Kerala: ಇಲ್ಲಿ ಪೌರೋಹಿತ್ಯ ಒಂದು ಸರ್ಕಾರಿ ನೌಕರಿ! ಪರೀಕ್ಷೆ ಪಾಸ್ ಆದ್ರೆ ಮಾತ್ರ ಉದ್ಯೋಗ
ಪೂಜಾ ಪದ್ಧತಿಗಳು ಮತ್ತು ಇತರ ದೇವಾಲಯದ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಪರೀಕ್ಷೆಯಲ್ಲಿ ಇರುತ್ತವೆ ಎಂದು ಅಭ್ಯರ್ಥಿಯೊಬ್ಬರು ಹೇಳಿದ್ದಾರೆ. ಖಾಸಗಿ ದೇವಾಲಯಗಳಲ್ಲಿ ಕೆಲಸ ಮಾಡುವುದಕ್ಕಿಂತ ಇಲ್ಲಿ ಮಾಡಿದರೆ ಉದ್ಯೋಗ ಭದ್ರತೆ ಹೆಚ್ಚು ಎನ್ನುತ್ತಾರೆ.
ಕೇರಳದಲ್ಲಿ ಪೌರೋಹಿತ್ಯವೂ ಸಹ ಒಂದು ಸರಕಾರಿ ನೌಕರಿಯಾಗಿದ್ದು, ಹಿಂದೂ ಧರ್ಮದ ಪ್ರತಿಯೊಬ್ಬರೂ ಸಹ ದೇವಸ್ಥಾನದಲ್ಲಿ ಪುರೋಹಿತರಾಗಿ ನೌಕರರಾಗಬಹುದು. ಈ ಹುದ್ದೆಗೆ ಸರ್ಕಾರವೇ ವೇತನ ನೀಡುತ್ತದೆ. ಬ್ರಾಹ್ಮಣರೇ ಆಗಬೇಕೆಂದೇನೂ ಇಲ್ಲ.
2/ 7
ಈ ನೌಕರಿ ಮಾಡಲು ಬಯಸುವವರು ಪರೀಕ್ಷೆ ಬರೆಯಬೇಕು. ಇದಕ್ಕೆಂದೇ ಬೇರೊಂದು ಕೋರ್ಸ್ ಕೂಡಾ ಕೇರಳದಲ್ಲಿದೆ. ಶ್ಶೂರ್ ಜಿಲ್ಲೆಯ ಚಾಲಕುಡಿಯ ಕೃಷಿ ಕಾರ್ಮಿಕರ ಮಕ್ಕಳೂ ಸಹ ಸರ್ಕಾರಿ ನೌಕರಿ ಎಂದು ಈಗ ಪೌರೋಹಿತ್ಯ ಮಾಡುತ್ತಿದ್ದಾರೆ.
3/ 7
ಪ್ರದೀಪ್ ಕುಮಾರ್ ಎಂಬುವವರು ತಾಂತ್ರಿಕ ವಿದ್ಯಾ ಕೋರ್ಸ್ ಓದಿದ್ದು, ನಂತರ ಅವರು ಜ್ಯೋತಿಷ್ಯ ಕೋರ್ಸ್ ಓದುತ್ತಿದ್ದಾರೆ. ಅವರ ತಂದೆ ಎಂ.ಕೆ.ಕರುಣಾಕರನ್ ಕೂಡ ಅರ್ಚಕರಾಗಲು ಬಯಸಿದ್ದರಂತೆ ಆದರೆ ಅವರ ಬಳಿ ಅಧ್ಯಯನ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಈಗ ಅವರ ಮಗ ಅದನ್ನು ಪೂರ್ಣಗೊಳಿಸುತ್ತಿದ್ದಾರೆ.
4/ 7
ವೃತ್ತಿಪರ ಹೈಯರ್ ಸೆಕೆಂಡರಿ ಕೋರ್ಸ್ ಕೂಡಾ ಈ ಕೆಲಸ ಸೇರಬೇಕೆಂದರೆ ನೀವು ಮಾಡಬೇಕಾಗುತ್ತದೆ. ರಾಜ್ಯ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ಮಾದರಿಯಲ್ಲಿಯೇ ಪರೀಕ್ಷೆಗಳು ನಡೆಯುತ್ತವೆ ಇದರಲ್ಲಿ ಪಾಸ್ ಆದ್ರೆ ಮಾತ್ರ ಪುರೋಹಿತರಾಗಬಹುದು.
5/ 7
ಪೂಜಾ ಪದ್ಧತಿಗಳು ಮತ್ತು ಇತರ ದೇವಾಲಯದ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಪರೀಕ್ಷೆಯಲ್ಲಿ ಇರುತ್ತವೆ ಎಂದು ಅಭ್ಯರ್ಥಿಯೊಬ್ಬರು ಹೇಳಿದ್ದಾರೆ. ಖಾಸಗಿ ದೇವಾಲಯಗಳಲ್ಲಿ ಕೆಲಸ ಮಾಡುವುದಕ್ಕಿಂತ ಇಲ್ಲಿ ಮಾಡಿದರೆ ಉದ್ಯೋಗ ಭದ್ರತೆ ಹೆಚ್ಚು ಎನ್ನುತ್ತಾರೆ.
6/ 7
ವಲಂಜಾವಟ್ಟಂನಿಂದ ಸುಮಾರು 115 ಕಿಮೀ ದೂರದಲ್ಲಿರುವ ಪೆರುಂಬವೂರು ಬಳಿಯ ಅರಕ್ಕಪ್ಪಾಡಿಯಲ್ಲಿ ಮನೋಜ್ ಪಿಸಿ ಶಿವ ದೇವಾಲಯದ ಅರ್ಚಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 31 ವರ್ಷದ ದಲಿತ ಕುಟುಂಬದಿಂದ ಬಂದ ಅವರು ಈಗ ಅಲ್ಲಿನ ಪುರೋಹಿತರಾಗಿದ್ದಾರೆ.
7/ 7
ಹೀಗೆ ಕೇರಳದಲ್ಲಿ ಪೌರೋಹಿತ್ಯ ಒಂದು ಸರ್ಕಾರಿ ಹುದ್ದೆಯಾಗಿದ್ದು. ಪರೀಕ್ಷೆ ಬರೆದು ಪಾಸ್ ಆದವರು ಮಾತ್ರ ದೇವರ ಪೂಜೆ ಮಾಡಬಹುದು. (ಸಾಂದರ್ಭಿಕ ಚಿತ್ರ)