Exam: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಯಾವಾಗ? ಇಲ್ಲಿದೆ ಎಕ್ಸಾಂ ಟೈಮ್ ಟೇಬಲ್

ರಾಜ್ಯ ಶಿಕ್ಷಣ ಇಲಾಖೆ ಇಂದು ರಾಜ್ಯದಲ್ಲಿ 5 ಹಾಗೂ 8ನೇ ತರಗತಿ ಮೌಲ್ಯಂಕನ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಮಾ. 27ರಿಂದ ಪರೀಕ್ಷೆ ಪ್ರಾರಂಭವಾಗಿ ಏ.1ರವರೆಗೆ ಪರೀಕ್ಷೆಗಳು ನಡೆಯಲಿವೆ. ರಾಜ್ಯ ಪಠ್ಯಕ್ರಮದ ಶಾಲೆಗಳ ವಿದ್ಯಾರ್ಥಿಗಳಿಗೆ ಮಾ. 27ರಿಂದ ಪರೀಕ್ಷೆ ಆರಂಭವಾಗಲಿದೆ.

First published:

 • 18

  Exam: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಯಾವಾಗ? ಇಲ್ಲಿದೆ ಎಕ್ಸಾಂ ಟೈಮ್ ಟೇಬಲ್

  ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಮಾ.27ರಿಂದ 5 ಮತ್ತು 8ನೇ ತರಗತಿ ಪರೀಕ್ಷೆಗಳು ಆರಂಭವಾಗಲಿವೆ. 2022-23ನೇ ಸಾಲಿನ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳು ಮಾ.27 ರಿಂದ ಏ.1ರವರೆಗೆ ಮೌಲ್ಯಾಂಕನ ಪರೀಕ್ಷೆ ಬರೆಯಲಿದ್ದಾರೆ.

  MORE
  GALLERIES

 • 28

  Exam: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಯಾವಾಗ? ಇಲ್ಲಿದೆ ಎಕ್ಸಾಂ ಟೈಮ್ ಟೇಬಲ್

  2022-23ನೇ ಸಾಲಿನ ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳು ಮಾ. 27 ರಿಂದ ಮೌಲ್ಯಂಕನ ಪರೀಕ್ಷೆ ಬರೆಯಲಿದ್ದಾರೆ.

  MORE
  GALLERIES

 • 38

  Exam: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಯಾವಾಗ? ಇಲ್ಲಿದೆ ಎಕ್ಸಾಂ ಟೈಮ್ ಟೇಬಲ್

  ಈ ಹಿಂದೆ ಉಚ್ಛ ನ್ಯಾಯಾಲಯದ ಆದೇಶದಂತೆ ಮಾ.13ರಿಂದ ಮೌಲ್ಯಾಂಕನ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಹೈಕೋರ್ಟ್ ಆದೇಶದಂತೆ ಮಾ.27ರಿಂದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳು ಮೌಲ್ಯಾಂಕನ ಪರೀಕ್ಷೆ ಬರೆಯಲಿದ್ದಾರೆ.

  MORE
  GALLERIES

 • 48

  Exam: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಯಾವಾಗ? ಇಲ್ಲಿದೆ ಎಕ್ಸಾಂ ಟೈಮ್ ಟೇಬಲ್

  ಹೈಕೋರ್ಟ್ ಆದೇಶದ ಪ್ರಕಾರ, 5 ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.27ರಿಂದ ಮಾ.30ರವರೆಗೆ ಮೌಲ್ಯಂಕನ ಪರೀಕ್ಷೆ ನಡೆಯಲಿದೆ. ಹಾಗೆಯೇ 8ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.27ರಿಂದ ಏ.1 ರವರೆಗೆ ಮೌಲ್ಯಾಂಕನ ನಡೆಯಲಿದೆ. ಇನ್ನು ಆಯಾ ಶಾಲೆಗಳನ್ನೇ ಮೌಲ್ಯಾಂಕನ ಕೇಂದ್ರಗಳನ್ನಾಗಿಸುವಂತೆ ತಿಳಿಸಿದೆ.

  MORE
  GALLERIES

 • 58

  Exam: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಯಾವಾಗ? ಇಲ್ಲಿದೆ ಎಕ್ಸಾಂ ಟೈಮ್ ಟೇಬಲ್

  ಹೈಕೋರ್ಟ್ ಆದೇಶದಂತೆ ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಪರೀಕ್ಷೆ ವೇಳೆ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೈಕೋರ್ಟ್‌ ಸೂಚನೆ ನೀಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆಗಳನ್ನೇ ಮೌಲ್ಯಾಂಕನ ಕೇಂದ್ರಗಳನ್ನಾಗಿ ಮಾಡಿದೆ.

  MORE
  GALLERIES

 • 68

  Exam: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಯಾವಾಗ? ಇಲ್ಲಿದೆ ಎಕ್ಸಾಂ ಟೈಮ್ ಟೇಬಲ್

  ಈ ಮೌಲ್ಯಾಂಕನವು ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನ್ಯತೆಗಳನ್ನು ತಿಳಿಸಲಿದೆ. ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ. ಮೌಲ್ಯಾಂಕನದ ಫಲಿತಾಂಶವನ್ನು ವಿದ್ಯಾರ್ಥಿಗೆ ಮಾತ್ರ ತಿಳಿಸಲಾಗುವುದು. ಫಲಿತಾಂಶದ ಗೌಪ್ಯತೆ ಕಾಪಾಡಲಾಗುವುದು ಎಂದು ಪ್ರಕಟಣೆಯಲ್ಲಿ ಮಂಡಳಿ ತಿಳಿಸಿದೆ.

  MORE
  GALLERIES

 • 78

  Exam: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಯಾವಾಗ? ಇಲ್ಲಿದೆ ಎಕ್ಸಾಂ ಟೈಮ್ ಟೇಬಲ್

  5 ನೇ ತರಗತಿ ಬೋರ್ಡ್ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಹೀಗಿದೆ. ಮಾ. 27ರಂದು ಪ್ರಥಮ ಭಾಷೆ, ಮಾ. 28 ರಂದು ದ್ವಿತೀಯ ಭಾಷೆ, ಮಾ. 29 ರಂದು ಪರಿಸರ ಅಧ್ಯಯನ, ಮಾ. 30 ರಂದು ಗಣಿತ ಪರೀಕ್ಷೆ ನಡೆಯಲಿದೆ.

  MORE
  GALLERIES

 • 88

  Exam: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಯಾವಾಗ? ಇಲ್ಲಿದೆ ಎಕ್ಸಾಂ ಟೈಮ್ ಟೇಬಲ್

  8ನೇ ತರಗತಿ ವೇಳಾಪಟ್ಟಿ ಹೀಗಿದೆ. ಮಾ. 27 ರಂದು ಪ್ರಥಮ ಭಾಷೆ, ಮಾ. 28 ರಂದು ದ್ವಿತೀಯ ಭಾಷೆ, ಮಾ. 29 ರಂದು ತೃತೀಯ ಭಾಷೆ, ಮಾ. 30 ರಂದು ಗಣಿತ, ಮಾ. 31 ರಂದು ವಿಜ್ಞಾನ ಮತ್ತು ಏ. 1 ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಮೌಲ್ಯಾಂಕನದ ಅವಧಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಹಾಗೂ ಮಧ್ಯಾಹ್ನ 2.30 ರಿಂದ 4.30ರ ವರೆಗೆ ನಡೆಯಲಿದೆ.

  MORE
  GALLERIES