ಶಾಲೆ ಎಂದರೆ ಅದೊಂದು ಕಟ್ಟಡ ರೂಪದಲ್ಲಿರುತ್ತದೆ ಎಂದು ನಮಗೆಲ್ಲಾ ತಿಳಿದಿದೆ. ಆದರೆ ಬಾಂಗ್ಲಾದೇಶದಲ್ಲಿ ತೇಲುವ ಶಾಲೆಗಳಿವೆ. ಅಂದರೆ ನೀರಿನ ಮೇಲೆ ತೇಲುವ ದೋಣಿಗಳಲ್ಲಿ ಪಾಠ ಮಾಡಲಾಗುತ್ತದೆ.
2/ 8
ಬಾಂಗ್ಲಾದೇಶದ ವಾಯುವ್ಯದಲ್ಲಿರುವ ಅಟ್ರೈ ನದಿಯ ದಡದಲ್ಲಿ ಎತ್ತರದ ಹುಲ್ಲಿನಲ್ಲಿ ಸಣ್ಣ ಸಣ್ಣ ಗುಡಿಸಿಲಿನಂತೆ ಕಾಣುವ ಅದೆಷ್ಟೋ ಶಾಲೆಗಳನ್ನು ದೋಣಿಯ ಮೇಲೆ ಕಟ್ಟಲಾಗಿದೆ. ಮಕ್ಕಳಿಗೆ ಇದರೊಳಗೇ ಪಾಠ ಮಾಡಲಾಗುತ್ತದೆ.
3/ 8
ದೋಣಿಯ ಒಳಭಾಗವು ಕಿರಿದಾದ ಬೆಂಚುಗಳಿಂದ ಕೂಡಿರುತ್ತದೆ. ಒಟ್ಟು 29 ವಿದ್ಯಾರ್ಥಿಗಳನ್ನು ಒಂದು ದೋಣಿಯಲ್ಲಿ ಕೂರಿಸುತ್ತಾರೆ. ಇನ್ನೂ ಹೆಚ್ಚಿನ ತೂಕವನ್ನು ಈ ದೋಣಿಗಳು ತಾಳುವುದಿಲ್ಲವಂತೆ.
4/ 8
ಬಾಂಗ್ಲಾದೇಶದ ಶಿಕ್ಷಕರಿಗೆ ಸಮಸ್ಯೆ ಇದೆ. ಇತರ ಶಿಕ್ಷಕರಂತೆಯೇ ಅವರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಶಾಲೆಗಳಲ್ಲೂ ಹಲವಾರು ಮೂಲಭೂತ ಸೌಕರ್ಯಗಳ ಕೊರತೆ ಇರುತ್ತದೆ. ಹಣಕಾಸಿನ ನಿರ್ಬಂಧಗಳು, ಹಳತಾದ ಪಠ್ಯಪುಸ್ತಕಗಳು, ಕಿಕ್ಕಿರಿದ ತರಗತಿಗಳು ಅದರಲ್ಲೂ ಮಳೆಗಾಲ ಬಂದರೆ ಇವರಿಗಿರುವ ಕಷ್ಟ ಅಷ್ಟಿಷ್ಟಲ್ಲ.
5/ 8
ವಿದ್ಯಾರ್ಥಿಗಳು ಆಗಾಗ ಶಾಲೆಗೆ ಹೋಗಲು ನಿರಾಕರಿಸುತ್ತಾರಂತೆ. ಆಗ ಸ್ಥಳೀಯ ಚಾರಿಟಿಯೊಂದು ಬೋಟ್ಗಳಲ್ಲಿ ಶಾಲೆಗಳ ರೂಪದಲ್ಲಿ ವಿದ್ಯಾರ್ಥಿಗಳ ಬಳಿಗೇ ಹೋಗಿ ಪಾಠ ಮಾಡಲಾಗುತ್ತದೆಯಂತೆ. ಇಲ್ಲಿ ಮಹಿಳೆಯರಿಗೂ ಶಿಕ್ಷಣ ನೀಡಲಾಗುತ್ತದೆ.
6/ 8
ಒಟ್ಟು 23 ತೇಲುವ ಶಾಲೆಗಳು ಅಲ್ಲಿ ಯಾವಾಗಲೂ ಇರುತ್ತವೆಯಂತೆ. ಪ್ರತಿದಿನ ಬೆಳಿಗ್ಗೆ ದೋಣಿ ವಿದ್ಯಾರ್ಥಿಗಳನ್ನು ಎತ್ತಿಕೊಂಡು ನದಿಯ ಉದ್ದಕ್ಕೂ ಹೋಗುತ್ತದೆ. ಬೆಂಗಾಲಿ, ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಹೀಗೆ ಬೇರೆ ಬೇರೆ ವಿಷಯ ಕಲಿಸಲಾಗುತ್ತದೆ.
7/ 8
ಶಾಲಾ ಸಮಯ ಮುಗಿದ ತಕ್ಷಣ ಅವರನ್ನು ದಡಕ್ಕೆ ತಂದು ಬಿಡಲಾಗುತ್ತದೆ. ವಿದ್ಯಾರ್ಥಿಗಳು ಈ ಶಾಲೆಯನ್ನು ಇಷ್ಟಪಡುತ್ತಾರೆ.
8/ 8
ಈ ಶಾಲೆಗಳ ಒಳಗೆ ಎಲ್ಲಾ ರೀತಿಯ ಸೌಕರ್ಯಗಳೂ ಇರುತ್ತವೆ. ಕಂಪ್ಯೂಟರ್ ತರಗತಿ ಹಾಗೂ ರೇಡಿಯೋ ತರಗತಿಗಳನ್ನೂ ಸಹ ಇಲ್ಲಿ ನಡೆಸಲಾಗುತ್ತದೆ.