್ಥಿಗಳ ಕೈ ಸೇರಲಿದೆ.
4/ 7
ಈ ಕುರಿತು ಟ್ವೀಟ್ ಮಾಡಿರುವ ಇಂಧನ ಸಚಿವ ಸುನಿಲ್ ಕುಮಾರ್ ರವರು ಜನವರಿ 03, 2023 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹೇಳಿಕೆಯ ಅನುಸಾರ ನಾಳೆಯೇ ಫಲಿತಾಂಶ ಬಿಡುಗಡೆಯಾಗಲಿದೆ.
5/ 7
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ಜುಲೈ 23, 24, ಹಾಗೂ ಆಗಸ್ಟ್ 07 ರಂದು ಕೆಪಿಟಿಸಿಎಲ್ ನ ಸಹಾಯಕ ಇಂಜಿನಿಯರ್ (ವಿದ್ಯುತ್, ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್, ಸಿವಿಲ್), ಕಿರಿಯ ಸಹಾಯಕ ಹುದ್ದೆಗಳ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು.
6/ 7
ಈ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಈಗ ಅಂತಿಮ ಕೀ ಉತ್ತರದ ಜೊತೆಗೆ ಫಲಿತಾಂಶದ ದಿನಾಂಕ ಬಿಡುಗಡೆಯಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ನಾಳೆ ಅಧಿಕೃತ ಜಾಲತಾಣದಲ್ಲಿ ಫಲಿತಾಂಶ ಚೆಕ್ ಮಾಡಬಹುದು.
7/ 7
ಅಧಿಕೃತ ಜಾಲತಾಣದ ಮಾಹಿತಿ ಇಲ್ಲಿದೆ. ಇಲ್ಲಿ ಕ್ಲಿಕ್ ಮಾಡಿದರೆ ನಿಮಗೆ ಈ ಲಿಂಕ್ ಓಪನ್ ಆಗುತ್ತದೆ. ಕೆಪಿಟಿಸಿಎಲ್ ಎಇ, ಜೆಇ ಪರೀಕ್ಷೆ ರಿಸಲ್ಟ್ ನಿಮಗೆ ದೊರೆಯುತ್ತದೆ.