ರಾಜ್ಯದಲ್ಲಿ ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದಿದ್ದು, ರಿಸಲ್ಟ್ ಕೂಡ ಬಂದಿದೆ. ಈ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಇಲಾಖೆಯು ಪೂರಕ ಪರೀಕ್ಷೆಯನ್ನು ನಡೆಸುತ್ತಿದೆ. ಅದರಂತೆ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗೆ ಇನ್ನು ಕೆಲವು ದಿನಗಳು ಮಾತ್ರ ಉಳಿದಿವೆ. ವಿದ್ಯಾರ್ಥಿಗಳು ಸಪ್ಲಿಮೆಂಟರಿ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಯಶಸ್ಸು ಸಾಧಿಸಲು ಇರುವ ಒಂದೇ ಒಂದು ಮಾರ್ಗವೆಂದರೆ ಅದು ಕಠಿಣ ಅಧ್ಯಯನ. ಇಲ್ಲಿ ನಾವು ಹೇಳುವ ಸಲಹೆಗಳನ್ನು ಫಾಲೋ ಮಾಡಿದರೆ ವಿದ್ಯಾರ್ಥಿಗಳು ಆರಾಮಾಗಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಬಹುದು.
ಮಾಡಿದ ತಪ್ಪನ್ನೇ ಮಾಡಬೇಡಿ:
ವಿದ್ಯಾರ್ಥಿಗಳು ಈ ಮೊದಲು ಪರೀಕ್ಷೆ ಬರೆಯುವಾಗ ಮಾಡಿದ ತಪ್ಪನ್ನು ಮಾಡಬೇಡಿ. ಯಾಕೆಂದರೆ ನೀವು ಈಗಾಗಲೇ ಪರೀಕ್ಷೆ ಬರೆದ ಅನುಭವ ಹೊಂದಿರುತ್ತೀರಿ. ಹೀಗಾಗಿ ನೀವು ಎಲ್ಲಿ ತಪ್ಪು ಮಾಡಿದ್ದೀರಿ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ. ನೀವು ಬರೆದಿರುವ ಉತ್ತರ ಪತ್ರಿಕೆಯನ್ನು ತರಿಸಿಕೊಂಡು ಮಾಡಿರುವ ತಪ್ಪುಗಳನ್ನು ಹುಡುಕಿ. ಮುಂದಿನ ಸಲ ಪರೀಕ್ಷೆ ಬರೆಯುವಾಗ ಹಿಂದೆ ಮಾಡಿದ ತಪ್ಪುಗಳನ್ನು ಮಾಡಬೇಡಿ.
ಸ್ಟಡಿ ಗ್ರೂಪ್ಗೆ ಸೇರಿಕೊಳ್ಳಿ:
ಪೂರಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಾವುದಾದರೂ ಸ್ಟಡಿ ಗ್ರೂಪ್ಗಳಿಗೆ ಸೇರಿಕೊಳ್ಳುವುದು ಒಳ್ಳೆಯದು. ಇದರಿಂದ ಬೇರೆ ಬೇರೆ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ಅಧ್ಯಯನ ನಡೆಸುವ ರೀತಿಯಲ್ಲೂ ಬದಲಾಗಬಹುದು. ಹೊಸ ದೃಷ್ಟಿಕೋನದಿಂದ ವಿಷಯವನ್ನು ಅರ್ಥಮಾಡಿಕೊಳ್ಳಲು ನಿಮಗೆ ಅವಕಾಶ ಸಿಗುತ್ತದೆ.