ದಿನೇ ದಿನೇ ರಾಜ್ಯದೆಲ್ಲೆಡೆ ಚಳಿ ಹೆಚ್ಚುತ್ತಿದೆ. ಅಬ್ಬರಿಸುತ್ತಿರುವ ಸೈಕ್ಲೋನ್ ನಡುವೆ ರಾಜ್ಯವೇ ಮರುಗಟ್ಟಿ ಹೋಗುತ್ತಿದೆ. ಇದರ ನಡುವೆ ಮಕ್ಕಳಿಗೆ ಚಳಿಯಿಂದಾಗಿ ತುಂಬಾ ತೊಂದರೆ ಉಂಟಾಗತ್ತಿದೆ.
2/ 9
ಕೋಲಾರ ಜಿಲ್ಲೆಯಲ್ಲಿ ಮಾಂಡೌಸ್ ಸೈಕ್ಲೋನ್ ಆರ್ಭಟ ಹಿನ್ನೆಲೆ KGF ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
3/ 9
ಕೆಜಿಎಫ್ ತಾಲೂಕಿ ಸರ್ಕಾರಿ, ಅನುದಾನಿತ, ಅನುಸಾನ ರಹಿತ ಎಲ್ಲಾ ಶಾಲೆಗಳಿಗೂ ಸಹ ರಜೆ ಘೋಷಣೆ ಮಾಡಲಾಗಿದ್ದು, ತೀವೃ ಚಳಿಯಿಂದ ಜನತೆ ಪರದಾಡುವಂತಾಗಿದೆ.
4/ 9
ಕೆಜಿಎಫ್ ಕ್ಷೇತ್ರ ಶಿಕ್ಷಣಾದಿಕಾರಿ ಚಂದ್ರಶೇಖರ್ ಘೋಷಣೆ ಮಾಡಿದ್ದಾರೆ. ಎಲ್ಲಾ ಶಾಲೆಗಳಿಗೂ ವಾತಾವರಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ ರಜೆ ನೀಡಿದ್ದಾರೆ.
5/ 9
ಶಿಕ್ಷಣ ಆಯುಕ್ತರ ಆದೇಶದಂತೆ ಆಯಾ ಕ್ಷೇತ್ರ BEO ಗಳಿಗೆ ರಜೆ ನಿರ್ಧಾರದ ಜವಬ್ದಾರಿ ನೀಡಲಾಗಿದ್ದು, ಅಲ್ಲಿನ ಪರಿಸ್ಥಿತಿಗನುಸಾರ ಶಾಲೆಗಳ ರಜಾ ನಿರ್ಧಾರ ತೆಗೆದುಕೊಳ್ಳಲಾಗಿದೆ.
6/ 9
ಈ ಕುರಿತು ಕೋಲಾರ ಡಿಡಿಪಿಐ ಕೃಷ್ಣ ಮೂರ್ತಿ ಮಾಹಿತಿ ಹಂಚಿಕೊಂಡಿದ್ದಾರೆ. ನೆನ್ನೆ ರಾತ್ರಿಯಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ಥವ್ಯಸ್ತವಾಗಿದೆ.
7/ 9
ಚಳಿ ಹಾಗೂ ಮಳೆಯಿಂದ ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ. ಈ ಕಾರಣ ರಜೆ ನೀಡಲು ನಿರ್ಧರಿಸಲಾಗಿದೆ. ಮಕ್ಕಳ ಆರೋಗ್ಯದ ಮೇಲೆ ಚಳಿ ಪರಿಣಾಮ ಬೀರಲಿದೆ.
8/ 9
ಬಂಗಾಳದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ. ಇದರ ಪ್ರಭಾವ ರಾಜ್ಯದ ಮೇಲೂ ಸಹ ಪರಿಣಾಮ ಬೀರುತ್ತಿದೆ.
9/ 9
ಕಳೆದ ಎರಡು ದಿನಗಳಿಂದ ಜಿನುಗುವ ಮಳೆ ಹಾಗೂ ಚಳಿಯಿಂದ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಆರೋಗ್ಯದ ಹಿತ ದೃಷ್ಟಿಯಿಂದ ಶಾಲೆಗಳಿಗೆ ರಜೆ ನೀಡಲಾಗಿದೆ.