Agriculture Education: ಕೃಷಿ ಶಿಕ್ಷಣದಲ್ಲೂ ಇದೆ ಉತ್ತಮ ಅವಕಾಶ! ಉದ್ಯೋಗ, ಸಂಬಳವೂ ಸಖತ್
ಕೃಷಿ ಮುಂದಿನ ಪರಿಸರದ ವಿಕಸನಕ್ಕಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ. ಆದ್ದರಿಂದ, ಕೃಷಿಯು ಕೇವಲ ಕೃಷಿಗೆ ಸೀಮಿತವಾಗಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಹಾಗೇ ನಿಮ್ಮ ಹತ್ತಿರದ ಜನರಿಗೂ ಈ ಕುರಿತು ಮಾಹಿತಿಯನ್ನು ನೀವೇ ನೀಡಬೇಕಾಗುತ್ತದೆ.
ನಮ್ಮ ದೇಶಕ್ಕೆ ಕೃಷಿ ಶಿಕ್ಷಣ ಬಹಳ ಮುಖ್ಯ. ಕೃಷಿ ಶಿಕ್ಷಣವು ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಜಾನುವಾರುಗಳನ್ನು ಸಾಕುವುದರ ಮೂಲಭೂತ ಅಂಶಗಳನ್ನು ಕಲಿಸುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತದೆ ಕೇವಲ ಈ ಎರಡೇ ವಿಷಯವನ್ನು ಒಳಗೊಂಡಿರುವುದಿಲ್ಲ.
2/ 7
ಹಾಗಾದರೆ ಯಾವೆಲ್ಲಾ ವಿಷಯವನ್ನು ನೀವಿಲ್ಲಿ ಕಲಿಯಬಹುದು ಎಂಬ ವಿಚಾರವನ್ನು ತಿಳಿಸುತ್ತಿದ್ದೇವೆ ನೋಡಿ. ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನವು ವಿವಿಧ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತದೆ.
3/ 7
ಮುಂದಿನ ಪರಿಸರದ ವಿಕಸನಕ್ಕಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ. ಆದ್ದರಿಂದ, ಕೃಷಿಯು ಕೇವಲ ಕೃಷಿಗೆ ಸೀಮಿತವಾಗಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಹಾಗೇ ನಿಮ್ಮ ಹತ್ತಿರದ ಜನರಿಗೂ ಈ ಕುರಿತು ಮಾಹಿತಿಯನ್ನು ನೀವೇ ನೀಡಬೇಕಾಗುತ್ತದೆ.
4/ 7
ರೈತರ ಸುಸ್ಥಿರ ಜೀವನವನ್ನು ಇನ್ನಷ್ಟು ಭದ್ರಗೊಳಿಸಲು ಸುಲಭವಾಗುವ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ. ಮುಂದಿನ ಪೀಳಿಗೆಗೂ ಕೃಷಿ ಅತ್ಯಗತ್ಯ ಆದರೆ ಎಲ್ಲರೂ ಕಂಪನಿ ಕೆಲಸಗಳನ್ನು ಆಧರಿಸಿ ಬಿಟ್ಟರೆ ತಿನ್ನಲು ಅನ್ನವಿಲ್ಲದ ಪರಿಸ್ಥಿತಿ ಎದುರಾಗುತ್ತದೆ. ಇದು ಹಾಗಾಗದ ಹಾಗೆ ತಡೆಯುತ್ತದೆ.
5/ 7
ಸಮಾಜದ ಆರ್ಥಿಕತೆ ಮತ್ತು ಯೋಗಕ್ಷೇಮದಲ್ಲಿ ಕೃಷಿಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಕೃಷಿಯು ಆಹಾರ ಮತ್ತು ಕಚ್ಚಾ ವಸ್ತುಗಳನ್ನು ಒದಗಿಸುವುದು ಮಾತ್ರವಲ್ಲದೆ ಜನಸಂಖ್ಯೆಯ ಗಣನೀಯ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ನೀಡುತ್ತದೆ.
6/ 7
ಆದ್ದರಿಂದ, ತಂತ್ರಜ್ಞಾನಗಳು ಮತ್ತು ನಿರ್ವಹಣಾ ತಂತ್ರಗಳಲ್ಲಿನ ಇತ್ತೀಚಿನ ಪ್ರಗತಿಗಳೊಂದಿಗೆ ಕೃಷಿ ಶಿಕ್ಷಣ ವ್ಯವಸ್ಥೆಯೂ ವಿದ್ಯಾರ್ಥಿಗಳಿಗೆ ಮುಖ್ಯವಾಗಿದೆ. ಕೃಷಿ ವಿಶ್ವವಿದ್ಯಾಲಗಳೇ ನಿರ್ಮಾಣವಾಗಿ ವಿದ್ಯಾರ್ಥಿಗಳಿಗೆ ಈ ಕುರಿತು ಶಿಕ್ಷಣ ನೀಡುತ್ತಿದೆ.
7/ 7
ಭಾರತ ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳಿವೆ. ಇನ್ನಷ್ಟು ವಿದ್ಯಾರ್ಥಿಗಳು ಕೃಷಿಯತ್ತ ಒಲವು ತೋರಿಸಿದರೆ ಇನ್ನೂ ಹೆಚ್ಚಿನ ಒಳಿತಾಗುತ್ತದೆ.