ತಿಂಗಳಿಗೊಮ್ಮೆಯಾದರೂ ಬೇರೆ ಬೇರೆ ಉದ್ಯೋಗ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗೆ ಕರೆಸಬೇಕು. ಪ್ರತಿಯೊಂದು ವಿದ್ಯಾರ್ಥಿಗೂ ಸಂಪನ್ಮೂಲ ವ್ಯಕ್ತಿಗಳ ಅನುಭವದ ಅಂಶಗಳನ್ನು ತಿಳಿಸಿಕೊಡಬೇಕು. ಯಾವ ಕ್ಷೇತ್ರದಲ್ಲಿ ವಿದ್ಯಾರ್ಥಿ ಪರಿಣಿತಿ ಹೊಂದಿದ್ದಾನೆ ಅಥವಾ ಹೊಂದಿದ್ದಾಳೆ ಎಂಬುದನ್ನು ಈ ತಂಡ ಗುರುತಿಸಿ ಅವರಿಗೆ ತರಬೇತಿ ನೀಡಬೇಕು.