Kalika Habba: ಶಾಲೆಗಳಲ್ಲಿ ಆರಂಭವಾಯ್ತು ಕಲಿಕಾ ಹಬ್ಬ! ಮಕ್ಕಳಲ್ಲಿ ಹೆಚ್ಚಿದ ಉತ್ಸಾಹ
ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಕಲಿಕಾ ಹಬ್ಬ ಆರಂಭವಾಗಿದೆ. ಸಂಭ್ರಮದ ವಾತಾವರಣ ಶಾಲೆಗಳಲ್ಲಿ ಮನೆ ಮಾಡಿದೆ. ಹಿಂದಿನ ಎರಡು ವರ್ಷಗಳು ಹಾಗೂ ಪ್ರಸ್ತುತ ವರ್ಷದ ಮಹತ್ವದ ಮತ್ತು ನಿರಂತರ ಕಲಿಕಾ ಅಂಶಗಳನ್ನು ಮರುಕಳಿಸುವ ರೀತಿಯಲ್ಲಿ ಈ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ.
ಸರ್ಕಾರಿ ಶಾಲಾ ಮಕ್ಕಳಿಗೆ ಜನವರಿಯಲ್ಲಿ ಕಲಿಕಾ ಹಬ್ಬ ಆರಂಭವಾಗಿದೆ. ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಈಗಾಗಲೇ ಹಲವಾರು ಶಾಲೆಗಳಲ್ಲಿ ಕಲಿಕಾ ಹಬ್ಬ ಸಂಪೂರ್ಣಗೊಂಡಿದೆ.
2/ 7
ಕಲಿಕಾ ಚೇತರಿಕೆ ಪೂರಕವಾಗಿ ಮಕ್ಕಳು ಚಟುವಟಿಕೆ ಮೂಲಕ ಸಂತೋಷದಾಯಕ ಕಲಿಕೆಯನ್ನು ಮಕ್ಕಳು ಹೊಂದಬೇಕು ಎಂಬ ಹಿನ್ನಲೆಯಿಂದ ಸರ್ಕಾರ ಚಿಂತನೆ ಮಾಡಿದ್ದು, ಈ ಚಿಂತನೆ, ಸಲಹೆ ಹಾಗೂ ಮಾರ್ಗದರ್ಶನದಡಿಯಲ್ಲಿ ಕಲಿಕಾ ಹಬ್ಬಗಳು ಜರುಗಿವೆ.
3/ 7
ಸಾಮಾನ್ಯವಾಗಿ ಎಲ್ಲಾ ಜಿಲ್ಲೆಗಳ ಶಾಲೆಯಲ್ಲೂ ಸಹ ಕಲಿಕಾ ಹಬ್ಬವನ್ನು ಆಚರಿಸುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಹೊಸತನ ಸೃಷ್ಟಿಯಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸ್ತುತ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ಎಂದು ಘೋಷಿಸಿದ್ದು ಪ್ರಗತಿಗೆ ಕಾರಣವಾಗಿದೆ.
4/ 7
ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸಿದೆ. ಅನ್ವಯಿಕ ಶಿಕ್ಷಣ ವೈಜ್ಞಾನಿಕ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಪ್ರಸಾರಗೊಳಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಕಲಿಕಾ ಹಬ್ಬದ ಗುರಿಯಾಗಿದೆ.
5/ 7
ಕಲಿಕೆ ಎಂಬುದು ಮಕ್ಕಳಿಗೆ ಹೊರೆ ಹಾಗೂ ಒತ್ತಡವನ್ನುಂಟು ಮಾಡದೇ ಆನಂದಮಯ ಚಟುವಟಿಕೆಯ ರೂಪದಲ್ಲಿರಬೇಕು ಎಂಬುದೇ ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ಇಲಾಖೆ ತಿಳಿಸಿದೆ.
6/ 7
ಕೋವಿಡ್-19 ಸಾಂಕ್ರಾಮಿಕವು ಶಾಲೆಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರಿದ್ದು ಕಲಿಕಾ ಚೇತರಿಕೆ ಕಾರ್ಯಕ್ರಮದ ಯೋಜನೆಯನ್ನು ಈ ಸಮಸ್ಯೆಯ ನಿವಾರಣೆಗಾಗಿಯೇ ಹಮ್ಮಿಕೊಳ್ಳಲಾಗಿದೆ.
7/ 7
ಇದೇ ಕಾರ್ಯಕ್ರಮದ ಭಾಗವಾಗಿ ಕಲಿಕಾ ಹಬ್ಬ ಇದೀಗ ಪ್ರಸ್ತುತಗೊಂಡಿದೆ. ಹಿಂದಿನ ಎರಡು ವರ್ಷಗಳು ಹಾಗೂ ಪ್ರಸ್ತುತ ವರ್ಷದ ಮಹತ್ವದ ಮತ್ತು ನಿರಂತರ ಕಲಿಕಾ ಅಂಶಗಳನ್ನು ಮರುಕಳಿಸುವ ರೀತಿಯಲ್ಲಿ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ.