JEE Main ಅಪ್ಲಿಕೇಶನ್ ವಿಂಡೋ ಓಪನ್ ಆಗಿದೆ ತಿದ್ದುಪಡಿಗಳಿದ್ದರೆ ನಾಳೆ ಒಳಗೆ ಮಾಡಿ ಮುಗಿಸಿ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) JEE ಮುಖ್ಯ ಸೆಷನ್-1 ಅಪ್ಲಿಕೇಶನ್ ತಿದ್ದುಪಡಿ ವಿಂಡೋವನ್ನು ತೆರೆದಿದೆ. ನಾಳೆ ಅಂದರೆ ಜನವರಿ 14 ರಂದು ರಾತ್ರಿ 11.50ರ ವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ನೀವು JEE ಮುಖ್ಯ ಸೆಷನ್ 1 ಕ್ಕೆ ಅರ್ಜಿ ಸಲ್ಲಿಸಿದ್ದೀರಾ? ಹಾಗಾದರೆ ಅದರ ಅಪ್ಡೇಟ್ ಇಲ್ಲಿದೆ ನೋಡಿ. ಈಗ ನೀವೇನಾದರು ತಪ್ಪು ಮಾಹಿತಿಯನ್ನು ತುಂಬಿದ್ದರೆ ಈಗ ಅದನ್ನು ಸರಿ ಪಡಿಸಲು ಅವಕಾಶ ಕಲ್ಪಿಸಲಾಗಿದೆ.
2/ 8
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) JEE ಮುಖ್ಯ ಸೆಷನ್-1 ಅಪ್ಲಿಕೇಶನ್ ತಿದ್ದುಪಡಿ ವಿಂಡೋವನ್ನು ತೆರೆದಿದೆ. ನಾಳೆ ಅಂದರೆ ಜನವರಿ 14 ರಂದು ರಾತ್ರಿ 11.50ರ ವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
3/ 8
ಈ ಕೂಡಲೇ ನಾವು ಇಲ್ಲಿ ನೀಡಿರುವ ಲಿಂಕ್ ಕ್ಲಿಕ್ ಮಾಡಿಕೊಳ್ಳುವ ಮೂಲಕ ಸರಿಸಿಪಡಿಸಿಕೊಳ್ಳಬಹುದು. ಆದ್ದರಿಂದ ಆದಷ್ಟು ಬೇಗ ಸರಿಪಡಿಸಿಕೊಳ್ಳಿ. ನಾಳೆ ರಾತ್ರಿವರೆಗೆ ಮಾತ್ರ ಈ ಅವಕಾಶ ಲಭ್ಯವಿದೆ.
4/ 8
ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಸರಿಯಾಗಿ ಆಗಿದೆಯೋ ಇಲ್ಲವೋ ಎಂಬುದನ್ನೂ ಸಹ ಪರಿಶೀಲಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.
5/ 8
ಇದರಿಂದ ಅರ್ಜಿ ಸಲ್ಲಿಸುವಾಗ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಎಲ್ಲಾ ಅರ್ಜಿದಾರರು ತಮ್ಮ ಅರ್ಜಿ ನಮೂನೆಯನ್ನು ತೆರೆದು ನಮೂದಿಸಿದ ವಿವರಗಳನ್ನು ಒಮ್ಮೆ ಪರಿಶೀಲಿಸುವುದು ಉತ್ತಮ.
6/ 8
ನೀವು ಸರಿಯಾದ ಮಾಹಿತಿಯನ್ನೇ ನೀಡಿದ್ದೀರಿ ಎಂದು ನಿಮಗೆ ಅನಿಸಿದ್ದರೂ ಸಹ ಈಗೊಮ್ಮೆ ಪರಿಶೀಲಿಸಿ ಬಿಡಿ. ಗೊತ್ತಿಲ್ಲದೇ ಆದ ತಪ್ಪುಗಳು ಕೆಲವೊಮ್ಮೆ ಮುಂದೆ ತುಂಬಾ ತೊಂದರೆ ಉಂಟು ಮಾಡುತ್ತದೆ.
7/ 8
ಹಂತ 1: ಅಭ್ಯರ್ಥಿಗಳು ಮೊದಲುತೆರೆಯಬೇಕು. ಹಂತ 2: ಅದರ ನಂತರ ಮುಖಪುಟದಲ್ಲಿJEE(ಮುಖ್ಯ) 2023 ಸೆಷನ್ 1 ಅಪ್ಲಿಕೇಶನ್ಲಿಂಕ್ ಕಾಣಿಸುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ. ಹಂತ 3: ನಂತರ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್, ಭದ್ರತಾ ಪಿನ್ ಅನ್ನು ನಮೂದಿಸಿ ಮತ್ತು ಸೈನ್ ಇನ್ ಆಯ್ಕೆಯನ್ನು ಕ್ಲಿಕ್ ಮಾಡಿ.
8/ 8
ಹಂತ 4: ನಿಮ್ಮ ಅರ್ಜಿ ನಮೂನೆಯು ತೆರೆಯುತ್ತದೆ. ವಿವರಗಳನ್ನು ಪರಿಶೀಲಿಸಿ. ನೀವು ಯಾವುದೇ ತಪ್ಪುಗಳನ್ನು ಗಮನಿಸಿದರೆ, ಅವುಗಳನ್ನು ಸರಿಪಡಿಸಿ.