ಇದುವರೆಗೂ ಹಳೆಯ ಜಾಲತಾಣವನ್ನೇ ಬಳಸಲಾಗುತ್ತಿತ್ತು. ಜ.10ರಿಂದ ಹೊಸ ಜಾಲತಾಣ ತೆರೆದಿದೆ. ಈಗ ಅದನ್ನು ಉಪಯೋಗಿಸಬಹುದು. ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯ ಚಟುವಟಿಕೆಗಳ ಆನ್ಲೈನ್ ಕಾರ್ಯಗಳು, ಶಾಲಾ ಲಾಗಿನ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣಾಧಿಕಾರಿಗಳ ಲಾಗಿನ್ ಹಾಗೂ ಇತರೆ ಸೇವೆಗಳು ನೂತನ ಜಾಲತಾಣದಲ್ಲೇ ಸಿಗಲಿವೆ.