Computer Education: ಕಂಪ್ಯೂಟರ್ ಶಿಕ್ಷಣವಿದ್ರೂ ಸೌಲಭ್ಯದ ಕೊರತೆ, ಇದು ಕರ್ನಾಟಕ ಶಾಲೆಗಳ ಪಾಡು
TALP ಎಂದರೇನು ಎಂಬ ಪ್ರಶ್ನೆ ನಿಮಗಿದ್ದರೆ ಇದರರ್ಥ ತಾಂತ್ರಿಕ ಸಹಾಯ ಕಲಿಕೆ ಕಾರ್ಯಕ್ರಮ ಎಂದು. ಇದರಿಂದ ವಿದ್ಯಾರ್ಥಿಗಳಲ್ಲಿ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಮತ್ತು ಕಂಪ್ಯೂಟರ್ ಮೂಲಕ ಶಿಕ್ಷಣವನ್ನು ಉತ್ತೇಜಿಸಲು ಸಹಾಯವಾಗುತ್ತಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಕಂಪ್ಯೂಟರ್ ಕಲಿಕೆ ಅತ್ಯಗತ್ಯ ಅದರಲ್ಲೂ ತಾಂತ್ರಿಕ ಶಿಕ್ಷಣ ನೀಡುವುದು ಮತ್ತು ಮಕ್ಕಳನ್ನು ಈ ಭಾಗದಲ್ಲಿ ಉತ್ತೇಜಿಸುವುದು ಪ್ರಮುಖವಾಗಿರುತ್ತದೆ. ಆ ಉದ್ದೇಶದಿಂದ TALP ಜಾರಿಗೊಳಿಸಲಾಗಿದೆ.
2/ 7
TALP ಎಂದರೇನು ಎಂಬ ಪ್ರಶ್ನೆ ನಿಮಗಿದ್ದರೆ ಇದರರ್ಥ ತಾಂತ್ರಿಕ ಸಹಾಯ ಕಲಿಕೆ ಕಾರ್ಯಕ್ರಮ ಎಂದು. ಇದರಿಂದ ವಿದ್ಯಾರ್ಥಿಗಳಲ್ಲಿ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಮತ್ತು ಕಂಪ್ಯೂಟರ್ ಮೂಲಕ ಶಿಕ್ಷಣವನ್ನು ಉತ್ತೇಜಿಸಲು ಸಹಾಯವಾಗುತ್ತಿದೆ.
3/ 7
ಆದರೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ (ಕೆಇಎ) ನಿಯೋಜಿಸಿದ ಅಧ್ಯಯನದ ಪ್ರಕಾರ, ಶಿಕ್ಷಕರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿಲ್ಲ. ಕೆಲವು ಸೌಲಭ್ಯಗಳ ಕೊರತೆ ಇದೆ ಎಂದು ತಿಳಿದುಬಂದಿದೆ.
4/ 7
TALP ಅನ್ನು 2016-17 ರಲ್ಲಿ ಹೊರತರಲಾಗಿದೆ. ವಿಜ್ಞಾನ, ಗಣಿತ, ಸಾಮಾಜಿಕ ಅಧ್ಯಯನಗಳು ಮತ್ತು ಇಂಗ್ಲಿಷ್ ಅನ್ನು ಇದರಲ್ಲಿ ಸೇರಿಸಲಾಗಿದೆ. ಶಾಲಾ ವಿಷಯಗಳನ್ನು ಕಲಿಸಲು ತಾಂತ್ರಿಕ ಕೌಶಲ್ಯ ಹೊಂದಿರುವ ವ್ಯಕ್ತಿಗಳನ್ನು ನೇಮಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.
5/ 7
ಇದನ್ನು ಕಲಿಸಲು ಶಿಕ್ಷಕರಿಗೆ ವಿಶೇಷ ಸೌಲಭ್ಯಗಳ ಅಗತ್ಯ ವಿರುತ್ತದೆ. ಅಂದರೆ ಅದಕ್ಕೆ ಪೂರಕವಾದ ಕೆಲವು ವಸ್ತುಗಳು ಪ್ರಾಜೆಕ್ಟರ್, CD/DVD ಹಾಗೂ ಕಂಪ್ಯೂಟರ್ಗಳು ಹಾಗೂ ಸರಿಯಾದ ವಿದ್ಯುತ್ ಸಂಪರ್ಕ ಇರಬೇಕು.
6/ 7
LED ಪ್ರಾಜೆಕ್ಟರ್ ಸ್ಮಾರ್ಟ್ ಬೋರ್ಡ್ಗಳು ಮತ್ತು ಇತರ ಪರಿಕರಗಳನ್ನು ಹೊಂದಿರಬೇಕಾಗುತ್ತದೆ. ಇಷ್ಟೇಲ್ಲಾ ಅಗತ್ಯತೆಗಳಿದ್ದರೂ ಸಹ ಕರ್ನಾಟಕದ ಹಲವೆಡೆ ಎಲ್ಲಾ ಸೌಲಭ್ಯಗಳು ಸಿಗುವುದಿಲ್ಲ. ಇದರ ಕೊರತೆ ಇದೆ ಎಂದು ಹೇಳಿದ್ದಾರೆ.
7/ 7
650 ಪ್ರೌಢ ಶಾಲೆಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ ನಾಲ್ಕರಲ್ಲಿ ಒಂದು ಶಾಲೆಯಲ್ಲಿ ಸರಿಯಾದ ವಿದ್ಯುತ್ ಸಂಪರ್ಕ್ ಇರುವುದಿಲ್ಲ ಎಂದು ತಿಳಿದುಬಂದಿದೆ. ಎಷ್ಟೋ ಕಡೆ ಸಂಪೂರ್ಣವಾದ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆಗಳೂ ಸಹ ಇಲ್ಲ.