Uniform: ಶಾಲೆಗಳಲ್ಲಿ ಸಮವಸ್ತ್ರ ಏಕೆ ಧರಿಸುತ್ತಾರೆ? ಇಲ್ಲಿದೆ ಮಾಹಿತಿ
ಸಮವಸ್ತ್ರವು ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆಯಂತೆ. ಹಲವಾರು ಅಧ್ಯಯನಗಳು ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಸಮವಸ್ತ್ರವನ್ನು ಧರಿಸುವುದರ ನಡುವಿನ ಪರಸ್ಪರ ಸಂಬಂಧವನ್ನು ಗುರುತಿಸಲು ಪ್ರಯತ್ನಿಸಿದೆ ಅದರ ಫಲಿತಾಂಶಗಳಲ್ಲಿ ಇದು ತಿಳಿದುಬಂದಿದೆ.
ಶಾಲಾ ಸಮವಸ್ತ್ರದ ಬಗ್ಗೆ ಸಾಕಷ್ಟು ಸಂಶೋಧನೆಗಳಿವೆ. ಪ್ರತಿಯೊಂದು ಶಾಲೆಯೂ ಸಹ ಸಮವಸ್ತ್ರವನ್ನು ಮಕ್ಕಳಿಗೆ ನೀಡಿರುತ್ತದೆ ಅಷ್ಟೇ ಅಲ್ಲ ಬೇರೆ ಬೇರೆ ಕ್ಷೇತ್ರದಲ್ಲೂ ಸಹ ಸಮವಸ್ರ್ತಕ್ಕೆ ಅದರದ್ದೇ ಆದ ಮಾನ್ಯತೆ ಇದೆ ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
2/ 8
ಮೊದಲ ಶಾಲಾ ಸಮವಸ್ತ್ರವನ್ನು 1552 ರಲ್ಲಿ ಪರಿಚಯಿಸಲಾಯಿತು ಎಂದು ಹೇಳಲಾಗುತ್ತದೆ. ಕ್ರಿಸ್ ಬೌಮನ್ ಮತ್ತು ಹಾನಾ ಕ್ರಿಸ್ಕೊವಾ ಬರೆದ ಮತ್ತು ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಜುಕೇಷನಲ್ ಮ್ಯಾನೇಜ್ಮೆಂಟ್ನಲ್ಲಿ ಪ್ರಕಟವಾದ ಅಧ್ಯಯದ ಪ್ರಕಾರ ತರಗತಿಯಲ್ಲಿ ಏಕಾಗ್ರತೆ ಹೆಚ್ಚಲು ಇದು ಸಹಾಯ ಮಾಡುತ್ತದೆಯಂತೆ.
3/ 8
ಸಮವಸ್ತ್ರ ಶಿಸ್ತನ್ನು ಸುಧಾರಿಸುತ್ತದೆ. ಎಲ್ಲರೂ ಒಂದೇ ರೀತಿಯಲ್ಲಿ ಬಟ್ಟೆ ಧರಿಸುವುದರಿಂದ ಶಿಸ್ತು ಹಾಗೂ ಸಮಾನತೆ ಎಲ್ಲರಲ್ಲಿ ಮೂಡುತ್ತದೆ ಎಂದು ತಿಳಿಸಲಾಗಿದೆ. ಎಲ್ಲಾ ಶಾಲೆಗಳಲ್ಲಿ ಏಕರೂಪದ ಶಿಕ್ಷಣ ನೀಡಲು ಇದು ಸಹಾಯ ಮಾಡುತ್ತದೆ.
4/ 8
ಶಾಲೆಗಳಲ್ಲಿ ಕ್ರೀಡಾ ಸಮವಸ್ತ್ರಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಕಂಪರ್ಟ್ನೆಸ್ ಕ್ರೀಯೇಟ್ ಮಾಡುತ್ತದೆ. ತಮ್ಮ ದೈನಂದಿನ ಉಡುಗೆಗಿಂತ ಇದನ್ನೇ ಹೆಚ್ಚು ಇಷ್ಟಪಡುತ್ತಾರೆ.
5/ 8
ಸಮವಸ್ತ್ರವು ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆಯಂತೆ. ಹಲವಾರು ಅಧ್ಯಯನಗಳು ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಸಮವಸ್ತ್ರವನ್ನು ಧರಿಸುವುದರ ನಡುವಿನ ಪರಸ್ಪರ ಸಂಬಂಧವನ್ನು ಗುರುತಿಸಲು ಪ್ರಯತ್ನಿಸಿದೆ ಅದರ ಫಲಿತಾಂಶಗಳಲ್ಲಿ ಇದು ತಿಳಿದುಬಂದಿದೆ.
6/ 8
ಹೆಚ್ಚಾಗಿ ಸಮವಸ್ತ್ರವು ಬಿಳಿ, ನೀಲಿ, ಹಸಿರು, ಕೆಂಪು ಹೀಗೆ ಘಾಡವಾದ ಬಣ್ಣದಲ್ಲಿರುತ್ತದೆ. ಪ್ರತಿ ಶಾಲೆಯೂ ಸಮವಸ್ತ್ರಕ್ಕಾಗಿ ಉತ್ತಮವಾದ ಬಣ್ಣ, ವಸ್ತು ಮತ್ತು ಮಾದರಿಯನ್ನು ಆರಿಸಿಕೊಳ್ಳುತ್ತದೆ.
7/ 8
ಇತ್ತೀಚಿನ ದಿನಗಳಲ್ಲಿ ಪಾಲಕರು ಸಮವಸ್ತ್ರದ ಮೇಲೆ ಶಾಲೆಗಳ ಗುಣಮಟ್ಟವನ್ನು ನಿರ್ಧರಿಸಲು ಪ್ರಾರಂಭಿಸಿದ್ದಾರಂತೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಉತ್ತಮ ಸಮವಸ್ತ್ರ ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
8/ 8
ಬಡವ ಶ್ರೀಮಂತ ಎಂಬ ಬೇಧ ಭಾವವಿಲ್ಲದೇ ಒಂದೇ ರೀತಿಯ ಬಟ್ಟೆ ಧರಿಸಲು ಇದು ಸಹಾಯ ಮಾಡುತ್ತದೆ. ಆ ಕಾರಣದಿಂದ ಎಲ್ಲಾ ಶಾಲೆಗಳಲ್ಲಿ ಸಮವಸ್ತ್ರವನ್ನು ಖಡ್ಡಾಯ ಮಾಡಿದ್ದಾರೆ. ಇದು ಒಂದು ಉತ್ತಮ ನಿರ್ಧಾರ ಎಂದೇ ಎಲ್ಲರೂ ಪರಿಗಣಿಸುತ್ತಾರೆ.