International Education Day: ಪ್ರತಿ ವರ್ಷ ಜನವರಿ 24ರಂದು ಅಂತರರಾಷ್ಟ್ರೀಯ ಶಿಕ್ಷಣ ದಿನ ಆಚರಿಸೋಕೆ ಕಾರಣ ಏನು? ಇಲ್ಲಿದೆ ಮಾಹಿತಿ
UNESCO ಈ ವರ್ಷವನ್ನು ಅಫ್ಘಾನಿಸ್ತಾನದಲ್ಲಿ ತಮ್ಮ ಶಿಕ್ಷಣದ ಹಕ್ಕಿನಿಂದ ವಂಚಿತರಾದ ಹುಡುಗಿಯರು ಮತ್ತು ಮಹಿಳೆಯರಿಗೆ ಈ ವರ್ಷದ ಅಂತರಾಷ್ಟ್ರೀಯ ದಿನವನ್ನು ಅರ್ಪಿಸುತ್ತಿದೆ. ಮಹಿಳೆಯರ ಶಿಕ್ಷಣಕ್ಕಿರುವ ನಿರ್ಬಂಧವನ್ನು ತೆಗೆದು ಹಾಕಲು ಆಗ್ರಹಿಸುತ್ತಿದೆ.
ಪ್ರತಿ ವರ್ಷವೂ ಸಹ ಜನವರಿ 24ರಂದು ಅಂತರರಾಷ್ಟ್ರೀಯ ಶಿಕ್ಷಣ ದಿನ ಆಚರಿಸಲಾಗುತ್ತದೆ. ಆದರೆ ಈ ದಿನವನ್ನೇ ಏಕೆ ಅಂತರರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ ನೋಡಿ.
2/ 7
ಸತತ ನಾಲ್ಕು ವರ್ಷಗಳಿಂದ ಈ ದಿನವನ್ನು ಅಂತರರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಐದನೇ ವರ್ಷದ ಆಚರಣೆಯನ್ನು ಮಾಡಲಾಗುತ್ತದೆ. ಇದರ ಉದ್ದೇಶ ಏನೆಂದರೆ ಶಿಕ್ಷಣಕ್ಕೆ ಆದ್ಯತೆ ನೀಡುವುದು.
3/ 7
ಈ ವರ್ಷ ಜನವರಿ 25 ರಂದು ನ್ಯೂಯಾರ್ಕ್ನಲ್ಲಿರುವ ಯುನೆಸ್ಕೋ ಪ್ರಧಾನ ಕಛೇರಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಶಿಕ್ಷಣ ದಿನ 2023ಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.
4/ 7
ಶಾಂತಿ, ಸುಸ್ಥಿರ ಅಭಿವೃದ್ಧಿ, ವೈಯಕ್ತಿಕ ಮತ್ತು ಸಾಮೂಹಿಕ ಯೋಗಕ್ಷೇಮದ ಮಾರ್ಗವಾಗಿ ಶಿಕ್ಷಣದ ಪರವಾಗಿ ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಜಾಗತಿಕ ವೇದಿಕೆಯಾಗಿ ಇದನ್ನು ಆಚರಿಸುತ್ತಾರೆ.
5/ 7
UNESCO ಈ ವರ್ಷವನ್ನು ಅಫ್ಘಾನಿಸ್ತಾನದಲ್ಲಿ ತಮ್ಮ ಶಿಕ್ಷಣದ ಹಕ್ಕಿನಿಂದ ವಂಚಿತರಾದ ಹುಡುಗಿಯರು ಮತ್ತು ಮಹಿಳೆಯರಿಗೆ ಈ ವರ್ಷದ ಅಂತರಾಷ್ಟ್ರೀಯ ದಿನವನ್ನು ಅರ್ಪಿಸುತ್ತಿದೆ. ಮಹಿಳೆಯರ ಶಿಕ್ಷಣಕ್ಕಿರುವ ನಿರ್ಬಂಧವನ್ನು ತೆಗೆದು ಹಾಕಲು ಆಗ್ರಹಿಸುತ್ತಿದೆ.
6/ 7
UNESCO ಪ್ರಕಾರ, 244 ಮಿಲಿಯನ್ ಮಕ್ಕಳು ಮತ್ತು ಯುವಕರು ಶಾಲೆಯಿಂದ ಹೊರಗುಳಿದಿದ್ದಾರೆ ಮತ್ತು 771 ಮಿಲಿಯನ್ ವಯಸ್ಕರು ವಿಶ್ವಾದ್ಯಂತ ಅನಕ್ಷರಸ್ಥರಾಗಿದ್ದಾರೆ. ಇವರೆಲ್ಲರಿಗೂ ಶಿಕ್ಷಣ ದೊರೆಯುವಂತಾಗಬೇಕು ಯಾರೂ ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಹೊಂದಿದೆ.
7/ 7
ಡಿಸೆಂಬರ್ 3, 2018 ರಂದು, ಯುನೈಟೆಡ್ ನೇಷನ್ಸ್ (UN) ಜನರಲ್ ಅಸೆಂಬ್ಲಿಯು ನೈಜೀರಿಯಾ ಮತ್ತು 58 ಇತರ ಸದಸ್ಯ ರಾಷ್ಟ್ರಗಳಿಂದ ಸಹ ಈ ನಿರ್ಣಯಕ್ಕೆ ಒಪ್ಪಿಗೆ ಸಿಕ್ಕಿದೆ.